22nd November 2024
Share

TUMAKURU:SHAKTHIPEETA FOUNDATION

ಹೆಚ್ಚುವರಿ ಜಮೀನು ಜಿಲ್ಲಾಧಿಕಾರಿ ಅಂಗಳದಲ್ಲಿ ಇಲ್ಲ. ಈಗ ಹೆಚ್.ಎ.ಎಲ್ ಅಂಗಳದಲ್ಲಿ ಇದೆ. ನಾನೂ ನಿನ್ನೆ ತಪ್ಪು ಬರೆದೆ ದಯವಿಟ್ಟು ಕ್ಷಮಿಸಿ. ಆದರೇ ಈ ತಪ್ಪಿಗೆ ಕಾರಣ ಯಾರು ನೀವೇ ಹೇಳಿ ಸ್ವಾಮಿ?

ಇದು ದಿಶಾ ಸಮಿತಿಯ ನಿರ್ಣಯ,

ಕೇಂದ್ರದಿಂದ ಬಂದ ಮಾಹಿತಿ ನೀಡಿ.

               ಮಾನ್ಯ ಸದಸ್ಯರಾದ ಶ್ರೀ ಕುಂದರನಹಳ್ಳಿ ರಮೇಶ್‍ರವರು ಮಾತನಾಡಿ, ಕೇಂದ್ರ ಸರ್ಕಾರದಿಂದ ಸ್ವೀಕೃತವಾಗುವ ಯಾವುದೇ ಪತ್ರಗಳ ಕುರಿತು ಇಲಾಖಾಧಿಕಾರಿಗಳು, ಮಾನ್ಯ ಅಧ್ಯಕ್ಷರ ಅಥವಾ ದಿಶಾ ಸಮಿತಿಯ ಗಮನಕ್ಕೆ ತರುತ್ತಿಲ್ಲ; ಯೋಜನೆಗಳ ತನಿಖೆಗೆ ಕೇಂದ್ರ ತಂಡ ಆಗಮಿಸುವ ಸಂದರ್ಭದಲ್ಲಿಯೂ ಸಹ ಸಮಿತಿಯ ಗಮನಕ್ಕೆ ಮಾಹಿತಿ ನೀಡುತ್ತಿಲ್ಲ ಎಂದು ತೀವ್ರವಾಗಿ ಆಕ್ಷೇಪಿಸಿದರು. 

 ಮುಂದುವರೆದು ಮಾತನಾಡುತ್ತಾ, ಕೇಂದ್ರ ಸರ್ಕಾರದಿಂದ ಸ್ವೀಕೃತವಾಗುವ ಪತ್ರಗಳ ಬಗ್ಗೆಯೂ, ಕೇಂದ್ರ ಸರ್ಕಾರದ ಯೋಜನೆಗಳ ತನಿಖೆಗೆ ಯಾವುದೇ ನಿಯೋಗ ಬಂದರೂ ಆ ಕುರಿತು ಮಾನ್ಯ ಅಧ್ಯಕ್ಷರ ಮತ್ತು ದಿಶಾ ಸಮಿತಿಯ ಗಮನಕ್ಕೆ ತರಬೇಕೆಂದು ಇಲಾಖಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

 ಮಾನ್ಯ ಜಿಲ್ಲಾಧಿಕಾರಿಯವರು ಮಾತನಾಡಿ, ಅಭಿವೃದ್ಧಿ ಕಾಮಗಾರಿಗಳ ಸ್ಥಳ ಭೇಟಿ/ ವೀಕ್ಷಣೆಯ ದೃಷ್ಟಿಯಿಂದ ದಿಶಾ ಸಮಿತಿ ಸದಸ್ಯರುಗಳ ಸೋಶಿಯಲ್ ಮೀಡಿಯಾ ಗ್ರೂಪ್ ಕ್ರಿಯೇಟ್ ಮಾಡಿ, ಕೇಂದ್ರ ಸರ್ಕಾರದಿಂದ ಸ್ವೀಕೃತವಾಗುವ ಪತ್ರಗಳನ್ನು ಸದರಿ ಗ್ರೂಪ್‍ಗೆ ಕಡ್ಢಾಯವಾಗಿ ಕಳುಹಿಸಿಕೊಡಬೇಕೆಂದು ಯೋಜನಾ ನಿರ್ದೇಶಕರಿಗೆ ತಿಳಿಸಿದರು.’ 

ನಾನೇನು ಮಾಡಲಿ?

ನೀವೂ ಇನ್ನೂ ನಮ್ಮನ್ನು ಕತ್ತಲು ಕೋಣೆಯಲ್ಲಿ ಇಟ್ಟರೇ ಹೇಗೆ ? ಕೇಂದ್ರದಿಂದ ಬಂದ ಪತ್ರ, ಅದಕ್ಕೆ ಯಾವ ರೀತಿ ಸ್ಪಂಧಿಸಲಾಗಿದೆ ಎಂಬ ಮಾಹಿತಿ ನಮಗೆ ನೀಡಿದ್ದರೆ. ನಾನು ಈ ರೀತಿ ಬರೆಯಲು ಸಾಧ್ಯವೇ? ಮಾಜಿ ಪ್ರಧಾನಿಯವರಾದ ಶ್ರೀ ಮನೋಮೋಹನ್ ಸಿಂಗ್ ರವರು ಮಾಹಿತಿ ಹಕ್ಕು ಅಧಿನಿಯಮ ಎಂಬ ಬಲವಾದ ಅಸ್ತ್ರ ನೀಡಿದ್ದಾರೆ. ನಾವೂ ಈ ಮೋರೆ ಹೋಗಬೇಕೆ?

ಮೋದಿಯವರು ದಿಶಾ ಸಮಿತಿ ರಚಿಸಿದ್ದಾರೆ. ಇಲ್ಲಿ ಪಾರದರ್ಶಕತೆಗೆ ಹೊತ್ತು ನೀಡಲಾಗಿದೆ. ರಹಸ್ಯ ಏಕೆ ? ನಿಮ್ಮ ಅಧಿಕಾರಿ ಒಬ್ಬರು ಹೇಳುತ್ತಿದ್ದರಂತೆ ನಾನು ಇಲ್ಲಿಗೆ ಬರಲು ಇವರು ಪತ್ರ ಕೊಡಿಸಿದ್ದಾರೆ, ಅವರು ಇಂಥವರ ಮಾತು ಕೇಳಬೇಡಿ ಎಂದು ಹೇಳಿದ್ದಾರೆ, ನಾನು ಏನು ಮಾಡುವುದು ಕುಂದರನಹಳ್ಳಿ ರಮೇಶ್ ಯೋಜನೆಯ ಕಡತದ ಬೆನ್ನು ಹತ್ತುತ್ತಾರೆ.

ನಾನು ನನಗೆ ಹೇಳಿದವರಿಗೆ ಹೇಳಿದೆ, ಅವರು ಪತ್ರಕೊಡಿಸಿದ್ದರೆ, ಸಹಕಾರ ಮಾಡಿದ್ದರೆ, ಕಚೇರಿ ಸಮಯದ ನಂತರ ಅವರ ಮನೆಯಲ್ಲಿ ಹೋಗಿ ಪಾತ್ರೆ ತೊಳೆಯಲಿ, ಅವರ ಕಾಲು ಒತ್ತಲಿ ನಾನು ಬೇಡ ಎನ್ನುವುದಿಲ್ಲ. ಸರ್ಕಾರಿ ಕೆಲಸ ಮಾಡದಿದ್ದರೆ ಸುಮ್ಮನೆ ಇರಲು ಸಾಧ್ಯಾವಿಲ್ಲ. ಕೆಳ ಮಟ್ಟದ ಅಧಿಕಾರಿಗಳಿಗೆ ಮಾಹಿತಿ ನೀಡುವುದು ಬೇಡ ಎಂದರೆ ಅದು ನಿರಂಕುಷ ಪ್ರಭುತ್ವ. ನಾನು ಅವರ ಹೆಸರು ಬರೆದಿಲ್ಲಾ, ಇನ್ನೂ ಮುಂದೆ ಇದೆ  ರೀತಿ ಅನುಸರಿಸಿದರೆ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆಯುತ್ತೇನೆ. ನಿಮಗೆ ಸರ್ಕಾರ ಕೆಲಸ ಕೊಟ್ಟಿರುವುದು ಸಾಮಾಜಿಕ ನ್ಯಾಯ ನೀಡಲು ಅದು ತಿಳಿದಿರಲಿ. ಹುಡುಗಾಟ ಬೇಡ.

 ನಾನು ನಿನ್ನೆ ಬರೆದ ಲೇಖನ ನೋಡಿದ ಒಬ್ಬ ನನ್ನ ಆತ್ಮೀಯ ಅಧಿಕಾರಿ, ನೀವೂ ತಪ್ಪು ಬರೆದಿದ್ದೀರಿ, ಜಿಲ್ಲಾಡಳಿತ ಬಹಳ ಪಾಸ್ಟ್ ಆಗಿದೆ. ಈಗ ಹೆಚ್.ಎ.ಎಲ್ ಅಂಗಳದಲ್ಲಿ ಇದೆ ಎಂದು ಹೇಳಿದಾಗ ನನಗೆ ಖುಷಿಯಾಯಿತು. ದಿನಾಂಕ:02.11.2021 ರಂದೆ ಜಿಲ್ಲಾಡಳಿತದಿಂದ ಹೆಚ್.ಎ.ಎಲ್ ಅಂಗಳಕ್ಕೆ ಚೆಂಡು ಬಿದ್ದಿದೆ. ಮಾಹಿತಿ ತಿಳಿಯದೆ  ಸುಳ್ಳು ಮಾಹಿತಿ ನೀಡಿದ್ದಕ್ಕೆ ಸಾರ್ವಜನಿಕವಾಗಿ ಕ್ಷಮೆ ಕೋರುತ್ತೇನೆ.

ಇನ್ನೂ ಮುಂದೆ ಅಧಿಕಾರಿಗಳಿಂದ ನಿಖರವಾದ ಮಾಹಿತಿ ಪಡೆದ ನಂತರವೇ ಜನ ಜಾಗೃತಿ ಮೂಡಿಸುತ್ತೇನೆ. ನಮ್ಮ ಜಿಲ್ಲಾಡಳಿತ ಸರ್ಕಾರಿ ಯೋಜನೆಗಳಿಗೆ ಪಟಾ ಪಟ್ ಆಗಿ ಜಮೀನು ನೀಡಲು ಶ್ರಮಿಸುತ್ತಿದೆ. ಜಿಲ್ಲಾಧಿಕಾರಿಯೂ ಸೇರಿದಂತೆ ಶ್ರಮಿಸುವ ಎಲ್ಲರಿಗೂ ಅಭಿನಂದನೆ.

ದಿಶಾ ಸಮಿತಿ ಕಾರ್ಯದರ್ಶಿಯವರಾದ ಜಿಲ್ಲಾ ಪಂಚಾಯತ್ ಸಿಇಓ ಮೇಡಂ ರವರೇ, ಕೂಡಲೇ ದಿಶಾ ಸಮಿತಿ ನಿರ್ಣಯ ಪಾಲಿಸಿ, ಸೋಶಿಯಲ್ ಮೀಡಿಯಾ ಗ್ರೂಪ್ ರಚಿಸಿ ಮಾಹಿತಿ ನೀಡಿ. ನಾವೂ ಹಳ್ಳಿಯಿಂದ ದೆಹಲಿವರೆಗೂ ಕಡತದ ಅನುಸರಣೆ ಮಾಡಬೇಕಾದರೆ ಕಡತ ಯಾವ ಹಂತದಲ್ಲಿದೆ ಎಂಬ ಮಾಹಿತಿ ದಿಶಾ ಸಮಿತಿಯ ಸದಸ್ಯರಿಗೆ ತಿಳಿಯುವುದೇ ಬೇಡವೇ?

ನಾವು ನಿಮ್ಮನ್ನು ಟಿಎ, ಡಿಎ ಕೊಡಿ ಎಂದು ಕೇಳೊಲ್ಲ, ಯೋಜನೆಯ ಸ್ಥಿತಿಗತಿ ಮಾಹಿತಿ ನೀಡಿ ಎಂದು ಕೇಳಿರುವುದು. ಪತ್ರಿಕೆಗಳನ್ನು  ಗಮನಿಸಿ  ಮೇಡಂ, ಸಂಸದರ ಅಧ್ಯಕ್ಷತೆಯ ದಿಶಾ ಸಮಿತಿ ನಿರ್ಣಯ ಮಾಡಿಲ್ಲ ಏಕೆ ಎಂದು ಬರೆಯುತ್ತಾರೆ. ದಿಶಾ ಸಮಿತಿ ನಿರ್ಣಯ ನೀಡಿದರೇ, ಬರೀ ನಿರ್ಣಯ ಮಾಡಿದರೆ ಆಗುತ್ತಾ? ಪ್ರತಿಫಲ ಏನು ಎಂದು ಮತ್ತೆ ಬರೆಯುತ್ತಾರೆ. ಇದು ನಮಗೆ ನಾಚಿಕೆ ಅಲ್ಲವೇ?

ಮೋದಿಯವರು ದಿಶಾ ಸಮಿತಿ ಸಭೆ ಮಾಡಿ ಮೌನಗಿರಲು ಹೇಳಿಲ್ಲ, 30 ದಿವಸೊದೊಳಗೆ ಕ್ರಮಕೈಗೊಳ್ಳದೆ ಇರುವ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲು ನಿಮಗೆ ಪವರ್ ನೀಡಿದ್ದಾರೆ. ಈಗಾಗಲೇ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಕಳೆದ ಮೂರು ವರ್ಷದಲ್ಲಿಯೂ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದ್ದಾರೆ.

10 ಸಭೆಗಳನ್ನು ಯಶಸ್ವಿಯಾಗಿ ಮಾಡಿದ್ದಾರೆ. ಆದರೇ ನಿರ್ಣಯಗಳ ಜಾರಿ ಯಾರ ಹೊಣೆ ಮೇಡಂ. ಸಂಸದರು ಬಂದು ಆಡಳಿತ ನಡೆಸಲು ಸಾಧ್ಯವೇ? ಮೋದಿಯವರು ಬಂದು ಆಡಳಿತ ನಡೆಸಬೇಕೆ?

ಕರ್ನಾಟಕ ರಾಜ್ಯ ಸರ್ಕಾರ ನಿಮಗೆ ದಿನಾಂಕ:14.06.2021 ರಂದು ಪತ್ರ ಬರೆದಿದೆ ಗಮನಿಸಿ, ಜಿಲ್ಲಾ ಪಂಚಾಯತ್ ಯೋಜನಾ ಘಟಕದ ಅಧಿಕಾರಿಗಳು ಏನು ಮಾಡಬೇಕು ಮತ್ತು ಹೇಗೆ ಮಾಡಬೇಕು ಎಂದು ಪಾಠ ಹೇಳಿದೆ. ನಾವೂ ಇದೂವರೆಗೂ ಪ್ರತಿಪಾದಿಸುತ್ತಿರುವುದು ಇದನ್ನೇ? ಆಗ ನಾವೂ ನಿಮ್ಮನ್ನು ಯಾವ ಮಾಹಿತಿ ಕೇಳುವುದೇ ಬೇಕಾಗಿಲ್ಲ. ಎಲ್ಲವೂ ಆನ್ ಲೈನ್ ನಲ್ಲಿ ದೊರೆಯಲಿದೆ.

ದಿಶಾ ಸಮಿತಿ ಅದೆಷ್ಟು ಭಾರಿ ನಿರ್ಣಯ ಮಾಡಿದೆ ಗಮನಿಸಿ ಮೇಡಂ? ನೀವೂ ವಿಶೇಷ ಆಸಕ್ತಿ ವಹಿಸಿದರೆ ಮಾತ್ರ ದಿಶಾ ಸಮಿತಿಗೆ ಬೆಲೆ. ಇಲ್ಲದೇ ಇದ್ದಲ್ಲಿ ದಿಶಾ ಸಮಿತಿಗೆ ಭಾಗವಹಿಸುವ ನಮ್ಮ ಸಮಯ, ಸಭೆ ನಡೆಸಲು ಕೇಂದ್ರ ಸರ್ಕಾರ ನೀಡುವ ಹಣ ಎರಡು ವೇಸ್ಟ್.

ದಯವಿಟ್ಟು 10 ದಿಶಾ ಸಮಿತಿಗಳ ನಿರ್ಣಯದ ಪಲಿತಾಂಶವನ್ನು ಜಿಲ್ಲೆಯ ಜನತೆಗೆ ಪುಸ್ತಕ ರೂಪದಲ್ಲಿ ಬರೆಯಲೇ ಬೇಕಿದೆ. ಉಳಿದ ವಿಚಾರ ನಿಮಗೆ ಮತ್ತು  ಎಲ್ಲಾ ಇಲಾಖೆಗಳ ವ್ಯಾಪ್ತಿಗೆ ಬಿಟ್ಟಿದ್ದು.