22nd December 2024
Share

ಪಲ್ಯೂಷನ್ ಫ್ರೀ ಆಗುವುದೇ:ವಸಂತ ನರಸಾಪುರದ ಕೈಗಾರಿಕಾ ವಲಯ?

TUMAKURU:SHAKTHIPEETA FOUNDATION

ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಯ ನಿರ್ಣಯದಂತೆ ತುಮಕೂರು ನಗರದ ವಸಂತನರಸಾಪುರದ ಕೈಗಾರಿಕಾ ಪ್ರದೇಶದ ವ್ಯಾಪ್ತಿಯನ್ನು ಪಲ್ಯೂಷನ್ ಫ್ರೀ ಕೈಗಾರಿಕಾ ವಲಯ ಮಾಡಲು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಶ್ರೀ ನಾಗೇಶ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಹತ್ವದ ರೂಪುರೇಷೆ ನಿರ್ಧರಿಸಲಾಗಿದೆ.

ಮೊದಲ ಹಂತದಲ್ಲಿ 3500 ಎಕರೆ ಮತ್ತು ಎರಡನೇ ಹಂತದಲ್ಲಿ 10000 ಎಕರೆ ಪ್ರದೇಶದ ಬಗ್ಗೆ ವ್ಯಾಪಕ ಹಸಿರು ಯೋಜನೆಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಮುಂದಿನ ಒಂದು ತಿಂಗಳ ಒಳಗೆ ಮುಂದಿನ 15 ವರ್ಷದ ಅವಧಿಯ ಮಾಸ್ಟರ್ ಪ್ಲಾನ್ ಮಾಡಲು ಭಾಗವಹಿಸಿದ್ದ ಎಲ್ಲಾ ಇಲಾಖೆಗಳ ಅಧಿಕಾರಿಗಳು ನಿರ್ಣಯ ಕೈಗೊಂಡಿದ್ದಾರೆ.

ಗ್ರಾಮ ಪಂಚಾಯಿತಿ ಇಡಿಓ ರವರಿಂದ ಆರಂಭಿಸಿ ಅರಣ್ಯ ಇಲಾಖೆಗಳ ಡಿ.ಎಫ್.ಓ ರವರು ಭಾಗವಹಿಸಿ ಮಹತ್ವದ ವಿಚಾರಗಳ ಬಗ್ಗೆ ಸುಧೀರ್ಘವಾಗಿ ಚರ್ಚೆ ನಡೆಸಿದರು. ಕೆ.ಐ.ಎ.ಡಿ.ಬಿ ಅಭಿವೃದ್ಧಿ ಅಧಿಕಾರಿ ರವರು ಕೈಗಾರಿಕಾ ವಲಯದಲ್ಲಿ ಕೈಗೊಳ್ಳ ಬಹುದಾದ ಯೋಜನೆಗಳ ಬಗ್ಗೆ ವಿಷಯ ಮಂಡಿಸಿದರು. ಪರಿಸರ ಇಲಾಖೆಯ ಅಧಿಕಾರಿಗಳ ಮೇಲೆ ಭಾಗವಹಿಸಿದ್ದ ಬಹುತೇಕರು ಮುಗಿ ಬಿದ್ದಿದ್ದು ವಿಶೇಷವಾಗಿತ್ತು.

ಈ ಸಭೆಯಲ್ಲಿ ಕೈಗಾರಿಕಾ ಅಸೋಯೇಷನ್ ಅಧ್ಯಕ್ಷರಾದ ಶ್ರೀ ಶಿವಶಂಕರ್, ಶ್ರೀ ಹರೀಶ್, ಶ್ರೀ ಸತ್ಯನಾರಾಯಣ ಮತ್ತು ಶ್ರೀ ರಾಮಮೂರ್ತಿಯವರು ಭಾಗವಹಿಸಿ ಸಲಹೆ ನೀಡಿದರು.ರಾಜ್ಯ ಮಟ್ಟದ ದಿಶಾ ಸಮಿತಿಯ ಸದಸ್ಯ ಕುಂದರನಹಳ್ಳಿ ರಮೇಶ್ ಭಾಗವಹಿಸಿ ವಿಚಾರ ವಿನಿಮಯ ಮಾಡಿಕೊಂಡರು. ಶ್ರೀ ವೇದಾನಂದಮೂರ್ತಿ, ಶ್ರೀ ಗುರುಸಿದ್ಧರಾಧ್ಯ ಇನ್ನೂ ಮುಂತಾದವರು ವಿವಿಧ ಸಲಹೆ ನೀಡಿದರು.

ಸಭೆಯ ಅಧ್ಯಕ್ಷರು ಈ ಸಭೆಯಲ್ಲಿ ಯಾರೂ ಭಾಷಣ ಮಾಡದೆ ಪಾಯಿಂಟ್ ಟು ಪಾಯಿಂಟ್ ಚರ್ಚೆಗೆ ಅವಕಾಶ ಕಲ್ಪಿಸಿದ್ದು ವಿಶೇಷವಾಗಿತ್ತು.