19th April 2024
Share

TUMAKURU:SHAKTHIPEETA FOUNDATION

ನೆಲಮಂಗಲ ಟೋಲ್ ನಿಂದ ತುಮಕೂರು ವರೆಗೆ ಹಾಲಿ ನಾಲ್ಕು ಪಥದ ರಸ್ತೆ ಇದೆ. ಪ್ರಸ್ತುತ 6 ಪಥಧ ರಸ್ತೆ ಮಾಡಲು ಸಿದ್ಧತೆ ನಡೆದಿದೆ. ಟೋಲ್ ಸಂಗ್ರಹಾಗಾರರ ಕಿತಾಪತಿಯಿಂದ ವಿಳಂಭವಾಗಿದೆ. ಈ ಕಿತ್ತಾಟದ ಮಧ್ಯೆ ರಸ್ತೆ ಹಾಳಾಗಿದೆ. ಪ್ರತಿ ದಿನ ನೂರಾರು ವಾಹನಗಳ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಅವರೆಲ್ಲಾ ಎಷ್ಟು ಬೇಕೋ ಅಷ್ಟು ಶಾಪವನ್ನು ಸಂಸದರಿಗೆ ಹಾಕುತ್ತಿದ್ದಾರೆ.

ಈ ಮಧ್ಯೆ ಉನ್ನತ ಮಟ್ಟದ ಅಧಿಕಾರಿ ಚಿಂತಕರೊಬ್ಬರು 8 ಪಥದ ರಸ್ತೆ ಮಾಡಲು ಸಲಹೆ ನೀಡಿದ್ದಾರೆ. ತುಮಕೂರು ನಗರದ ಶಾಸಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಈ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡುತ್ತಿದ್ದಾರೆ. ಕಳೆದ ದಿಶಾ ಸಭೆಯಲ್ಲಿ ಈ ಬಗ್ಗೆ ವ್ಯಾಪಕವಾದ ಚರ್ಚೆ ನಡೆಯಿತು.

ನಾನು ಭಾಗವಹಿಸಿದ್ದ ಇಂಜಿನಿಯರ್ ಒಬ್ಬರಿಗೆ ಈ ಯೋಜನೆ ಬಗ್ಗೆ ಪಿಪಿಟಿ ಸಿದ್ಧಪಡಿಸಿಕೊಂಡು ಬನ್ನಿ ಎಂದು ಹೇಳಿದ್ದೆ. ಅವರು ಸಹ ಸಂಸದರು ಹೇಳಿದ ದಿವಸ ಬರುವುದಾಗಿ ತಿಳಿಸಿದ್ದಾರೆ. ಈಗ ನೀತಿ ಸಂಹಿತೆ ಅಡ್ಡ ಬರಲಿದೆ. ನಂತರ ಚರ್ಚೆ ಮಾಡಬೇಕೋ ಅಥವಾ ಈಗಲೇ ಚರ್ಚೆ ಮಾಡಬೇಕೋ ಎಂಬ ಆಲೋಚನೆ ಇದೆ.

ನಗರದ ಶಾಸಕರ ಪ್ರಕಾರ ಸಭೆ ಮಾಡಿದರೆ ನೀತಿ ಸಂಹಿತೆ ಅಡ್ಡಬರುತ್ತದೆ. ಯೋಜನೆ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿದರೆ ಯಾವ ನೀತಿ ಸಂಹಿತೆ ಇದೆ ಸಾರ್ ಎಂಬ ಚಾಟಿ ಬೀಸಿದರು ನಮ್ಮ ಯುವ ಶಾಸಕರು. ಸೋಮವಾರದಿಂದ ಲೋಕಸಭಾ ಅಧಿವೇಶನ ಇದೆ. ಅಷ್ಟರೊಳಗೆ ಇಲ್ಲಿನ ಅಧಿಕಾರಿಗಳ ಜೊತೆ ಅಥವಾ ದೆಹಲಿಯ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಈ ಬಗ್ಗೆ ಗಂಬೀರವಾಗಿ ಚರ್ಚೆ ಮಾಡುವ ಆಲೋಚನೆ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರದ್ದಾಗಿದೆ.

ಒಬ್ಬ ಪೋಲೀಸ್ ಅಧಿಕಾರಿಯವರೊಬ್ಬರು ನನಗೆ ಸಮಯ ಸಿಕ್ಕಾಗಲೆಲ್ಲಾ  ಈ ರಸ್ತೆ ಬಗ್ಗೆ ವಿಷಯ ಪ್ರಸ್ತಾಪ ಮಾಡುತ್ತಿದ್ದಾರೆ. ನಾನು ಅವರಿಗೆ ಹೇಳಿದೆ ನಾನು ಸಹ ಶಕ್ತಿಪೀಠ ಕ್ಯಾಂಪಸ್ ಗೆ ಈ ರಸ್ತೆಯಲ್ಲಿ ಹೋಗುತ್ತಿದ್ದೇನೆ. ಗುಂಡಿಗಳ ಬಗ್ಗೆ ಹಲವಾರು ಭಾರಿ ಅಧಿಕಾರಿಗಳೊಂದಿಗೆ ಚರ್ಚೆ ಮಾಡುತ್ತಿದ್ದೇನೆ. ಇಬ್ಬರ ಜಗಳದಿಂದ ಈ ತೊಂದರೆ ಎಂದರೂ ಯಾರು ಕೇಳುವ ಮನಸ್ಸಿಲ್ಲ.

ಪಿಪಿಟಿ ಯಲ್ಲಿ ಏನು ಇರಬೇಕು?

  1. ನೆಲಮಂಗಲ ಟೋಲ್ ನಿಂದ 6 ಪಥದ ರಸ್ತೆ ಕಾಮಗಾರಿ ಮಾಹಿತಿ.
  2. ನೆಲಮಂಗಲ ಟೋಲ್ ನಿಂದ 8 ಪಥದ ರಸ್ತೆ ಮಾಡಿದರೆ ಆಗುವ ಸಾಧಕ-ಭಾಧಕಗಳ ಮಾಹಿತಿ.
  3. ತುಮಕೂರು ಔಟರ್ ರಿಂಗ್ ರೋಡ್ ಪರಿಕಲ್ಪನೆ.
  4. ಬೆಂಗಳೂರು ಫೆರಿ ಫೆರಿಯಲ್ ರಿಂಗ್ ರೋಡ್ ಮಾಹಿತಿ.
  5. ಕ್ಯಾತ್ಸಂದ್ರ ತಿರುವಿನ ಬಳಿ ಅಪಘಾತದ ಮಾಹಿತಿ.
  6. ಜಗನ್ನಾಥಪುರದ ಅಂಡರ್ ಪಾಸ್.
  7. ನನೆಗುದಿಗೆ ಬಿದ್ದಿರುವ ಅಕ್ಕ ತಂಗಿ ಕೆರೆ ಪಕ್ಕದಲ್ಲಿ ಸರ್ವೀಸ್ ರಸ್ತೆ.
  8. ತುಮಕೂರು ನಗರದ ಮಾರ್ಗ ಹೇಗೆ ಬರಲಿದೆ.
  9. ಇನ್ನೂ ಯಾವುದಾದರೂ ವಿಷಯ ಸೇರ್ಪಡೆ ಮಾಡಬೇಕಿದ್ದರೆ ಸಲಹೆ ನೀಡಲು ಮನವಿ.