17th January 2026
Share

TUMAKURU:SHAKTHIPEETA FOUNDATION

ದಿನಾಂಕ:06.02.2022 ರಿಂದ 10.02.2022 ರವರೆಗೆ ದೆಹಲಿ ಪ್ರವಾಸದಲ್ಲಿದ್ದ ಕಾರಣ ಇ-ಪೇಪರ್ ಬರೆಯಲಿಲ್ಲ.ಓದುಗರು ನಿರಂತರವಾಗಿ ಚಾಟಿ ಬೀಸುತ್ತಿದ್ದಾರೆ. ಏಕೆ ಪೇಪರ್ ಬರೆಯುತ್ತಿಲ್ಲ, ನೀವೂ ಎಲ್ಲೇ ಹೋಗಿರಿ ಲ್ಯಾಪ್ ಟ್ಯಾಪ್ ತೆಗೆದುಕೊಂಡು ಹೋಗಿ ಬರೆಯಬಹುದಲ್ಲಾ ಎಂಬ ಸಲಹೆ ನೀಡುತ್ತಿದ್ದಾರೆ.

ಯಾರಿಗಾದರೂ ಹೇಳಿ ಬರೆಸಲು ಹಣ ನೀಡಲೇ ಬೇಕು. ಉಚಿತ ಎಂಬ ಪದ ಈಗ ಇಲ್ಲ. ಸರ್ಕಾರದಿಂದ ಮಾತ್ರ ಕೆಲವು ಉಚಿತ ಸೇವೆ ದೊರೆಯುತ್ತಿದೆ ಅಷ್ಟೆ. ನಾನು ಬರೆಯುವ ಮಾಹಿತಿ ಹೇಳಿ ಬರೆಸುವುದಕ್ಕಿಂತ ನಾನೇ ಬರೆದರೆ ಮನಸ್ಸಿಗೆ ನೆಮ್ಮದಿ.

ನಾನು ದೆಹಲಿಯಲ್ಲಿದ್ದರೆ ಮನೆಯಲ್ಲಿ ಇರಲಿ ಅಥವಾ ಹೊರಗಡೆ ವಿವಿಧ ಕಚೇರಿಗಳಿಗೆ ಹೋಗಿರಲಿ, ಅಲ್ಲಿನ ಕೆಲಸಗಳಲ್ಲಿ ಬಿಸಿಯಾಗಿರುವುದು ಸಾಮಾನ್ಯ.ಪತ್ರಿಕೆ ಬರೆಯಲು ಮನಸ್ಸು ಸರಿ ಇರುವುದಿಲ್ಲ. ಆದ್ದರಿಂದ ನಾನು ಯಾವುದೇ ಪ್ರವಾಸಲ್ಲಿದ್ದಾಗ ಪೇಪರ್ ಬರೆಯಲು ಆಗುತ್ತಿಲ್ಲ.

ಪ್ರವಾಸದ ಅವಧಿಯಲ್ಲಿ ಕ್ಷಮಿಸಿ.