14th July 2024
Share

TUMKURU:SHAKTHIPEETA FOUNDATION              

ಕುಂದರನಹಳ್ಳಿಯಲ್ಲಿ ಒಂದು ಶ್ರೀ ಶಿವಕುಮಾರ ಸ್ವಾಮೀಜಿ ತಪೋವನ ಇದೆ. ಇದು ನಮ್ಮೂರಿನವರು ಇಟ್ಟ ಹೆಸರು. ಇದನ್ನು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಅವಧಿಯ ಸಂಸದರ ಅನುದಾನದಲ್ಲಿ ನಿರ್ಮಾಣ ಮಾಡಲಾಗಿದೆ. 2000 ನೇ ಇಸವಿಯಲ್ಲಿ ಸುಮಾರು 5.50 ಎಕರೆ ಜಮೀನಿನಲ್ಲಿ ಒಂದು ತೆಂಗಿನ ತೋಟ ತಲೆ ಎತ್ತಿದೆ.

ಅಂದಿನಿಂದ ಇಲ್ಲಿಯವರೆಗೂ ಕುಂದರನಹಳ್ಳಿ ಗ್ರಾಮದ ಯಜಮಾನರ ನೇತೃತ್ವದಲ್ಲಿ ನಿರ್ವಹಣೆ ಮಾಡಲಾಗುತ್ತಿದೆ. ಬಂದ ಆದಾಯವನ್ನು ಕುಂದರನಹಳ್ಳಿ ಗ್ರಾಮದ ಅಭಿವೃದ್ಧಿಗೆ ಬಳಸಿಕೊಳ್ಳುತ್ತಿದ್ದಾರೆ.

ರಾಜ್ಯದಲ್ಲಿ ದೇವರ ಕೊಡುಗೆ ಜಮೀನು ನುಂಗಿ ನೀರು ಕುಡಿದ ನಂತರ ಗೋಮಾಳ ಜಮೀನನ್ನು ದೇವರ ಕೊಡುಗೆಗೆ ಮಂಜೂರು ಮಾಡಿಸಲು ನಮ್ಮೂರಿನಲ್ಲಿ  ಚರ್ಚೆ ನಡೆಯುತ್ತಿದ್ದ ಸಮಯದಲ್ಲಿ ಗ್ರಾಮದ ಅಭಿವೃದ್ಧಿಗೆ ಒಂದು ಆದಾಯದ ಮೂಲ ಮಾಡಿಕೊಡಬೇಕು ಎಂಬ ಕಲ್ಪನೆಯಿಂದ ನಾನೇ ಮುಂದೆ ನಿಂತು ಈ ತಪೋವನ ನಿರ್ಮಾಣ ಮಾಡಿಸಿಲು ದೇವರುಗಳು ಅವಕಾಶ ನೀಡಿದ್ದರೂ ಎಂದರು ತಪ್ಪಾಗಲಾರದು.

ಕುಂದರನಹಳ್ಳಿ ಗ್ರಾಮಸ್ಥರೆಲ್ಲಾ ಸೇರಿ 2000 ರಲ್ಲಿಯೇ ವಿಘ್ನೇಶ್ವರ ಗ್ರಾಮಾಭಿವೃದ್ಧಿ ಸಮಿತಿ ರಚಿಸಿಕೊಂಡು ನಿರ್ವಹಣೆ ಮಾಡಲು ಯೋಚನೆ ಮಾಡಲಾಗಿತ್ತು. ರಾಜಕಾರಣದಿಂದ ಅದು ಸಾಧ್ಯಾವಾಗಲಿಲ್ಲ. ನಂತರ 2015 ರಲ್ಲಿ ಕುಂದರನಹಳ್ಳಿ ಗ್ರಾಮಾಭಿವೃದ್ಧಿ ಸಮಿತಿ ರಚಿಸಿಕೊಂಡು ನಿರ್ವಹಣೆ ಮಾಡಲು ಮುಂದಾದರು ರಾಜಕಾರಣ ಮತ್ತೆ ನೆನಗುದಿಗೆ ಬೀಳಿಸಿತ್ತು.

ಈಗ ಕುಂದರನಹಳ್ಳಿ ಗ್ರಾಮಾಭಿವೃದ್ಧಿ ಟ್ರಸ್ಟ್ ರಚಿಸಿಕೊಂಡು ನಿರ್ವಹಣೆ ಮಾಡಲು ನಮ್ಮೂರಿನ ಯಜಮಾನರು ಮುಂದಾಗಿದ್ದಾರೆ. ಈಗ ಯಾರು ಕಲ್ಲು ಹಾಕುತ್ತಾರೋ ಗೊತ್ತಿಲ್ಲ. ಏನೇ ಆದರೂ ನಮ್ಮೂರಿನಲ್ಲಿ ಯಜಮಾನರ ತೀರ್ಮಾನಕ್ಕೆ ಗೌರವ ಇದೆ.

ಕುದುರೆ ಬಾಯಾರಿದರೆ ಮಾತ್ರ ನೀರು ಕುಡಿಯುತ್ತದೆ, ಒತ್ತಾಯ ಪೂರ್ವಕವಾಗಿ ನೀರು ಕುಡಿಸಲು ಸಾಧ್ಯವಿಲ್ಲ. ನಮ್ಮ ಗ್ರಾಮದ ಸುಮಾರು 81 ಮನೆಗಳ ಸದಸ್ಯರು ಮುಂದೆ ಬಂದಿದ್ದಾರೆ ಎಂಬ ಸುದ್ದಿಯನ್ನು ನಮ್ಮ ಕಚೇರಿಗೆ ಬಂದು ತಿಳಿಸಿದಾಗ ನನಗೆ ಖುಷಿಯಾಯಿತು.

ನಮ್ಮೂರಿನ ಮುಖಂಡರಾದ ಕೆ.ಎಸ್.ಬಸವಲಿಂಗಯ್ಯ, ಕೆ.ಬಿ.ಪಾಲಾಕ್ಷ, ಕೆ.ಬಿ.ವಿಶ್ವನಾಥ್, ಕೆ.ಆರ್.ಶಿವಣ್ಣ. ಕೆ.ಆರ್.ಮಹಲಿಂಗಯ್ಯ, ಕುಮಾರಯ್ಯ, ಮಹೇಶ್ ಮತ್ತು ಎಸ್ ಗುಬ್ಬಣ್ಣ, ಕೆ.ಆರ್.ಮಹೇಶ್ ಇವರೆಲ್ಲಾ ಬಂದು ಸಮಾಲೋಚನೆ ಮಾಡಿದಾಗ ನನಗೆ ನಂಬಲೂ ಇನ್ನೂ ಆಗಿಲ್ಲ.

ನಮ್ಮೂರಿನ ಗ್ರಾಮದೇವತೆ ಗಂಗಮಲ್ಲಮ್ಮ, ರಾಮೇಶ್ವರ, ಆಂಜನೇಯ ದೇವರು ಇವರಿಗೆ ಒಳ್ಳೆಯ ಬುದ್ದಿ ಕೊಟ್ಟರಲ್ಲ ಎಂಬ ಭಾವನೆ ಬಂದರೂ ಸಹ ಈ ಬಗ್ಗೆ ನಮ್ಮೂರಿನವರೇ ಆದ ನ್ಯಾಯಾಧೀಶರಾದ ಶ್ರೀ ಓಂಕಾರ್ ರವರೊಂದಿಗೂ ಹಾಗೂ ಗ್ರಾಮದ ಹಿರಿಯರ ಬಳಿ ಸಮಾಲೋಚನೆ ನಡೆಸಲು ಹೇಳಿದ್ದೇನೆ.

ಏನೇ ಆಗಲಿ ಗ್ರಾಮದ ಅಭಿವೃದ್ಧಿಗೆ ಇದೊಂದು ಒಳ್ಳೆಯ ಉದಾಹರಣೆ. ಗ್ರಾಮಕ್ಕೊಂದು ಸಮುದಾಯ ತೋಟ. ಕುಂದರನಹಳ್ಳಿ ಗ್ರಾಮದ ಶ್ರೀಮತಿ ದಾಕ್ಷಾಯಾಣಮ್ಮ ಮತ್ತು ಮಕ್ಕಳ ಅಗ್ನಿ ಪರೀಕ್ಷೆ ಆರಂಭವಾಗಿದೆ. ಜೊತೆಗೆ ಗ್ರಾಮದ ಜನರ ಪ್ರತಿಯೊಬ್ಬರ ನಿಲುವು ಇಲ್ಲಿ ಪ್ರಮುಖವಾಗಿದೆ.

ಶ್ರೀ ಜಿ.ಎಸ್.ಬಸವರಾಜ್ ರವರು ಊರಿಗೊಂದು ಬಯೋಡೈವರ್ಸಿಟಿ ಪಾರ್ಕ್ ಮಾಡಲು ಚಿಂತನೆ ಮಾಡಿದ ಈ ಸಂದರ್ಭದಲ್ಲಿ ನಾನು ಈ ತಪೋವನ್ನು ಬಯೋಡೈವರ್ಸಿಟಿ ಪಾರ್ಕ್ ಮಾಡಲು ಚಿಂತನೆ ನಡೆಸಿದ್ದೆ. ಗ್ರಾಮಪಂಚಾಯಿತಿಗೆ. ಮುಜರಾಯಿ ಇಲಾಖೆಗೆ ಅಥವಾ ಸಾಮಾಜಿಕ ಅರಣ್ಯ ಇಲಾಖೆಗೆ ವರ್ಗಾವಣೆ ಮಾಡಿಸಲು ಸಂಸದರ ಜೊತೆ, ಜಿಲ್ಲಾಧಿಕಾರಿಯವರ ಜೊತೆ ಮತ್ತು ಪಿಡಿಓ ರವರ ಜೊತೆ ಸಮಾಲೋಚನೆ ನಡೆಸಿದ್ದೆ.

ಈ ಹಿಂದೆ ಒಮ್ಮೆ ಗಂಗಮಲ್ಲಮ್ಮ, ರಾಮೇಶ್ವರ ಮತ್ತು ಆಂಜನೇಯ ದೇವಾಲಯದ ಕೊಡುಗೆಗೆ ಮಂಜೂರು ಮಾಡಿಸಲು ತಹಶೀಲ್ಧಾರ್ ರವರಿಂದ ಕಡತ ಸಿದ್ಧಪಡಿಸಿದ್ದೆ. ಆದರೂ ಏಕೋ ನಮ್ಮೂರಿ£ ಜನರಿಗೆ ಜ್ಞಾನೋದಯವಾಗಬಹುದು ಎಂದು ಸುಮ್ಮನಾಗಿದ್ದೆ.  ಈಗ ಗ್ರಾಮದವರ ಮಾತಿಗೆ ಗೌರವ ಕೊಟ್ಟು ಅವರು ಹೇಳಿದ ಹಾಗೆ ಮಾಡುವ ನಿರ್ಣಯ ಮಾಡಿದ್ದೇನೆ.

ಗ್ರಾಮದೇವತೆಯ ದೃಷ್ಠಿ ಹೇಗಿದೆಯೋ? ಕಾದು ನೋಡೋಣ.