2022-23 ರ ಆಯವ್ಯಯದಲ್ಲಿ ಬಂಗಾರದಂತ ಮಾತು.
TUMAKURU:SHAKTHIPEETA FOUNDATION
ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು 2022-23 ನೇ ಸಾಲಿನ ಆಯವ್ಯಯದಲ್ಲಿ ಪ್ರಕಟಿಸಿರುವ ಅಂಶಗಳು. ಈ ಅಂಶಗಳ ಮೌಲ್ಯಮಾಪನ ಮಾಡುವ ಅವಶ್ಯಕತೆಯಿದೆ.
ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ವಿಶೇಷ ಒತ್ತು ನೀಡಬೇಕಾಗಿದೆ. ಶಕ್ತಿಪೀಠ ಫೌಂಡೇಷನ್ ಪ್ರತಿಪಾದಿಸುತ್ತಿದ್ದ ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯದ ಅಂಶಗಳೇ ಇವು. ನಿಜಕ್ಕೂ ಈ ಪ್ರಯತ್ನ ಅತ್ಯುತ್ತಮವಾದದ್ದು, ಈ ಬಗ್ಗೆ ಡಾ.ಡಿ.ಎಂ.ನಂಜುಂಡಪ್ಪ ವರದಿ ಮತ್ತು ನೀತಿ ಆಯೋಗದ ವರದಿಗಳನ್ನು ಅಧ್ಯಯನ ಮಾಡಿ ನಮ್ಮ ತಾಲ್ಲೂಕಿಗೆ ಇದು ಆಗಬೇಕು ಎನ್ನುವ ಶಾಸಕರು ಬೇಕಷ್ಟೆ?
ರಾಜ್ಯದ ಅಭಿವೃದಿಗೆ ನಮ್ಮ ಸರ್ಕಾರದ ಪಂಚಸೂತ್ರಗಳು ಇಂತಿವೆ.
- ರಾಜ್ಯದಲ್ಲಿ ಎಲ್ಲಾರನ್ನೂ ಒಳಗೊಂಡ, ಸಮಗ್ರ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿನ್ನು ಮಾಡುವುದು.
- ದುರ್ಬಲ ವರ್ಗದವರ ರಕ್ಷಣೆ ಹಾಗೂ ಏಳಿಗೆಗೆ ಒತ್ತು ನೀಡುವುದು, ಅವರನ್ನು ಪರಾವಲಂಬಿಗಳನ್ನಾಗಿ ಮಾಡದೆ, ಸ್ವಾಭಿಮಾನದ ಬದುಕು ನಡೆಸಲು ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣದ ಕಾರ್ಯಕ್ರಮಗಳನ್ನು ರೂಪಿಸುವುದು ಹಾಗೂ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸುವುದು.
- ರಾಜ್ಯದ ಹಿಂದುಳಿದ ಪ್ರದೇಶಗಳನ್ನು ವೈಜ್ಞಾನಿಕವಾಗಿ ಗುರುತಿಸಿ, ವಿವಿಧ ವಲಯಗಳ ಅಭಿವೃದ್ಧಿಗೆ ಸಂಘಟಿತ ಪ್ರಯತ್ನ ಮಾಡುವ ಮೂಲಕ ಅಲ್ಲಿನ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ರಾಜ್ಯದ ಸರಾಸರಿಗೆ ¸ಸಮನಾಗಿ ತರುವುದು.
- ಕೃಷಿ, ಕೈಗಾರಿಕೆ ಹಾಗೂ ಸೇವಾ ವಲಯದಲ್ಲಿ ಹೆಚ್ಚಿನ ಜನ ಪಾಲುದಾರಿಕೆಯೊಂದಿಗೆ ಹೆಚ್ಚಿನ ಅಭಿವೃದ್ಧಿ ಸಾಧಿಸಲಾಗುವುದು.
- ಹೊಸ ಚಿಂತನೆ, ಹೊಸ ಚೈತನ್ಯ ಹಾಗೂ ಹೊಸ ಮುನ್ನೋಟದೊಂದಿಗೆ ನವ ಭಾರತಕ್ಕಾಗಿ ನವ ಕರ್ನಾಟಕ ನಿರ್ಮಾಣ ಮಾಡಲಾಗುವುದು.