9th October 2024
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೋಕಿನ ಬಿದರೆಹಳ್ಳ ಕಾವಲ್ ನಲ್ಲಿ ನಿರ್ಮಾಣವಾಗುತ್ತಿರುವ ಹೆಚ್.ಎ.ಎಲ್ ಘಟಕಕ್ಕೆ  ಹೆಚ್ಚುವರಿ ಜಮೀನಿನ ಅಗತ್ಯವಿದ್ದು ಅವರು ಈಗಾಗಲೇ  ಗುರುತಿಸಿರುವ 529 ಎಕರೆ ಜಮೀನಿಗೆ ಬದಲಾಗಿ, ಇತರೆ ಜಮೀನು ನೀಡಲು ಉದ್ದೇಶಿಸಲಾಗಿದೆ.

ಈ ಹಿನ್ನಲೆಯಲ್ಲಿ ದಿನಾಂಕ:04.10.2021 ರಂದು ಮೂಲಭೂತ ಸೌಕರ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಹೆಚ್.ಎ.ಎಲ್ ಘಟಕದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ.

ಕಂದಾಯ ಇಲಾಖೆಯ ಸಚಿವರಾದ ಶ್ರೀ ಆರ್.ಅಶೋಕ್ ರವರು ಸಹ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ತುಮಕೂರು ಜಿಲ್ಲಾ ಮಟ್ಟದ ದಿಶಾ ಸಭೆಯಲ್ಲಿಯೂ ಚರ್ಚೆ ನಡೆಸಲಾಗಿದೆ. ಗುಬ್ಬಿಯಲ್ಲಿ ಅಧಿಕಾರಿಗಳ ಮಟ್ಟದ ಸಭೆಯನ್ನು ನಡೆಸಲಾಗಿದೆ. ಕೂಡಲೇ ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳಲು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮೂಲಭೂತ ಸೌಕರ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಾದ ಶ್ರೀ ಬಿ.ಹೆಚ್.ಅನಿಲ್ ಕುಮಾರ್ ರವರೊಂದಿಗೆ (26.11.2021) ಬಗ್ಗೆ ವಿಚಾರ ವಿನಿಮಯ ಮಾಡಲಾಯಿತು.

ಸಭೆಯ ನಿರ್ಣಯದಂತೆ ಎರಡು ಜಮೀನುಗಳ ಬಗ್ಗೆ ಎಲ್ಲಾ ಅಗತ್ಯ ಸಾಧಕ-ಭಾಧಕಗಳ ಬಗ್ಗೆ ಗುಬ್ಬಿ ತಹಶೀಲ್ಧಾರ್ ರವರು ಜಿಲ್ಲಾಧಿಕಾರಿಗಳ ಮೂಲಕ ಹೆಚ್.ಎ.ಎಲ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ನಂತರ ಹೆಚ್.ಎ.ಎಲ್ ರವರ ಅಗತ್ಯಕ್ಕೆ ತಕ್ಕಂತೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

 ಈ ಬಗ್ಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರಾದ ಶ್ರೀ ರಾಕೇಶ್ ಸಿಂಗ್ ರವರು ವಿಶೇಷ ಆಸಕ್ತಿ ವಹಿಸಿದ್ದಾರೆ.  ಆದ್ದರಿಂದ ತಾವೂ ಜಿಲ್ಲಾಧಿಕಾರಿಗಳಿಂದ ವರದಿ ತರಿಸಿಕೊಂಡು ಹೆಚ್.ಎ.ಎಲ್ ಘಟಕದ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲು ಸಂಸದರು ಸಲಹೆ ನೀಡಿದ್ದಾರೆ.

ರೈತರ ಜಮೀನು ನೀಡಲು ಸಾಧ್ಯಾವಿಲ್ಲ ಬದಲಿಗೆ ಎಫ್.ಸಿ ಆಕ್ಟ್ ಅಡಿ ಜಮೀನು ನೀಡುವ ಬಗ್ಗೆ ದೆಹಲಿಯಲ್ಲಿ ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ರವರ ಜೊತೆ ಸಮಾಲೋಚನೆ ನಡೆಸುವುದಾಗಿಯೂ ಬಸವರಾಜ್ ರವರು ತಿಳಿಸಿದ್ದಾರೆ. ಅವರ ಬಳಿಯೂ ರೈತರ ನಿಯೋಗ ಹೋಗಿ ಚರ್ಚಿಸಿರುವ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡರು.

 ತುಮಕೂರು ಜಿಲ್ಲೆಗೆ ಸಂಭಂಧಿಸಿದ ರೈಲ್ವೇ ಯೋಜನೆಗಳು, ಏರ್ ಪೋರ್ಟ್. ಏರ್ ಕಾರ್ಗೋ, ಏರ್ ಸ್ಟ್ರಿಪ್, ಕ್ರೀಡಾ ಗ್ರಾಮ, ನ್ಯಾಷನಲ್ ಇನ್ಪ್ರಾಸ್ಟಚ್ಚರ್ ಪೈಪ್ ಲೈನ್ ಯೋಜನೆಗಳು ಮತ್ತು ಪಿಪಿಪಿ ಮಾದರಿ ಯೋಜನೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಚುನಾವಣೆ ನೀತಿ ಸಂಹಿತೆ ಪೂರ್ಣಗೊಂಡ ನಂತರ ಸಭೆ ನಡೆಸುವುದಾಗಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯರಾದ ಕುಂದರನಹಳ್ಳಿ ರಮೇಶ್ ಇದ್ದರು.

ಗುಬ್ಬಿ ತಹಶೀಲ್ಧಾರ್, ತುಮಕೂರು ಉಪವಿಭಾಗಾಧಿಕಾರಿ ಮತ್ತು ತುಮಕೂರು ಜಿಲ್ಲಾಧಿಕಾರಿಗಳ ಅಂಗಳದಲ್ಲಿದೆ.ಅವರು ಶೀಘ್ರವಾಗಿ ವರದಿ ಸಲ್ಲಿಸ ಬೇಕಿದೆ. ಪ್ರಧಾನಿ ಶ್ರೀ ನರೇಂದ್ರ ಮೋದಿಯವರೇ ಈ ಯೋಜನೆಯ ಬಗ್ಗೆ ಪಿಎಂಓ ಕಚೇರಿಯಿಂದ ನೇರವಾಗಿ ಮಾನಿಟರಿಂಗ್ ಮಾಡುತ್ತಿರುವ ಹಿನ್ನಲೆಯಲ್ಲಿ ಅವರೆಲ್ಲರೂ ಜರೂರಾಗಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ಇದೆ.