TUMAKURU:SHAKTHIPEETA FOUNDATION
ಸಾಮಾಜಿಕ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿಯವರಾದ ಶ್ರೀ ನಾಗರಾಜ್ ರವರ ಅಧ್ಯಕ್ಷತೆಯಲ್ಲಿ ತುಮಕೂರು ಜಿಲ್ಲೆಯ 10 ತಾಲ್ಲೋಕುಗಳ ಅಧಿಕಾರಿಗಳ ಸಭೆ ನಡೆಸಿ ದಿಶಾ ಸಮಿತಿಯ ನಿರ್ಣಯ ಮತ್ತು ಕರ್ನಾಟಕ ಜೀವ ವೈವಿದ್ಯ ಮಂಡಳಿಯ ಅಧ್ಯಕ್ಷರ ಪತ್ರದ ಬಗ್ಗೆ ರೂಪುರೇಷೆ ನಿರ್ಧರಿಸಲು ಸಭೆ ನಡೆಸಲಾಗಿದೆ.
ಈ ಸಭೆಯಲ್ಲಿ ಜಿಲ್ಲೆಯ ಎ.ಸಿ.ಎಫ್ ರವರು, 10 ತಾಲ್ಲೋಕಿನ ಆರ್.ಎಫ್.ಓ ರವರು, ರಾಜ್ಯ ಮಟ್ಟದ ದಿಶಾ ಸಮಿತಿಯ ಸದಸ್ಯರಾದ ಕುಂದರನಹಳ್ಳಿ ರಮೇಶ್ ರವರು ಮತ್ತು ಪಾರಂಪರಿಕ ವೈಧ್ಯ ಶ್ರೀ ಗುರುಸಿದ್ಧಾರಾಧ್ಯರವರು ಭಾಗವಹಿಸಿದ್ದರು.
ದಿಶಾ ಸಮಿತಿ ನಿರ್ಣಯ.
ದಿನಾಂಕ:06.11.2021 ರಂದು ಶ್ರೀ ಜಿ.ಎಸ್.ಬಸವರಾಜ್ ರವರ ಅಧ್ಯಕ್ಷತೆಯಲ್ಲಿ ನಡೆದ ತುಮಕೂರು ಜಿಲ್ಲಾ ದಿಶಾ ಸಮಿತಿಯ ಸಭೆಯಲ್ಲಿ ಬಯೋ ಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿಗಳ ಕರ್ತವ್ಯದ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಸಭೆ ನಡವಳಿಕೆ ಕೆಳಕಂಡಂತಿದೆ.
ಮಾನ್ಯ ಸದಸ್ಯರಾದ ಶ್ರೀ ಕುಂದರನಹಳ್ಳಿ ರಮೇಶ್ ರವರು ಮಾತನಾಡಿ ಬಯೋ ಡೈವರ್ಸಿಟಿ ಮ್ಯಾನೇಜ್ ಕಮಿಟಿಗಳು ನಿಷ್ಕ್ರಿಯವಾಗಿರುವುದಾಗಿ ಆಕ್ಷೇಪಿಸಿದರಲ್ಲದೆ ಕಾರ್ಯಕ್ರಮಗಳ ಕುರಿತು ದಿಶಾ ಸಮಿತಿಗೆ ಮಾಹಿತಿ ಒದಗಿಸುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ತಿಳಿಸಿದರು.
ಪ್ರತಿಯಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿಯವರು ಮಾತನಾಡಿ, ಸಮಿತಿಗಳನ್ನು ರಚಿಸಲಾಗಿದೆಯೆಂದೂ, ಯಾವುದೇ ಕಾರ್ಯಕ್ರಮ ಇರುವುದಿಲ್ಲವೆಂದು ಸಭೆಗೆ ಮಾಹಿತಿ ನೀಡಿದರು. ಮಾನ್ಯ ಸದಸ್ಯರು ಮುಂದುವರೆದು ಮಾತನಾಡಿ, ಕೇಂದ್ರ ಸರ್ಕಾರವು ಸಮಿತಿಗಳ ರಚನೆಗೆ ಮತ್ತು ಕಾರ್ಯಕ್ರಮಗಳಿಗೆ ಸಾಕಷ್ಟು ಹಣ ನೀಡಿದೆ. ಆದರೆ ಅಧಿಕಾರಿಗಳು ಗೊತ್ತಿಲ್ಲವೆಂದು ಹೇಳುತ್ತಾರೆ ಎಂದು ಸಭೆಯ ಗಮನಕ್ಕೆ ತಂದರು. ಸಂಸದರು ಈಗಾಗಲೇ ಪತ್ರ ಬರೆದು ಸೂಚಿಸಿದ್ದಾರೆ, ಹಾಗೂ ಈ ಯೋಜನೆ/ ಕಾರ್ಯಕ್ರಮಗಳನ್ನು ಚುರುಕುಗೊಳಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ಈ ಸಂಬಂಧ ಪರಿಸರ ಆಸಕ್ತರ, ನಾಟಿ ವೈಧ್ಯರು, ಹಕೀಮರು ಮತ್ತು ಪಾರಂಪರಿಕ ವೈಧ್ಯರ, ನಾಲೇಡ್ಜಬಲ್ ಪರ್ಸನ್ ರವರ, ಗುಂಪು ರಚಿಸಿ, ಆಸಕ್ತಿ ವಹಿಸಿದರೆ ಜಿಲ್ಲೆಯಲ್ಲಿ ಜೀವವೈವಿಧ್ಯ ಪಾರ್ಕ್‍ಗಳ ರಚನೆಗೆ ಅನುಕೂಲವಾಗುತ್ತದೆ.
ಇಲ್ಲವಾದಲ್ಲಿ ಮುಂದಿನ 30 ವರ್ಷಗಳಲ್ಲಿ ಭೂಮಿ ಬರಡಾಗಿಬಿಡುತ್ತದೆ, ಪ್ಯಾರೀಸ್ ಒಪ್ಪಂದ ಬರಿ ಕಾಗದಲ್ಲಿ ಮಾತ್ರ ಇರಲಿದೆ ಎಂದು ಅಸಮಧಾನ ವ್ಯಕ್ತಪಡಿಸಿದರಲ್ಲದೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಯವರು ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹಾಗೂ ಈ ಕುರಿತು ಮತ್ತೊಂದು ಸಭೆ ನಡೆಸಬೇಕೆಂದು ತಿಳಿಸಿದರು.
ಜಿಲ್ಲಾಧಿಕಾರಿಗಳು ಮಾತನಾಡಿ ಸಂಸದರು ಸೂಚಿಸಿರುವ ವಿಷಯಗಳ ಬಗ್ಗೆ ಸ್ಪಷ್ಠ ಮಾಹಿತಿಯನ್ನು ಒಂದು ತಿಂಗಳೊಳಗಾಗಿ ನೀಡಲು ಅಧಿಕಾರಿಗಳಿಗೆ ಸೂಚಿಸಿದರು. ನಾನು ಈಗಾಗಲೇ ಎಲ್ಲಾ ಉಪವಿಭಾಗಾಧಿಕಾರಿಗಳು ಮತ್ತು ತಹಶೀಲ್ಧಾರ್ ರವರಿಗೆ ಪತ್ರ ಬರೆದು ಊರಿಗೊಂದು ಬಯೋಡೈವರ್ಸಿಟಿ ಪಾರ್ಕ್ ಗೆ ಜಮೀನು ಗುರುತಿಸಲು ಸೂಚಿಸಿದ್ದೇನೆ ಎಲ್ಲಾ ಅಧಿಕಾರಿಗಳು ಕಾಲಮಿತಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು.
ಮಾನ್ಯ ಅಧ್ಯಕ್ಷರು ಮಾತನಾಡಿ ಜನತಾ ಜೀವ ವೈವಿಧ್ಯ ದಾಖಾಲಾತಿಯ ಎಲ್ಲಾ ಅಂಶಗಳ ಬಗ್ಗೆ 352 ಬಿಎಂಸಿಗಳ ಮಟ್ಟದಲ್ಲೂ ವಿಶೇಷ ಗಮನ ಹರಿಸಲು ಸೂಚಿಸಿದರು.
ಮಾನ್ಯ ಸದಸ್ಯರಾದ ಶ್ರೀ ಕುಂದರನಹಳ್ಳಿ ರಮೇಶ್‍ರವರು ಮಾತನಾಡಿ ಅರಣ್ಯ ಇಲಾಖೆ ವತಿಯಿಂದ ಮಕ್ಕಳಿಗೆ ಸಸಿಗಳನ್ನು ನೀಡುವ ಕುರಿತು ಬಿಎಂಸಿ ಸಮೀಕ್ಷೆ ಮಾಡಬೇಕೆಂದು ಉಪ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ತಿಳಿಸಿದರು.
[ಜಿಲ್ಲಾಧಿಕಾರಿಗಳು/ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು & ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಸಾಮಾಜಿಕ ಅರಣ್ಯ ವಿಭಾಗ, ತುಮಕೂರು]