22nd December 2024
Share

2022-23 ಆಯವ್ಯಯದಲ್ಲಿ ಬಂಗಾರದಂತ ಮಾತು.

TUMAKURU:SHAKTHIPEETA FOUNDATION

ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು 2022-23 ನೇ ಸಾಲಿನ ಆಯವ್ಯಯದಲ್ಲಿ ಪ್ರಕಟಿಸಿರುವ ಅಂಶಗಳು. ಈ ಅಂಶಗಳ ಮೌಲ್ಯಮಾಪನ ಮಾಡುವ  ಅವಶ್ಯಕತೆಯಿದೆ.

ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ವಿಶೇಷ ಒತ್ತು ನೀಡಬೇಕಾಗಿದೆ. ಶಕ್ತಿಪೀಠ ಫೌಂಡೇಷನ್ ಪ್ರತಿಪಾದಿಸುತ್ತಿದ್ದ ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯದ ಅಂಶಗಳೇ ಇವು. ನಿಜಕ್ಕೂ ಈ ಪ್ರಯತ್ನ ಅತ್ಯುತ್ತಮವಾದದ್ದು, ಈ ಬಗ್ಗೆ ಡಾ.ಡಿ.ಎಂ.ನಂಜುಂಡಪ್ಪ ವರದಿ ಮತ್ತು ನೀತಿ ಆಯೋಗದ ವರದಿಗಳನ್ನು ಅಧ್ಯಯನ ಮಾಡಿ ನಮ್ಮ ತಾಲ್ಲೂಕಿಗೆ ಇದು ಆಗಬೇಕು ಎನ್ನುವ ಶಾಸಕರು ಬೇಕಷ್ಟೆ?

ರಾಜ್ಯದ ಅಭಿವೃದಿಗೆ ನಮ್ಮ ಸರ್ಕಾರದ ಪಂಚಸೂತ್ರಗಳು ಇಂತಿವೆ.

  1. ರಾಜ್ಯದಲ್ಲಿ ಎಲ್ಲಾರನ್ನೂ ಒಳಗೊಂಡ, ಸಮಗ್ರ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿನ್ನು ಮಾಡುವುದು.
  2. ದುರ್ಬಲ ವರ್ಗದವರ ರಕ್ಷಣೆ ಹಾಗೂ ಏಳಿಗೆಗೆ ಒತ್ತು ನೀಡುವುದು, ಅವರನ್ನು ಪರಾವಲಂಬಿಗಳನ್ನಾಗಿ ಮಾಡದೆ, ಸ್ವಾಭಿಮಾನದ ಬದುಕು ನಡೆಸಲು ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣದ ಕಾರ್ಯಕ್ರಮಗಳನ್ನು ರೂಪಿಸುವುದು ಹಾಗೂ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸುವುದು.
  3. ರಾಜ್ಯದ ಹಿಂದುಳಿದ ಪ್ರದೇಶಗಳನ್ನು ವೈಜ್ಞಾನಿಕವಾಗಿ ಗುರುತಿಸಿ, ವಿವಿಧ ವಲಯಗಳ ಅಭಿವೃದ್ಧಿಗೆ ಸಂಘಟಿತ ಪ್ರಯತ್ನ ಮಾಡುವ ಮೂಲಕ ಅಲ್ಲಿನ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ರಾಜ್ಯದ ಸರಾಸರಿಗೆ ¸ಸಮನಾಗಿ ತರುವುದು.
  4. ಕೃಷಿ, ಕೈಗಾರಿಕೆ ಹಾಗೂ ಸೇವಾ ವಲಯದಲ್ಲಿ ಹೆಚ್ಚಿನ ಜನ ಪಾಲುದಾರಿಕೆಯೊಂದಿಗೆ ಹೆಚ್ಚಿನ ಅಭಿವೃದ್ಧಿ ಸಾಧಿಸಲಾಗುವುದು.
  5. ಹೊಸ ಚಿಂತನೆ, ಹೊಸ ಚೈತನ್ಯ ಹಾಗೂ ಹೊಸ ಮುನ್ನೋಟದೊಂದಿಗೆ ನವ ಭಾರತಕ್ಕಾಗಿ ನವ ಕರ್ನಾಟಕ ನಿರ್ಮಾಣ ಮಾಡಲಾಗುವುದು.