22nd December 2024
Share

TUMAKURU:SHAKTHIPEETA FOUNDATION

ಪತ್ರಿಕಾ ಘೋಷ್ಠಿಯಲ್ಲಿ ಜಿ.ಎಸ್.ಬಸವರಾಜ್ ಶಾಕ್.

ತುಮಕೂರು ಜಿಲ್ಲೆ ಈಗ ಬಹಳ ಚನ್ನಾಗಿದೆ, ವಿಭಾಗವೇ ಬೇಡ, ಒಂದು ವೇಳೆ ವಿಭಾಗ ಮಾಡಿದರೆ ತುಮಕೂರು ಜಿಲ್ಲೆಯನ್ನು, ಮಧುಗಿರಿ ಜಿಲ್ಲೆ, ತಿಪಟೂರು ಜಿಲ್ಲೆ ಸೇರಿದಂತೆ ಮೂರು ಜಿಲ್ಲೆಯನ್ನಾಗಿ ಮಾಡಲು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ಅಭಿಪ್ರಾಯ ಪಟ್ಟಿದ್ದಾರೆ.

2022-23 ನೇ ಸಾಲಿನ ಆಯವ್ಯಯದಲ್ಲಿ ಸೇರ್ಪಡೆ ಮಾಡಬೇಕಾದ ಪಟ್ಟಿಯನ್ನು ನಾನೇ ಸಿದ್ಧಪಡಿಸಿದ್ದೆ, ಕಳೆದ ಕೆಲವಾರು ವರ್ಷಗಳಿಂದ ಅಭಿವೃದ್ಧಿ ವಿಚಾರದಲ್ಲಿ ಜಿ.ಎಸ್.ಬಸವರಾಜ್ ರವರು, ಶ್ರೀ ಟಿ.ಆರ್.ರಘೋತ್ತಮರಾವ್ ರವರು ಮತ್ತು ನಾನು ಸದಾ ಕಾಲ ಚರ್ಚಿಸುತ್ತೇವೆ. ಹೊಸ ವಿಚಾರಗಳ ಬಗ್ಗೆ ಅಥವಾ ಯಾವುದೇ ವಿಚಾರಗಳ ಬಗ್ಗೆ ಸರ್ಕಾರಗಳಿಗೆ ಪತ್ರ ಬರೆಯುವಾಗ ಬಹುಷಃ ರಘೊತ್ತಮರಾವ್ ಅಥವಾ ನಾನೇ ಸಿದ್ಧಪಡಿಸುತ್ತೇನೆ. ನಾವು ಸಿದ್ಧಪಡಿಸಿದ ಪತ್ರವನ್ನು ಬಸವರಾಜ್ ರವರು ಇವರು ಪಕ್ಕಾ ಮಾಡಿರುತ್ತಾರೆ ಎಂಬ ನಂಬಿಕೆಯಿಂದ ಸಹಿ ಮಾಡುವುದು ವಾಡಿಕೆ.

ನಾವು ಸಹ ಅವರೊಂದಿಗೆ ಹಲವಾರು ಭಾರಿ ಚರ್ಚೆ ಮಾಡುವುದು ಅಷ್ಟೆ ಸತ್ಯ. ಆದರೇ ತುಮಕೂರು ಜಿಲ್ಲೆ ವಿಭಾಗದ ವಿಷಯ ಬಂದಾಗ ನನ್ನ ದೃಷ್ಠಿ ತುಮಕೂರು ಜಿಲ್ಲೆ ವಿಭಾಗ ಆದರೆ ಮಧುಗಿರಿ ಅಥವಾ ಶಿರಾ ಜಿಲ್ಲಾ ಕೇಂದ್ರವಾಗಲಿ ಎಂಬುದಾಗಿತ್ತು. ಲೋಕಸಭಾ ಸದಸ್ಯರ ಬಳಿ ಈ ವಿಚಾರವನ್ನು ನಾನು ಹಲವಾರು ಭಾರಿ ಪ್ರತಿಪಾದಿಸುತ್ತಿದ್ದೆ.

ಅವರಿಗೆ ಮಾತ್ರ ತುಮಕೂರು ಜಿಲ್ಲೆ ವಿಭಾಗ ಒಂದಿಷ್ಟು ಇಷ್ಟವಿಲ್ಲ. ನಾವೆಲ್ಲಾ ಅಣ್ಣ ತಮಂದಿರಂತೆ ಇದ್ದೇವೆ, ವಿಭಾಗ ಬೇಡ ಎನ್ನುವುದು ಅವರ ವಾದವಾಗಿದೆ.ಇಂಥಹ ಸೆನ್ಸಿಟೀವ್ ವಿಚಾರ ಬಂದಾಗ ಅವರೊಂದಿಗೆ ಚರ್ಚೆ ಮಾಡ ಬೇಕಿತ್ತು ಎನಿಸಿತು. ನಾನೇ ತಪ್ಪು ಮಾಡಿದೆ ಎನಿಸಿತು. ನನ್ನ ಅಭಿಪ್ರಾಯ ಇಲ್ಲಿ ಸಂಸದರಿಗೆ ಗೊಂದಲ ಸೃಷ್ಠಿಸಿತು. ಅವರು ಪತ್ರಿಕಾ ಘೋಷ್ಠಿಯಲ್ಲಿಯೇ ಸ್ಪಷ್ಟನೆ ನೀಡ ಬೇಕಾಯಿತು. ಓದುಗರಲ್ಲಿಯೂ ಕ್ಷಮೆ ಇರಲಿ.

ಕಳೆದ 32 ವರ್ಷದಲ್ಲಿ ಈ ರೀತಿ ಇರುಸು-ಮುರುಸು ಆಗಿದ್ದು ಬಹುತೇಕ ಇದೆ ಮೊದಲು. ಪತ್ರಿಕಾ ಘೋಷ್ಠಿಯ ನಂತರ ನಾನೇ ಸಂಸದರ ಕ್ಷಮೆ ಕೇಳಿದೆ. ಅವರು ಹೇಳಿದ್ದು ನೋಡಯ್ಯಾ ನೀನು ಯಾವಾಗಲೂ ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ ಪ್ರತಿಪಾದನೆ ಮಾಡುತ್ತಿಯಾ.ಹಿಂದುಳಿದ ಪ್ರದೇಶ ಜಿಲ್ಲಾ ಕೇಂದ್ರವಾಗಲಿ ಎಂದು ನನಗೆ ಹಲವಾರು ಭಾರಿ ಹೇಳಿದ್ದಿಯಾ, ನಾನು ರಾಜಕಾರಣಿ ಎಲ್ಲಾ ಕಡೆ ಗಮನಹರಿಸ ಬೇಕಾಗಿದೆ. ನನಗಂತೂ ಜಿಲ್ಲೆ ವಿಭಾಗವಾಗುವದೇ ಬೇಡ ಎಂದರು.

ನಂತರ ಅವರ ಆಪ್ತ ಸಹಾಯಕ ಶ್ರೀ ಉಮಾಶಂಕರ್ ರವರಿಗೆ ಕರೆ ಮಾಡಿ ಇನ್ನೂ ಮುಂದೆ ನೀವೂ ಓದಿ ಹೇಳಿ ಅಥವಾ ಸಂಸದರು ಓದಿ  ಸಹಿ ಮಾಡಲಿ ಎಂದು ಹೇಳಿದೆ.

ಪತ್ರಿಕಾ ಘೋಷ್ಠಿಯ ತುಣುಕು.

  1. ಸಂಸದರು ಪತ್ರಿಕಾ ಘೋಷ್ಠಿ ಕರೆದಿರುವುದೇ ಆಯವ್ಯಯ ದಲ್ಲಿ ಮಂಡಿಸಲು ನೀಡಿರುವ ಸಲಹೆಗಳ ಪಟ್ಟಿ ಬಿಡುಗಡೆ ಮಾಡಲು. ಒಬ್ಬ ಸ್ನೇಹಿತರು ಆಯವ್ಯಯದ ಬಗ್ಗೆ ಮಾತನಾಡಿ ಸಾರ್ ಎಂದಾಗ ಎಲ್ಲರೂ ಗೊಳ್ ಎಂದು ನಕ್ಕರು.
  2. ಒಬ್ಬ ಸ್ನೇಹಿತರು ನೀವೂ ಕಳೆದ 20 ವರ್ಷಗಳಿಂದಲೂ ಹೇಳುತ್ತಿದ್ದೀರಾ? ಕೆಲವು ಯೋಜನೆ ಆಗಿಯೇ ಇಲ್ಲ ಎಂದಾಗ ಆಯಿತು ಇಪ್ಪತ್ತು ವರ್ಷಗಳಿಂದ ಆಗಿರುವ ಯೋಜನೆಗಳ ಬಗ್ಗೆ ನೀವು ಏನು ಹೇಳುತ್ತಿರಾ? ಪೂರ್ಣಗೊಂಡಿರುವ ಯೋಜನೆ ಬಗ್ಗೆ ಹೇಳಲು ಸಾಧ್ಯವೇ?   ಈUಲಾದರೂ ಆಗಲಿ ಎಂಬುದು ನನ್ನ ಸಲಹೆ, ಘೋಷಣೆ ಮಾಡುವರು ಮಾಡಬೇಕಲ್ಲ ಎಂಬ ವಾಸ್ತವದ ಬಗ್ಗೆ ಸ್ವಾರಸ್ಯಕರ ಚರ್ಚೆ ನಡೆಯಿತು.
  3. ಒಬ್ಬ ಸ್ನೇಹಿತರು ‘ಜಾಕ್ ಪ್ರೂಟ್ ಬೋರ್ಡ್ ಬಗ್ಗೆ ಏಕೆ ಚಕಾರವಿಲ್ಲ ಎಂಬ ಪ್ರಶ್ನೆ ಗಂಭೀರವಾಗಿ ಚರ್ಚೆ ನಡೆಯಿತು. ಈ ಬಗ್ಗೆ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ರವರಿಗೆ ಇತ್ತೀಚೆಗೂ ಪತ್ರ ಬರೆಯಲಾಗಿದೆ. ಇಲ್ಲಿಯೂ ಸೇರಿಸಬೇಕಿತ್ತು, ಮರೆತು ಹೋಗಿದೆ ಕ್ಷಮೆ ಇರಲಿ ಎಂದು ನಾನೇ ಹೇಳ ಬೇಕಾಯಿತು.