25th July 2024
Share

ಅರಗ ಜ್ಞಾನೇಂದ್ರರವರೇ ಆಯ ವ್ಯಯ ಪತ್ರದಲ್ಲಿ ಏನು ಕೋಡಿಸುತ್ತೀರಿ?

TUMAKURU:SHAKTHIPEETA FOUNDATION

ತುಮಕೂರು ಜಿಲ್ಲೆಯಲ್ಲಿ ಜನರ ಮಾತು ಶಿವಮೊಗ್ಗದವರು ಜಿಲ್ಲಾ ಉಸ್ತುವಾರಿ ಸಚಿವರು, ಚಿತ್ರದುರ್ಗದವರು ದಿಶಾ ಸಮಿತಿ ಅಧ್ಯಕ್ಷರು. ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ಶ್ರೀ ಜೆ.ಸಿ.ಮಾಧುಸ್ವಾಮಿರವರು ಅವರವರ ವ್ಯಾಪ್ತಿಯಲ್ಲಿ ಸದಾ ಚುರುಕಾಗಿ ಸಭೆ ನಡೆಸಿ ಅಧಿಕಾರಿಗಳಿಗೆ ಚಾಟಿ ಬೀಸುತ್ತಿದ್ದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಅರಗಜ್ಞಾನೇಂದ್ರವರು ಮುಂದಿನ 2022-23 ರಾಜ್ಯ ಸರ್ಕಾರದ ಆಯ ವ್ಯಯ ಪತ್ರದಲ್ಲಿ ತುಮಕೂರು ಜಿಲ್ಲೆಗೆ ಏನೇನು ಕೊಡಿಸುತ್ತಾರೆ ಕಾದು ನೋಡಬೇಕು ಎಂದು ಜನ ಪಕ್ಷಾತೀತವಾಗಿ ಮಾತನಾಡುತ್ತಿದ್ದಾರೆ.

 ಆದರೇ ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಸಭೆ ನಡೆಸಿದ ಮಾಹಿತಿ ಇಲ್ಲ.  ಏನು ಮಾಡುತ್ತಾರೆ  ಕಾದು ನೋಡೋಣ.

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಇಂದಿನಿಂದ(17.02.2022) ಮುಖ್ಯಮಂತ್ರಿಯವರಾದ ಬಸವರಾಜ್ ಬೊಮ್ಮಾಯಿರವರು, ಶ್ರೀ ವಿ.ಸೋಮಣ್ಣನವರು, ಶ್ರೀ ಮುರುಗೇಶ್ ನೀರಾಣಿರವರು, ಕೊಟಾ ಶ್ರೀನಿವಾಸ ಪೂಜಾರಿ ರವರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಯವರೊಂದಿಗೆ ಆಯವ್ಯಯ ಪತ್ರದಲ್ಲಿ ಸೇರ್ಪಡೆ ಮಾಡಬಹುದಾದ ಯೋಜನೆಗಳ ಬಗ್ಗೆ ಮನವಿ ಸಲ್ಲಿಸಿ ಚರ್ಚೆ ಆರಂಭಿಸಿದ್ದಾರೆ.

ಜೊತೆಯಲ್ಲಿ ಬಿಜೆಪಿ ನಾಯಕರಾದ ಪಾವಗಡದ ಶ್ರೀ ಶಿವಪ್ರಸಾದ್, ಜಿಲ್ಲಾ ದಿಶಾ ಸಮಿತಿ ಸದಸ್ಯರಾದ ಶ್ರೀ ಟಿ.ಆರ್.ರಘೊತ್ತಮರಾವ್ ರವರು ಇದ್ದರು.

ನಾನು ಶಿವಪ್ರಸಾದ್ ರವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರ ಕನಸಿನ ಯೋಜನೆಗಳೇನು ಎಂಬ ಬಗ್ಗೆ ಚರ್ಚೆ ನಡೆಸಿ ಅವರನ್ನು ಕುಟುಕಿದ್ದೇನೆ.