27th July 2024
Share

TUMAKURU:SHAKTHIPEETA FOUNDATION

2022-23 ರ ಆಯವ್ಯಯದಲ್ಲಿ 5 ನದಿ ಜೋಡಣೆಗಳಿಗೆ ಚಾಲನೆ ನೀಡುವ ಮೂಲಕ ಕೇಂದ್ರ ಸರ್ಕಾರ ನದಿ ಜೋಡಣೆಗೆ ಬದ್ಧ ಎಂದು ಘೋಷಣೆ ಮಾಡಿದ್ದಾರೆ.

ದಕ್ಷಿಣ ಬಾರತದ ನದಿಗಳ ಜೋಡಣೆಯಿಂದ ಸಹಜವಾಗಿ ನಮ್ಮ ರಾಜ್ಯಕ್ಕೂ ಅನೂಕೂಲವಾಗಲಿದೆ. ಎಷ್ಟರ ಮಟ್ಟಿಗೆ ಅನೂಕೂಲವಾಗಲಿದೆ ಎನ್ನುವುದು ರಾಜ್ಯಗಳಿಗೆ ನದಿ ನೀರಿನ ಹಂಚಿಕೆ ಮಾಡಿದ ನಂತರವೇ ಸ್ಪಷ್ಟವಾಗಲಿದೆ.

ನೇತ್ರಾವತಿ- ಹೇಮಾವತಿ ನದಿ ಜೋಡಣೆಗೆ ಬದಲಾಗಿ ಎತ್ತಿನಹೊಳೆ- ಪಾಲಾರ್ ನದಿ ಜೋಡಣೆ ಮಾಡಲು ರಾಜ್ಯ ಸರ್ಕಾರ ಮನವಿ ಮಾಡಿದ್ದರೂ ಈ ಯೋಜನೆ ಘೋಷಣೆ ಮಾಡದೆ ಇರುವುದು ಅಸಮಾಧಾನ.

ಕೆನ್-ಬೆಟ್ವ ನದಿ ಜೋಡಣೆ ಪ್ರಸ್ತಾಪ ಮಾಡಿದ ಕೇಂದ್ರ ಸರ್ಕಾರ ಭಧ್ರಾಮೇಲ್ದಂಡೆ ರಾಷ್ಟ್ರೀಯ ಯೋಜನೆ ಬಗ್ಗೆ ಘೋಷಣೆ ಮಾಡುವ ಭರವಸೆ ಹುಸಿಯಾಗಿದೆ. ಆದರೂ ಶೀಘ್ರದಲ್ಲಿ ಸಿಹಿ ಸುದ್ಧಿ ಬರಲಿದೆ ಎಂಬ ಆಶಾಭಾವನೆ ಇದೆ.

ಪರ್ವತ್ ಮಾಲಾ ಯೋಜನೆ

ಸಾಗರ್ ಮಾಲಾ, ಭಾರತ್ ಮಾಲಾ ನಂತರ, ಪರ್ವತ್ ಮಾಲಾ ಯೋಜನೆ ಒಂದು ಉತ್ತಮವಾದ ಯೋಜನೆ. ಈ ಯೋಜನೆಯಿಂದ ತುಮಕೂರು ಜಿಲ್ಲೆಯ ‘ಮಧುಗಿರಿ ಏಕಶಿಲಾ ಬೆಟ್ಟಕ್ಕೂ’ ವರದಾನವಾಗಲಿದೆ.

ದೇಶದ ಭಧ್ರತೆಗೆ ಪೂರಕವಾದ ಆಯವ್ಯಯ

ಗ್ರಾಮೀಣ ಪ್ರದೇಶದಲ್ಲಿ ಜಮೀನುಗಳ ದಾಖಲೆ ಡಿಜಿಟಲೀಕರಣ ಒಂದು ಕ್ರಾಂತಿ ತರಲಿದೆ.ಗ್ರಾಮಪಂಚಾಯಿತಿಗಳಿಗೆ ಅಮೃತ್ ಯೋಜನೆ, ದೇಶದ ಪ್ರತಿ ಗ್ರಾಮಗಳಿಗೆ 5 ಜಿ ಇಂಟರ್ ನೆಟ್ ಸಂಪರ್ಕ ನಿಜಕ್ಕೂ ಉತ್ತಮವಾದ ಯೋಜನೆ. ಸಿರಿ ಧಾನ್ಯಗಳ ವರ್ಷ ಘೋಷಣೆ ಉತ್ತಮವಾಗಿದೆ.

ಡಿಜಟಲ್ ಯೂನಿವರ್ಸಿಟಿ ಪಾರದರ್ಶಕತೆಗೆ ಒತ್ತು ನೀಡಲಿದೆ.ಬೆಂಗಳೂರಿನ ನಿಮಾನ್ಸ್ ಮೇಲ್ದರ್ಜೆ, ಅಂಗನವಾಡಿಗಳ ಯೋಜನೆ, ರಾಷ್ಟ್ರೀಯ ಆರೋಗ್ಯ ಯೋಜನೆ,  ಪೋಸ್ಟ್ ಆಫೀಸ್ ಮತ್ತು ಬ್ಯಾಂಕ್ ಸಂಪರ್ಕ, ಸಹಕಾರಿ ಕ್ಷೇತ್ರಗಳ ತೆರಿಗೆ, ಕೇಂದ್ರ ಮತ್ತು ರಾಜ್ಯ ನೌಕರರ ಏಕರೂಪ ತೆರಿಗೆ. ರೈತರ ಆದಾಯಕ್ಕೆ ವಿಶೇಷ ಯೋಜನೆ, ರೈತರ ಅನೂಕೂಲಕ್ಕೆ ಮಂಡಳಿ ಒಳ್ಳೆಯ ಯೋಜನೆಗಳು.

ಕೊರೊನಾ ಮಹಾಮಾರಿಯಿಂದ ತತ್ತರಿಸುವ ರಾಜ್ಯಗಳಿಗೆ ಬಡ್ಡಿ ರಹಿತ ಬಾಂಡ್/ಸಾಲ ನಿಜಕ್ಕೂ ಮೆಚ್ಚುವಂತದ್ದು. ಗತಿಶಕ್ತಿ ಯೋಜನೆ, ಪಿಪಿಪಿ ಯೋಜನೆಗೆ ಒತ್ತು ನೀಡಿರುವುದು ಮೂಲಭೂತ ಸೌಕರ್ಯ ಅಭಿವೃದ್ಧಿ ಆಗಲಿದೆ.

ಒನ್ ನೇಷನ್- ಒನ್ ರಿಜಿಸ್ಟ್ರೇಷನ್, ಒನ್ ಟ್ಯಾಕ್ಸ್- ಒನ್ ಮಾರ್ಕೆಟ್, ತೆರಿಗೆ ದಾರರಿಗೆ ಸ್ವಯಂ ಹೇಳಿಕೆ ಅಗತ್ಯವಾದ ಯೋಜನೆಗಳು.

ಬಹುಷಃ ಚುನಾವಣಾ ರಾಜ್ಯಗಳಿಗೆ ವಿಶೇಷ ಒತ್ತು ನೀಡಬಹುದೇನೋ ಎನ್ನುವ ಲೆಕ್ಕಾಚಾರ ಉಲ್ಟಾ ಆಗಿದೆ. ಯಾವ ರಾಜ್ಯ ಅಭಿವೃದ್ದಿ ಯೋಜನೆಗೆ ಒತ್ತು ನೀಡುವುದೋ ಅಂತಹ ರಾಜ್ಯಗಳಿಗೆ ಅಭಿವೃದ್ಧಿ ಬಾಗಿಲು ತೆರೆದಂತಿದೆ.

ಗುತ್ತಿಗೆ ದಾರರಿಗೆ ಬಿಲ್ ನೀಡಿದ 10 ದಿವಸಗಳಲ್ಲಿ ಶೇ 75 ರಷ್ಟು ಹಣ ಪಾವತಿ ಆಲೋಚನೆ ಅಭಿವೃದ್ಧಿಗೆ ಪೂರಕವಾಗಲಿದೆ. ಎಲ್ಲಾ ಇಲಾಖೆಯ ಕಾಮಗಾರಿಗಳಿಗೂ ಇದು ಜಾರಿಯಾಗಬೇಕು.

ಮೋದಿಯವರ ಕಾಲಮಿತಿ ಯೋಜನೆಗಳ ಘೋಷಣೆಗಳೆಲ್ಲಾ ಮುಂದುವರೆದಿವೆ, ಸ್ವಾತಂತ್ರ್ಯದ 75 ವರ್ಷದ ಗಡುವಿನ ನಂತರ, ಈಗ 100 ವರ್ಷದತ್ತ ಗಮನ ಹರಿಸಿದೆ.