TUMAKURU:SHAKTHIPEETA FOUNDATION
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಗಡಿ ಭಾಗದಲ್ಲಿ ಬೆಂಗಳೂರಿನ ಘನತ್ಯಾಜ್ಯ ವಸ್ತು ಘಟಕದ ವಿಷಪೂರಿತ ಕೊಳಚೆ ನೀರು ಕೊರಟಗೆರೆಯ ಹಲವು ಭಾಗಕ್ಕೆ ಹರಿಯುವ ಮೂಲಕ ಮಾವತ್ತೂರು ಕೆರೆ ಅತ್ಯಾಚಾರ ಮಾಡಿದೆ ಎಂಬ ಗಂಭೀರ ಸುದ್ಧಿ ಮಾಡುತ್ತಿದೆ.
ಎತ್ತಿನಹೊಳೆ ಯೋಜನೆಗೂ ಧಾಳಿ ಮಾಡಲಿದೆ ಎಂಬ ಕಟುಸತ್ಯ ಹರಿದಾಡುತ್ತಿದೆ. ಶ್ರೀ ಶ್ರೀ ಹನುಮಂತಸ್ವಾಮಿಜಿಗಳ ನೇತೃತ್ವದಲ್ಲಿ ಮಠಾಧಿಪತಿಗಳು ಸೇರಿದಂತೆ ಹಲವಾರು ಜನರು ಈ ಬಗ್ಗೆ ಸರ್ಕಾರಗಳ ಗಮನ ಸೆಳೆದಿದ್ದಾರೆ. ಶಾಸಕರಾದ ಶ್ರೀ ಡಾ.ಜಿ.ಪರಮೇಶ್ವರ್ ರವರು ಸ್ಥಳಕ್ಕೆ ಬೇಟಿ ನೀಡಿದ್ದಾರೆ. ತುಮಕೂರಿನ ಸಂಸದರಾದ ಶ್ರೀ ಜಿ.ಎಸ್.ಬಸವರಾಜ್ ರವರು ಈ ಬಗ್ಗೆ ಪತ್ರ ಬರೆದಿದ್ದಾರೆ.
ಈ ಬಗ್ಗೆ ವಿಶೇಷವಾಗಿ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಕೆ.ಜೈಪ್ರಕಾಶ್ ರವರು ಸೋಶಿಯಲ್ ಮೀಡಿಯಾಗಳಲ್ಲಿ ಜಾಗೃತಿ ಮೂಡಿಸಿದ್ದಾರೆ.
ತುಮಕೂರು ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿ.ಇ.ಓ ರವರು, ಸಣ್ಣ ನೀರಾವರಿ ಇಲಾಖೆ ನಡೆಸಿದ ಪತ್ರ ವ್ಯವಹಾರಗಳನ್ನು ಗಮನಿಸಿದಾಗ ಈ ಕೆಲಸ ಯಾವ ಇಲಾಖೆಗೆ ಸೇರುತ್ತದೆ ಎಂಬ ಗೊಂದಲ ಬರಲಿದೆ.
ಬೆಂಗಳೂರು ಬಿಬಿಎಂಪಿಯವರು ಮಾಡಬೇಕೆ? ಸಣ್ಣ ನೀರಾವರಿ ಇಲಾಖೆ ಮಾಡಬೇಕೆ? ಪರಿಸರ ಇಲಾಖೆ ಏನು ಹೇಳಿದೆ? ಬಿಎಂಸಿ ಸಮಿತಿಗಳು ಸತ್ತು ಹೋಗಿವೆಯೇ? ಅಥವಾ ಏನಾದರೂ ಕ್ರಮ ಕೈಗೊಂಡಿವೆಯೇ? ಇತ್ಯಾದಿ ಪ್ರಶ್ನೆಗಳು ಕಾಣಲಿವೆ. ಸ್ಥಳ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದಾಗ ಮಾತ್ರ ನೈಜ ಚಿತ್ರಣ ದೊರೆಯಲಿದೆ. ಬೆಂಕಿಗೆ ಗಂಟೆ ಕಟ್ಟುವವರು ಯಾರು?