26th July 2024
Share

 ಆಯವ್ಯಯ ಪತ್ರದಲ್ಲಿ ತುಮಕೂರು ಜಿಲ್ಲಾ ಮಟ್ಟದ ಸಲಹೆ :ಜಿ.ಎಸ್.ಬಸವರಾಜ್

TUMAKURU:SHAKTHIPEETA FOUNDATION

ತುಮಕೂರು ಜಿಲ್ಲಾ ಮಟ್ಟದ ಹಲವಾರು ಯೋಜನೆಗಳ ಬಗ್ಗೆ ಆಯವ್ಯಯದಲ್ಲಿ ಘೋಷಣೆ ಮಾಡಲು ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರಿಗೆ ಸಲಹೆ ನೀಡಲು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಪಟ್ಟಿ ಮಾಡಿದ್ದಾರೆ. ತಾವೂ ಸಲಹೆ ನೀಡಿದಲ್ಲಿ ಅವುಗಳನ್ನು ಸೇರ್ಪಡೆ ಮಾಡಿ ಪತ್ರ ನೀಡಲು ಬಸವರಾಜ್ ರವರು ಇಚ್ಚಿಸಿದ್ದಾರೆ.

ತಾವೂ ಸಲಹೆ ನೀಡುವಿರಾ?

                                     ಗೆ.

ಶ್ರೀ ಬಸವರಾಜ್ ಬೊಮ್ಮಾಯಿರವರು.

ಮಾನ್ಯ ಮುಖ್ಯಮಂತ್ರಿಯವರು.

ಕರ್ನಾಟಕ ಸರ್ಕಾರ, ವಿಧಾನ ಸೌಧ, ಬೆಂಗಳೂರು.

ಮಾನ್ಯರೇ,

ವಿಷಯ:2022-2023 ನೇ ಸಾಲಿನ ಆಯವ್ಯಯದಲ್ಲಿ ಸೇರ್ಪಡೆ ಮಾಡುವ ಬಗ್ಗೆ.

2022-2023 ನೇ ಸಾಲಿನ ಆಯವ್ಯಯದಲ್ಲಿ ತುಮಕೂರು ಜಿಲ್ಲೆಗೆ ಸಂಬಂಧಿಸಿದ ಈ ಕೆಳಕಂಡ ಯೋಜನೆಗಳನ್ನು ಸೇರ್ಪಡೆ ಮಾಡಲು ಈ ಮೂಲಕ ಕೋರಿದೆ.

  1. ಬೆಂಗಳೂರು-ತುಮಕೂರು-ವಸಂತನರಸಾಪುರದವರೆಗೂ ಮೆಟ್ರೋ ಯೋಜನೆ ಜಾರಿ ಸಾಧಕ-ಬಾಧಕ ಅಧ್ಯಯನ ಮಾಡುವುದು.
  2. ತುಮಕೂರು ನಗರ(12500 ಎಕರೆ)- ವಸಂತನರಸಾಪುರದ ಇಂಡಸ್ಟ್ರಿಯಲ್ ನೋಡ್(13500 ಎಕರೆ) ಮತ್ತು ತುಮಕೂರು ಉದ್ದೇಶಿತ ರಿಂಗ್ ರಸ್ತೆಯ ಮಧ್ಯೆದ ಪ್ರದೇಶಗಳೂ ಸೇರಿದಂತೆ ತ್ರಿವಳಿ ನಗರಗಳÀನ್ನು ಅಂತರರಾಷ್ಟ್ರೀಯ ಮಟ್ಟದ ವಾಣಿಜ್ಯ ಹಬ್ ಮತ್ತು ಕೈಗಾರಿಕಾ ಹಬ್ ಆಗಿ ಪರಿವರ್ತಿಸಲು ಸಾಧಕ-ಬಾಧಕ ಅಧ್ಯಯನ ಮಾಡುವುದು.
  3. ತುಮಕೂರು ವಸಂತನರಸಾಪುರ ಇಂಡಸ್ಟ್ರಿಯಲ್ ನೋಡ್ ಬಳಿ ಅಂತರರಾಷ್ಟ್ರೀಯ ವಿಮಾನ ನಿಲ್ಧಾಣ-2 ಸ್ಥಾಪನೆಗೆ ಸಾಧಕ-ಬಾಧಕ ಅಧ್ಯಯನ ಮಾಡುವುದು.
  4. ತುಮಕೂರು ಜಿಲ್ಲೆಯಲ್ಲಿ ‘ಕೋಕೊನಟ್ ಸ್ಪೆಷಲ್ ಎಕಾನಾಮಿಕ್ ಜೋನ್ ಸ್ಥಾಪನೆ.
  5. ಆಯವ್ಯಯದಲ್ಲಿ ಮಂಡಿಸಿ ನೆನೆಗುದಿಗೆ ಬಿದ್ದಿರುವ ‘ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ.
  6. ಆಯವ್ಯಯದಲ್ಲಿ ಮಂಡಿಸಿ ನೆನೆಗುದಿಗೆ ಬಿದ್ದಿರುವ ಕ್ರೀಡಾ ಯೂನಿವರ್ಸಿಟಿ ಸ್ಥಾಪನೆ.
  7. ಆಯವ್ಯಯದಲ್ಲಿ ಮಂಡಿಸಿ, ಶಿರಾ ತಾಲ್ಲೂಕಿನಲ್ಲಿ 811 ಎಕರೆ ಸರ್ಕಾರಿ ಜಮೀನು ಮೀಸಲಿರಿಸಿ ನೆನೆಗುದಿಗೆ ಬಿದ್ದಿರುವ ‘ಕರ್ನಾಟಕ ಹೆರಿಟೇಜ್ ಹಬ್ ಸ್ಥಾಪನೆ.
  8. ಗುಬ್ಬಿ ತಾಲ್ಲೂಕು ‘ಹೆಚ್..ಎಲ್ ಘಟಕಕ್ಕೆ ಅಗತ್ಯವಿರುವ ಹೆಚ್ಚುವರಿ ಜಮೀನು ನೀಡುವುದು.
  9. ತುಮಕೂರು ಜಿಲ್ಲೆಯನ್ನು ಊರಿಗೊಂದು ಕೆರೆ ಕೆರೆಗೆ ನದಿ ನೀರು ಯೋಜನೆಯ ಪೈಲಟ್ ಯೋಜನೆ ಯಾಗಿ ಜಾರಿಗೊಳಿಸುವುದು.
  10. ತುಮಕೂರು ನಗರಕ್ಕೆ ಜಯದೇವ  ಆಸ್ಪತ್ರೆ ಘಟಕ ತೆರೆಯುವದಾಗಿ ತಾವೇ ತುಮಕೂರಿಗೆ ಬಂದಾಗ ಘೋಷಣೆ ಮಾಡಿದ್ದರಿಂದ ಘೋಷಣೆ ಮಾಡುವುದು.
  11. ಗುಬ್ಬಿ ತಾಲ್ಲೋಕು ಬಿದರೆಹಳ್ಳಕಾವಲ್ ನಲ್ಲಿ 40 ಎಕರೆ ಜಮೀನನಲ್ಲಿ ‘ಕ್ರೀಡಾಗ್ರಾಮ’ ಸ್ಥಾಪಿಸುವುದು.
  12. ಹೇಮಾವತಿ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದಲ್ಲಿ ‘ಮೈಕ್ರೋ ಇರ್ರಿಗೇಷನ್ ಪದ್ಧತಿ ಅಳವಡಿಸಿ, ಉಳಿಯುವ ನೀರನ್ನು ಆ ವ್ಯಾಪ್ತಿಯ ಜಲಜೀವನ್ ಮಿಷನ್ ಯೋಜನೆ ಬಳಸಲು ಕೆರೆಗಳಿಗೆ ಅಲೋಕೇಷನ್ ಮಾಡುವುದು.
  13. ಆಯವ್ಯಯದಲ್ಲಿ ಮಂಡಿಸಿ ನೆನೆಗುದಿಗೆ ಬಿದ್ದಿರುವ ‘ಮಧುಗಿರಿ ಏಕಶಿಲಾ ಬೆಟ್ಟದ ರೋಪ್ ವೇ’ ಮಂಜೃಉ ಮಾಡುವುದು.
  14. ತುಮಕೂರು ಜಿಲ್ಲೆಯನ್ನು ‘ಡಿಜಿಟಲ್ ಡಾಟಾ ಡಿಸ್ಟ್ರಿಕ್ಟ್ ಜಿಲ್ಲೆ’ಯಾಗಿ ಘೋಷಣೆ ಮಾಡುವುದು.
  15. ತುಮಕೂರು ಸ್ಮಾರ್ಟ್ ಸಿಟಿ ನಿರ್ಮಾಣ ಮಾಡಿರುವ ಇಂಟಿಗ್ರೇಟೆಡ್ ಕಮ್ಯಾಂಡ್ ಕಂಟ್ರೋಲ್ ಸೆಂಟರ್ ಅನ್ನು ತುಮಕೂರು ಜಿಲ್ಲೆ ಡಾಟಾ ಬ್ಯಾಂಕ್ ಆಗಿ ಪರಿವರ್ತಿಸುವುದು.
  16. ಗುಬ್ಬಿ ಕೆ.ಎಸ್.ಆರ್.ಟಿ.ಸಿ ಡಿಪೋ ಸ್ಥಾಪನೆ.
  17. ತುಮಕೂರು ಜಿಲ್ಲೆಯಲ್ಲಿ ‘ವಾಟರ್ ಬ್ಯಾಂಕ್ಡ್ಯಾಂ ನಿರ್ಮಾಣ ಮಾಡಲು ಸಮೀಕ್ಷೆ ನಡೆಸುವುದು.
  18. ಕೊರಟಗೆರೆ ಪಟ್ಟಣಕ್ಕೆ ‘ಒಳಚರಂಡಿ’ ಯೋಜನೆ ಜಾರಿ.
  19. ತುಮಕೂರು ನಗರ ಮತ್ತು ಗುಬ್ಬಿ ಐಟಿಐ ಕಾಲೇಜು ಕಟ್ಟಡ ನಿರ್ಮಾಣ ಮಾಡಲು ಅನುದಾನ ನೀಡುವುದು.
  20. ಗುಬ್ಬಿ ‘ಹೆಚ್..ಎಲ್ ಬಳಿ ಹೊಸ ಪೋಲೀಸ್ ಸ್ಟೇಷನ್ ಸ್ಥಾಪನೆ ಮಾಡುವುದು.
  21. ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಸ್ಕಿಲ್ ಪಾರ್ಕ್ ಸ್ಥಾಪಿಸುವುದು.
  22. ತುಮಕೂರು ವಿಶ್ವವಿದ್ಯಾನಿಲಯದ ಹೊಸ ಕ್ಯಾಂಪಸ್ ಗೆ ಅನುದಾನ ನೀಡುವುದು.
  23. ತುಮಕೂರು ಜಿಲ್ಲೆಯನ್ನು ಎರಡು ಜಿಲ್ಲೆಯಾಗಿ ಘೋಷಣೆ ಮಾಡಿ, ಮಧುಗಿರಿ ಹೊಸ ಜಿಲ್ಲೆ ಯಾಗಿ ಘೋಷಣೆ ಮಾಡುವುದು.
  24. ತುಮಕೂರು ಜಿಲ್ಲೆಯಲ್ಲಿ ‘ಕೃಷಿ ಕಾಲೇಜು’ ಸ್ಥಾಪನೆ ಮಾಡುವುದು.
  25. ತುಮಕೂರು ನಗರದಲ್ಲಿ ಸರ್ಕಾರಿ ಕಚೇರಿಗಳ ಸಂಕಿರ್ಣ ನಿರ್ಮಾಣ ಮಾಡುವುದು.
  26. ತುಮಕೂರು ನಗರದ ಜಿಲ್ಲಾ ಪಂಚಾಯತ್ ಆವರಣದಲ್ಲಿರುವ ಹಳೆ ಕಟ್ಟಡಗಳನ್ನು ತೆಗೆದು ‘ಹೊಸ ಕಟ್ಟಡದ ಕಾಂಪ್ಲೆಕ್ಸ್ ನಿರ್ಮಾಣ ಮಾಡುವುದು.

ವಂದನೆಗಳೊಂದಿಗೆ                                   ತಮ್ಮ ವಿಶ್ವಾಸಿ

                                                      (ಜಿ.ಎಸ್.ಬಸವರಾಜ್)