27th July 2024
Share

TUMAKURU:SHAKTHIPEETA FOUNDATION

ತುಮಕೂರು ಮತ್ತು ಬೆಂಗಳೂರಿನಲ್ಲಿರುವ ಮುಚ್ಚಿಹೋದ ಹೆಚ್.ಎಂ.ಟಿ ಘಟಕದ ಜಮೀನನ್ನು ಟೆಂಡರ್ ಮೂಲಕ ಇಸ್ರೋ ಕೊಂಡುಕೊಂಡಿದ್ದು ಇತಿಹಾಸ. ಕೊಂಡು ಕೊಂಡು ಬಹಳ ವರ್ಷಗಳಾದರೂ ಯಾವುದೇ ಚಟುವಟಿಕೆ ಆರಂಭವಾದ ಹಾಗೆ ಕಾಣುತ್ತಿಲ್ಲ,

ಇಲ್ಲಿ ಆರಂಭವಾಗಬೇಕಿದ್ದ ಇಸ್ರೋ ಘಟಕಗಳನ್ನು ಗುಜಾರಾತ್ ರಾಜ್ಯಕ್ಕೆ ಸ್ಥಳಾಂತರಿಸುವ ಹುನ್ನಾರ ನಡೆದಿದೆ ಎಂದು ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ.ಕೆ.ಶಿವಕುಮಾರ್ ರವರು ಮತ್ತು ತುಮಕೂರಿನ ಮಾಜಿ ಸಂಸದರಾದ ಶ್ರೀ ಎಸ್.ಪಿ.ಮುದ್ದುಹನುಮೇಗೌಡರು ಗಂಭೀರವಾದ ಆರೋಪ ಮಾಡಿದ್ದಾರೆ.

ಈ ಆರೋಪಕ್ಕೆ ದಾಖಲೆ ನೀಡಿ ಎಂದು ಕೇಳುವ ಹಾಗಿಲ್ಲ.ವಸ್ತು ಸ್ಥಿತಿಯನ್ನು ರಾಜ್ಯದ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿಯವರು ರಾಜ್ಯದ ಜನತೆಗೆ ತಿಳಿಸಬೇಕು.

ತುಮಕೂರು ಮತ್ತು ಬೆಂಗಳೂರು ಸಂಸದರುಗಳು ಈ ಬಗ್ಗೆ ಉತ್ತರಿಸಬೇಕು. ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರುಗಳು ಮೌನವಾಗಿರ ಬಾರದು ಉತ್ತರಿಸುವುದು ಪ್ರಜಾ ಪ್ರಭುತ್ವದ ಮಾರ್ಗ.

ಹಿಂದೆ ತುಮಕೂರಿನ ಹೆಚ್.ಎ.ಎಲ್ ಘಟಕವನ್ನು ಗೋವಾಕ್ಕೆ ಸ್ಥಳಾಂತರಿಸುವ ಆರೋಪವನ್ನು ನಾನೇ ಮಾಡಿದ್ದೆ. ತುಮಕೂರು ವಿಶ್ವವಿದ್ಯಾನಿಲಯವನ್ನು ಹಾಸನಕ್ಕೆ ಸ್ಥಳಾಂತರಿಸುವ ಹುನ್ನಾರದ ಬಗ್ಗೆಯೂ ನಾನೇ ಬಹಿರಂಗ ಪಡಿಸಿದ್ದೆ.

ಇವೆಲ್ಲಾ ತೆರೆಮರೆಯಲ್ಲಿ ಒಳಗೊಳಗೆ ನಡೆಯುತ್ತವೆ. ಯಾರೋ ದಾರಿಯಲ್ಲಿ ಹೋಗುವವರ ಆರೋಪಕ್ಕೆ ಉತ್ತರನೀಡಬೇಕೆ ಎನ್ನುವುದು ಸರಿಯಲ್ಲ. ತಕ್ಷಣ ಈ ಬಗ್ಗೆ ರಾಜ್ಯದ ಸಂಸದರು ಧ್ವನಿ ಎತ್ತಬೇಕು.

ಶಿವಕುಮಾರ್ ರವರು ಆರೋಪ ಮಾಡಿದ ತಕ್ಷಣವೇ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಲೋಕಸಭೆಯಲ್ಲಿ ಪ್ರಶ್ನೆ ಕೇಳಲು ಸಜ್ಜಾಗಿದ್ದಾರೆ. ಉತ್ತರ ಬಂದ ನಂತರ ಪ್ರತಿಕ್ರಿಯೇ ನೀಡುವುದು ಒಂದು ಮಾರ್ಗವಾದರೇ, ಚುನಾವಣೆ ನೀತಿ ಸಂಹಿತೆ ಮುಗಿದ ನಂತರ ಇಸ್ರೋ ಅಧಿಕಾರಿಗಳೊಂದಿಗೆ ಸಭೆ ನಡೆಸಬೇಕಿದೆ. ಇದು ಪ್ರಜಾ ಪ್ರಭುತ್ವದ ಮಾರ್ಗ.

ವಿಷಯ ಬಹಿರಂಗ ಮಾಡಿದ ಇಬ್ಬರು ನಾಯಕರಿಗೂ ಅಭಿನಂದನೆ ಸಲ್ಲಿಸಲೇ ಬೇಕು. ಏನಾಗಿದೆ ಕಾದು ನೋಡೋಣ?