ಆಯವ್ಯಯ ಪತ್ರದಲ್ಲಿ ರಾಜ್ಯ ಮಟ್ಟದ ಸಲಹೆ :ಜಿ.ಎಸ್.ಬಸವರಾಜ್
TUMAKURU:SHAKTHIPEETA FOUNDATION
ಕರ್ನಾಟಕ ರಾಜ್ಯ ಮಟ್ಟದ ಹಲವಾರು ಯೋಜನೆಗಳ ಬಗ್ಗೆ ಆಯವ್ಯಯದಲ್ಲಿ ಘೋಷಣೆ ಮಾಡಲು ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರಿಗೆ ಸಲಹೆ ನೀಡಲು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಪಟ್ಟಿ ಮಾಡಿದ್ದಾರೆ. ತಾವೂ ಸಲಹೆ ನೀಡಿದಲ್ಲಿ ಅವುಗಳನ್ನು ಸೇರ್ಪಡೆ ಮಾಡಿ ಪತ್ರ ನೀಡಲು ಬಸವರಾಜ್ ರವರು ಇಚ್ಚಿಸಿದ್ದಾರೆ.
ತಾವೂ ಸಲಹೆ ನೀಡುವಿರಾ?
ಗೆ.
ಶ್ರೀ ಬಸವರಾಜ್ ಬೊಮ್ಮಾಯಿರವರು.
ಮಾನ್ಯ ಮುಖ್ಯಮಂತ್ರಿಯವರು.
ಕರ್ನಾಟಕ ಸರ್ಕಾರ, ವಿಧಾನ ಸೌಧ, ಬೆಂಗಳೂರು.
ಮಾನ್ಯರೇ,
ವಿಷಯ:2022-2023 ನೇ ಸಾಲಿನ ಆಯವ್ಯಯದಲ್ಲಿ ಸೇರ್ಪಡೆ ಮಾಡುವ ಬಗ್ಗೆ.
2022-2023 ನೇ ಸಾಲಿನ ಆಯವ್ಯಯದಲ್ಲಿ ಕರ್ನಾಟಕ ರಾಜ್ಯದ ವ್ಯಾಪ್ತಿಗೆ ಸಂಬಂಧಿಸಿದ ಈ ಕೆಳಕಂಡ ಯೋಜನೆಗಳನ್ನು ಸೇರ್ಪಡೆ ಮಾಡಲು ಈ ಮೂಲಕ ಕೋರಿದೆ.
- ಕರ್ನಾಟಕ ರಾಜ್ಯದಲ್ಲಿ ಬಳಸಬಹುದಾದ ನದಿ ನೀರನ್ನು ಸಾಮಾಜಿಕ ನ್ಯಾಯದಡಿ ‘ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ಯೋಜನೆಯಡಿ’ ಹಂಚಿಕೆ ಮಾಡಲು ವಾಟರ್ ಗ್ರಿಡ್ ಯೋಜನೆ ಸಾಧಕ-ಬಾಧಕಗಳ ಅಧ್ಯಯನ ಮಾಡುವುದು.
- ಜಲಜೀವನ್ ಮಿಷನ್ ಯೋಜನೆಯಡಿ ರಾಜ್ಯದ ಪ್ರತಿ ಮನೆ-ಮನೆಗೂ ಶಾಶ್ವತವಾದ ಕುಡಿಯುವ ನದಿ ನೀರು ಸಂಗ್ರಹ ಮಾಡಲು ಪ್ರತಿ ಜಿಲ್ಲೆಯಲ್ಲೂ ‘ವಾಟರ್ ಬ್ಯಾಂಕ್’ ನಿರ್ಮಾಣ ಮಾಡಿ ‘ಜಲಜೀವನ್ ಮಿಷನ್ ಗ್ರಿಡ್/ಕಾರಿಡಾರ್’ ಯೋಜನೆ ಸಾಧಕ-ಬಾಧಕಗಳ ಅಧ್ಯಯನ ಮಾಡುವುದು.
- ರಾಜ್ಯದ ನದಿ ಜೋಡಣೆ ಮತ್ತು ಕೇಂದ್ರ ಸರ್ಕಾರದ ನದಿ ಜೋಡಣೆ ನೀರು ಪಡೆಯಲು ‘ರಿವರ್ ಲಿಂಕಿಂಗ್ ಟಾಸ್ಕ್ ಪೋರ್ಸ್’ ರಚಿಸುವುದು.
- ಕರ್ನಾಟಕ ರಾಜ್ಯ ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನ ಪಡೆಯಲು ‘ಸೆಂಟರ್ ಆಫ್ ಎಕ್ಸಲೆನ್ಸ್ – ಕ್ಯಾಪ್ಚರಿಂಗ್ ಗೌರ್ವನಮೆಂಟ್ ಆಫ್ ಇಂಡಿಯಾ ಫಂಡ್ಸ್’ ಸ್ಥಾಪಿಸುವುದು.
- ದೆಹಲಿಯಲ್ಲಿ ಎಫ್.ಡಿ.ಐ ಅನುದಾನದ ಬಗ್ಗೆ ನಿರಂತರವಾಗಿ ಶ್ರಮಿಸಲು ‘ಇನ್‍ವೆಸ್ಟ್ ಮೆಂಟ್ ಕಮಿಷನರ್’ ನೇಮಿಸುವುದು.
- ರಾಜ್ಯದಲ್ಲಿ ಪಿಪಿಪಿ ಯೋಜನೆಯನ್ನು ಯಶಸ್ವಿಗೊಳಿಸಲು ‘ಪಿಪಿಪಿ ಟಾಸ್ಕ್ ಪೋರ್ಸ್’ ರಚಿಸುವುದು.
- ‘ಡಾಟಾ-1 ಸ್ಟೆಟ್ -1’ ಯೋಜನೆ ಜಾರಿ.
- ರಾಜ್ಯದ ಎಲ್ಲಾ ಜಿಲ್ಲೆಗಳ ಅಂಕಿ ಅಂಶಗಳ ಇಲಾಖೆಯನ್ನು ‘ಡಾಟಾ ಬ್ಯಾಂಕ್’ಘಟಕಗಳಾಗಿ ಘೋಷಣೆ ಮಾಡುವುದು.
- ‘ಮ್ಯಾಪ್-1 ಸ್ಟೆಟ್ -1’ ಯೋಜನೆ ಜಾರಿ.(ಕೇಂದ್ರ ಮತ್ತು ರಾಜ್ಯ ಸರ್ಕಾರದ ಇತಿಹಾಸ ಸಹಿತ ಜಿಐಎಸ್ ಲೇಯರ್ ಗಳನ್ನು ಒಂದೇ ನಕ್ಷೆಯಲ್ಲಿ ನಮೂದಿಸುವುದು, ಯೋಜನೆ ಮಂಜೂರಾಗುವ ಮುನ್ನ , ಹಣ ಬಿಡುಗಡೆ ಮಾಡುವ ಮುನ್ನ ಜಿಐಎಸ್ ನಕ್ಷೆಯಲ್ಲಿ ನಮೂದು ಕಡ್ಡಾಯಗೊಳಿಸುವುದು).
- ಕೇಂದ್ರ ಸರ್ಕಾರ ಜಿಲ್ಲಾ ಮಟ್ಟದ ದಿಶಾ ಸಮಿತಿ ರಚಿಸಿದ್ದು, ‘ಲೋಕಸಭಾ ವ್ಯಾಪ್ತಿಯಲ್ಲಿ ದಿಶಾ ಸಮಿತಿ’ ಸಭೆ ನಡೆಸಲು ಆಯಾ ಲೋಕಸಭಾ ಸದಸ್ಯರಿಗೆ ರೂಪುರೇಷೆ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು.
- ರಾಜ್ಯ ಮತ್ತು ಜಿಲ್ಲಾ ಮಟ್ಟದ ದಿಶಾ ಸಮಿತಿ ಸಭೆಯಲ್ಲಿ ಕೇಂದ್ರ ಸರ್ಕಾರದ ಅನುದಾನದ ‘ಯು.ಸಿ(ಯುಟಿಲೈಸೆನ್ ಸರ್ಟಿಫಿಕೇಟ್) ಅನುಮೋದನೆ’ ಕಡ್ಡಾಯಗೊಳಿಸುವುದು.
- ಗ್ರಾಮ-1 ಯೋಜನೆಗೆ ಆಯಾ ಗ್ರಾಮಗಳ ‘ಡಿಜಿಟಲ್ ಲೈವ್ ಡಾಟಾ/ ವಿವಿಧ ಯೋಜನೆಗಳ ಡಿಜಿಟಲ್ ಗಣತಿ ಲಿಂಕ್’ ಹೊಣೆಗಾರಿಕೆ ನೀಡುವುದು.
- ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ಸುತ್ತ 10 ಮತ್ತು 5 ಕೀಮೀ ವ್ಯಾಪ್ತಿಯ ಸರ್ಕಾರಿ ಜಮೀನುಗಳನ್ನು ಬಗರ್ ಹುಕುಂ ಯೋಜನೆ ಯಡಿಯಲ್ಲಿ ಹಂಚಿಕೆ ಮಾಡಲು ಅವಕಾಶವಿಲ್ಲ. ಸುತ್ತ ರಿಂಗ್ ರಸ್ತೆ ಮತ್ತು ರೇಡಿಯಲ್ ರಸ್ತೆ ನಿರ್ಮಾಣ ಮಾಡಲು ಹಾಗೂ ರಿಂಗ್ ರಸ್ತೆ ಮತ್ತು ನಗರ ಪ್ರದೇಶಗಳ ಮಧ್ಯೆ ಇರುವ ಸರ್ಕಾರಿ ಜಮೀನುಗಳನ್ನು ‘ಕೇಂದ್ರ ಸರ್ಕಾರದ ನ್ಯಾಷನಲ್ ಹೈವೆ ಆಥಾರಿಟಿಯ ರಿಯಲ್ ಎಸ್ಟೆಟ್ ಯೋಜನೆ ಮಾದರಿಯಲ್ಲಿ ಪಿಪಿಪಿ ಯೋಜನೆ’ಗೆ ಮೀಸಲಿಡಲು ಸಾಧಕ-ಭಾದಕಗಳ ಬಗ್ಗೆ ಅಧ್ಯಯನ ಮಾಡುವುದು.(ಕೋಟ್ಯಾಂತರ ರೂ ಆಸ್ತಿ ದೊರೆಯಲಿದೆ)
- ಕೇಂದ್ರ ಸರ್ಕಾರದ ‘ಎಲ್ಲಾ ಇಲಾಖೆಗಳ ಎಲ್ಲಾ ಯೋಜನೆಗಳ ಅನುದಾನ’ ಪಡೆಯಲು ರಾಜ್ಯದ ಅಗತ್ಯ ಅನುದಾನ ನೀಡುವುದು.
- ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಒಂದೊಂದು ‘ರೈತರ ಉತ್ಪನ್ನದ ಕ್ಲಸ್ಟರ್’ ಸ್ಥಾಪನೆಗೆ 50 ರಿಂದ 500 ಎಕರೆವರೆಗೂ ಜಮೀನು ಗುರುತಿಸಲು, ಆಯಾ ಶಾಸಕರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸುವುದು.
- ‘ಗ್ರಾಮಪಂಚಾಯಿತಿಗೊಂದು ಗುರುಕುಲ ಮಾದರಿ ಶಾಲೆ ನಿರ್ಮಾಣ’ ಮಾಡಲು ರಾಜ್ಯದ ಪ್ರತಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಟ 10 ಎಕರೆಯಿಂದ 25 ಎಕರೆವರೆಗೂ ಸರ್ಕಾರಿ ಜಮೀನು ಗುರುತಿಸಲು, ಆಯಾ ಶಾಸಕರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸುವುದು.
- ‘ಗ್ರಾಮಪಂಚಾಯಿತಿಗೊಂದು ಬ್ಯಾಂಕ್/ಸಹಕಾರಿ ಬ್ಯಾಂಕ್’ ಸ್ಥಾಪನೆ ಮಾಡುವುದು.
- ‘ಡಿಜಿಟಲ್ ಯೂನಿವರ್ಸಿಟಿ’ ಸ್ಥಾಪಿಸುವುದು.
- ‘ವಾಟರ್ ಯೂನಿವರ್ಸಿಟಿ’ ಸ್ಥಾಪಿಸುವುದು.
- ‘ಕ್ರೀಡಾ ಯೂನಿವರ್ಸಿಟಿ’ ಸ್ಥಾಪಿಸುವುದು.
- ಸ್ವಾತಂತ್ರ್ಸೋವದ ಅಂಗವಾಗಿ ನಿರ್ದಿಷ್ಟ ಯೋಜನೆ ಜಾರಿಗೆ ‘75-100 ಟಾಸ್ಕ್ ಪೋರ್ಸ್’ ರಚಿಸುವುದು.
- ರಾಜ್ಯದ ಪ್ರತಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ತಿಂಗಳಿಗೆ ಒಂದು ಕೀಮೀ ‘ಕರಾಬುಹಳ್ಳ ಒತ್ತುವರಿ ತೆರವು ಮತ್ತು ಸಮಗ್ರ ಅಭಿವೃದ್ಧಿ’ ಪಡಿಸಲು ಜನಾಂದೋಲನ ರೂಪಿಸುವುದು.
- ಪ್ರತಿ ಗ್ರಾಮದಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಲು ‘ನಿವೇಶನ ಭೂ ಬ್ಯಾಂಕ್’ ಸ್ಥಾಪನೆ.
- ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಅಡಿಯಲ್ಲಿ ಕೇಂದ್ರ ಸರ್ಕಾರದ ಮತ್ತು ರಾಜ್ಯ ಸರ್ಕಾರದ ಪ್ರತಿಯೊಂದು ಯೋಜನೆಗಳಿಗೂ ಒಂದೊಂದು ‘ವಿಷನ್ ಗ್ರೂಪ್’ ರಚನೆ.
- ರಾಜ್ಯದ 224 ‘ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಯೋಜನೆಗಳ ಅಧ್ಯಯನ ಕೇಂದ್ರ’ ಸ್ಥಾಪಿಸುವುದು.
- ಬೆಂಗಳೂರು ಫೆರಿ-ಫೆರಿಯಲ್ ರಿಂಗ್ ರಸ್ತೆ ಮಾದರಿ ‘ಫೆರಿ-ಫೆರಿಯಲ್ ರೈಲ್ವೆ ಕಾರಿಡಾರ್’ ನಿರ್ಮಾಣ ಮಾಡಲು ಸಾಧಕ-ಬಾಧಕಗಳ ಅಧ್ಯಯನ ಮಾಡುವುದು.
- ಕೇಂದ್ರ ಸರ್ಕಾರದ ‘ಸೆಮಿ ಕಂಡಕ್ಟರ್ ಪಾಲಿಸಿ ಅಡಿ’ ಯಲ್ಲಿ ರಾಜ್ಯಕ್ಕೆ ಹೆಚ್ಚಿನ ಹೂಡಿಕೆಗೆ ಅವಕಾಶವಾಗಲು ಹಾರ್ಡ್‍ವೇರ್ ಪಾರ್ಕ್[ಇ.ಎಸ್.ಡಿ.ಎಂ ಕ್ಲಸ್ಟರ್] ಸ್ಥಾಪನೆ.
- ರಾಜ್ಯಕ್ಕೆ ಒಟ್ಟಾರೆ ಹೆಚ್ಚಿನ ಉಪಯೋಗ ತರುವ ರೈಲ್ವೆ ಯೋಜನೆಗಳಾದ
- ಯಲಗವಿ-ಗದಗ,
- ತುಮಕೂರು-ರಾಯದುರ್ಗ
- ತುಮಕೂರು-ದಾವಣಗೆರೆ,
- ಧಾರವಾಡ-ಕಿತ್ತೂರು-ಬೆಳಗಾವಿ
- ಹೊಸರೈಲ್ವೆ ಮಾರ್ಗ ಯೋಜನೆಗಳಿಗೆ ಪ್ರತ್ಯೇಕ ಹೆಚ್ಚಿನ ಅನುದಾನ ಮೀಸಲು ಮತ್ತು ನಿಗಾ ವಹಿಸಲು ಕೇಂದ್ರ ಸರಕಾರದ ‘ಪ್ರಗತಿ ಸಭೆ’ ಮಾದರಿಯಲ್ಲಿ ವಿಶೇಷ ಸಮಿತಿ ರಚನೆ.
- ಕೇಂದ್ರ ಸರಕಾರದ ಪಿಎಂ ಗತಿ ಶಕ್ತಿ ನ್ಯಾಶನಲ್ ಮಾಸ್ಟರ್ ಪ್ಲಾನ್[ಎನ್.ಎಮ್.ಪಿ], ಗ್ರೀನ್ ಫಿûೀಲ್ಡ್ ಎಕ್ಸ್ ಪ್ರೆಸ್ ಹೈವೇ ಗಳು, ಮಹತ್ವ ಮೂಲಭೂತ ಸೌಕರ್ಯ ಪ್ರಾಜೆಕ್ಟಗಳು,ಮಲ್ಟಿ ಮಾಡಲ್ ಲಾಜಿಸ್ಟಿಕ್ ಪಾರ್ಕ್‍ಗಳು ಮತ್ತು ಇತರೆ ಹೈವೇ ಪ್ರಾಜೆಕ್ಟಗಳನ್ನು ಘೋಶಿಸಿರುವುದರಿಂದ ಅದರಲ್ಲಿ ಬೆಂಗಳೂರು-ತುಮಕೂರು-ದಾವಣಗೆರೆ-ಹುಬ್ಬಳ್ಳಿ-ಬೆಳಗಾವಿ-ಪುಣೆ-ಮುಂಬೈ ಗ್ರೀನ್ ಫಿûೀಲ್ಡ್ ಎಕ್ಸ್‍ಪ್ರೆಸ್ ಹೈವೇಯಲ್ಲಿ ರಾಜ್ಯದ ನಾಲ್ಕು ಭಾಗಗಳಲ್ಲಿ ‘ಮಲ್ಟಿ ಮಾಡಲ್ ಲಾಜಿಸ್ಟಿಕ್ ಪಾರ್ಕ್’ಗಳ ಪ್ರಸ್ಥಾವನೆ.
- ಜಿಲ್ಲಾ ಕೇಂದ್ರಗಳಲ್ಲಿ ‘ಬ್ಯುಸೆನಸ್ ಇನ್ ಕ್ಯೂಬೇಶನ್ ಸೆಂಟರ್ಸ್’ ಸ್ಥಾಪನೆ.
- ಕೈಗಾರಿಕಾ ಹೂಡಿಕೆಗೆ ಪೂರಕವಾಗುವ ‘ಡಿಫೆನ್ಸ್ ಕಾರಿಡಾರ್’ ಅನ್ನು ಕರ್ನಾಟಕದ ತುಮಕೂರು-ಶಿವಮೊಗ್ಗ ಮತು ದಾವಣಗೆರೆ-ಹುಬ್ಬಳ್ಳಿ-ಬೆಳಗಾವಿಯ ವರೆಗೆ ವಿಸ್ತರಣೆ.
- ಬೆಂಗಳೂರಿನ ಸುತ್ತ-ಮುತ್ತ ನಗರಗಳ ಕೈಗಾರಿಕಾ ವಸಾºತುಗಳಾದ ದೇವನಹಳ್ಳಿ- ದೊಡ್ಡಬಳ್ಳಾಪುರ-ದಾಬಸ್ ಪೇಟ್[ಸೋಂಪುರ]- ತುಮಕೂರು ವಸಂತನರಸಾಪುರ – ಕೋಲಾರದ ನರಸಾಪುರ-ಬಿಡದಿ- ಕನಕಪುರ- ಆನೇಕಲ್ -ಹೊಸಕೋಟೆ-ಮಾಲೂರು- ಕೈಗಾರಿಕಾ ವಸಾಹತುಗಳ ಸಂಪರ್ಕದ ‘ಇಂಡಸ್ಟ್ರಿಯಲ್ ಕಾರಿಡಾರ್’ ನಿರ್ಮಾಣ.
- ‘ಅಧ್ಯಯನ ಪೀಠ’ಗಳಿಗೆ ಅಭಿವೃದ್ಧಿಯಲ್ಲಿ ತೊಡಗಿಸಿ ಕೊಳ್ಳಲು ಹೊಸ ನೀತಿ ರೂಪಿಸುವುದು.
- ಜಿಲ್ಲೆಗೊಂದು ‘ಪ್ರಭುದ್ಧರ ಆಶ್ರಮ’ ಅಥವಾ ‘ರೀಸರ್ಚ್ ಹಬ್’ ಸ್ಥಾಪಿಸುವುದು.
- ರಾಜ್ಯದ ನಗರ ಪ್ರದೇಶಗಳ ‘ಶಾಸಕರ ಅಧ್ಯಕ್ಷತೆಯಲ್ಲಿ ನಗರ ಮಟ್ಟದ ಕೆಡಿಪಿ’ ಮಾದರಿ ಸಮಿತಿ ರಚಿಸುವುದು.
- ಸರೋಜಿನಿ ಮಹಿಷಿ ವರದಿಯ ‘ಕಾಯ್ದೆ’ ರೂಪಿಸುವುದು.
- ಸೆಕೆಂಡರಿ ಅಗ್ರಿ ನಿರ್ದೇಶನಾಲಯದಡಿ ಗ್ರಾಮ ಪಂಚಾಯಿತಿಗೊಂದು ಮೌಲ್ಯವರ್ಧಿತ ಉತ್ಪನ್ನಗಳ ಚಟುವಟಿಕೆಗಾಗಿ ‘ವಸಾಹತು ನಿರ್ಮಾಣ’ ಮಾಡುವುದು.
- ಕರ್ನಾಟಕ ಮೌಲ್ಯ ಮಾಪನ ಪ್ರಾಧಿಕಾರಕ್ಕೆ ‘ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ’ ಮೌಲ್ಯ ಮಾಪನ ಮಾಡಲು ಸೇರ್ಪಡೆ ಮಾಡುವುದು.
- ಪ್ರತಿ ಜಿಲ್ಲೆಗಳಲ್ಲೂ ಅಗತ್ಯ ಪ್ರದೇಶಗಳಲ್ಲಿ ‘ಗ್ರೀನ್ ಕಾರಿಡಾರ್’ ನಿರ್ಮಾಣ ಮಾಡುವುದು.
- ಯುವ ನೀತಿಯಡಿ ರಾಜ್ಯದ 31 ಜಿಲ್ಲೆಗಳಲ್ಲೂ ‘ಉದ್ಯೋಗ ಮ್ಯೂಸಿಯಂ’ ಸ್ಥಾಪನೆ ಮಾಡುವುದು.
ವಂದನೆಗಳೊಂದಿಗೆ ತಮ್ಮ ವಿಶ್ವಾಸಿ
(ಜಿ.ಎಸ್.ಬಸವರಾಜ್)