22nd December 2024
Share

TUMAKURU:SHAKTHIPEETA FOUNDATION

ಕಲ್ಭುರ್ಗಿಯ ಆರ್ಥಿಕ ತಜ್ಞರಾದ ಶ್ರೀಮತಿ ಸಂಗೀತಾರವರು  ಕರೆ ಮಾಡಿ, ಕರ್ನಾಟಕ ಎಕನಾಮಿಕ್ ಸರ್ವೆಯ 2021-22 ನೇ ಸಾಲಿನ ರಿಪೋರ್ಟ್ ನಲ್ಲಿನ ಪರ್ ಕ್ಯಾಪಿಟಾ ಇನ್ ಕಂ ಟೇಬಲ್ ಕಳುಹಿಸಿ, ನೋಡಿ ಸಾರ್ ನಮ್ಮ ಜಿಲ್ಲೆಯ ಸ್ಥಿತಿ ಹೇಗಿದೆ.

ಇದಕ್ಕೆ ಪೂರಕವಾಗಿ ಆಯವ್ಯಯದಲ್ಲಿ ಏನಾದರೂ ಕ್ರಮಕೈಗೊಳ್ಳ ಬೇಡವೇ ಎಂಬ ಪ್ರಶ್ನೆ ಹಾಕಿದ್ದು ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ’ ದ ಪ್ರತಿಪಾದನೆ ಆಗಿತ್ತು.

ರಾಜ್ಯದ 31 ಜಿಲ್ಲೆಗಳ 227 ತಾಲ್ಲೂಕುಗಳಲ್ಲೂ ಯಾವ ಇಂಡಿಕೇಟರ್ ನಲ್ಲಿ ಕಡಿಮೆ ಇದೆ ಎಂಬ ಪಟ್ಟಿಯನ್ನು ಇಟ್ಟುಕೊಂಡು ಸದನಗಳಲ್ಲಿ ನಮ್ಮ 225 ಜನ ಶಾಸಕರು ಕೇಳಿದಾಗ, ಚರ್ಚೆ ಮಾಡಿದಾಗ ನಿಮ್ಮ ಕನಸಿಗೆ ಬೆಲೆ ಬರುತ್ತದೆ. ನಾವು ಮತ್ತು ನೀವೂ ಈಗ ಮಾಡಬೇಕಾಗಿರುವುದು ಅದನ್ನೆ ಮೇಡಂ, ‘ನಮ್ಮ ಅಭಿವೃದ್ಧಿ ಆಂದೋಲನ ಇದಾಗಿರಬೇಕು’.

ಕಲ್ಭುರ್ಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಮುರುಗೇಶ್ ಆರ್.ನಿರಾಣಿರವರು ಒಂದು ಮಾಸ್ಟರ್ ಪ್ಲಾನ್ ಮಾಡುತ್ತಿರುವುದಾಗಿ ಹೇಳಿಕೆ ನೀಡಿದ್ದರು. ನಾನೂ ಇತ್ತೀಚೆಗೆ ಅವರನ್ನು ಬೇಟಿಯಾದಾಗ ಈ ಬಗ್ಗೆ ಚರ್ಚೆ ಮಾಡಿದೆ.

ಅವರ ಮಾತಿನ ಧಾಟಿ  ಜನರ ಪಾಲ್ಗೊಳ್ಳುವಿಕೆ ಅಗತ್ಯದ ಪ್ರತಿಪಾದನೆ ಮಾಡಿದ ಹಾಗೆ ನನಗೆ ಅನಿಸಿತು. ಅಭಿವೃದ್ಧಿ ಆಸಕ್ತರ ವಿಷನ್ ಗ್ರೂಪ್’ ಮುಂದೆ ಬಂದರೆ ಮಾತ್ರ ಇಂಥಹ ಕನಸು ಕಾಣಬಹುದು. ಅದು ಒಂದೆರಡು ವರ್ಷಗಳ ಕಾಲ ಏನೂ ಮಾಡಲು ಸಾಧ್ಯಾವಿಲ್ಲ. ನಿರಂತರ ಶ್ರಮದ ಅಗತ್ಯವಿದ್ದರೆ ಪಲಿತಾಂಶ ಕಾಣ ಬಹುದಾಗಿದೆ.

ನಿಮ್ಮ ಪ್ರಕಾರ ಮೊದಲ ಆಧ್ಯತೆ ಏನಾಗಿದೆ ಎಂಬ ಪ್ರಶ್ನೆಗೆ, ಸಂಗೀತಾರವರು ಹೇಳಿದ್ದು ಸರ್ಕಾರಿ ಬರಡು ಜಮೀನು ಮತ್ತು ರೈತರ ಜಮೀನಿಗೆ ಉತ್ತಮ ಗುಣಮಟ್ಟದ ಗಿಡ ಹಾಕಿಸಿ 5 ವರ್ಷ ನಿರ್ವಹಣೆ ಮಾಡಲು ಯೋಜನೆ ರೂಪಿಸಿದರೆ, ಅಭಿವೃದ್ಧಿ ತಾನಾಗಿಯೇ ಆಗಲಿದೆ. ಈ ಬಗ್ಗೆ ಅವರನ್ನೇ ವರದಿ ಮಾಡಲು ಹೇಳಿದ್ದೇನೆ.

ವಿಶ್ವಸಂಸ್ಥೆಯ ವರದಿಗಳು ಸಹ ‘ಗ್ರೀನ್ ಕಾರಿಡಾರ್ ಮಾಡಲು ಸಲಹೆ ನೀಡಿವೆ. ಮುರುಗೇಶ್ ನೀರಾಣಿಯವರಿಗೆ ನೀವೂ, ಈ ಯೋಜನೆ ಮಾಡುವ ಬಗ್ಗೆ ಚರ್ಚೆ ಮಾಡಿ ಸಾರ್ ಎಂಬ ಸಲಹೆ ನಿಜಕ್ಕೂ ಅದ್ಭುತವಾಗಿತ್ತು.

ನೀರಾಣಿಯವರು ಮನಸ್ಸು ಮಾಡಿದರೆ ಸಿ.ಎಸ್.ಆರ್ ಫಂಡ್ ನಲ್ಲಿ ರೈತರ ಮತ್ತು ನಿರುದ್ಯೋಗಿಗಳ ಸಹಬಾಗಿತ್ವದಲ್ಲಿ’. ಪಲಿತಾಂಶ ಆಧಾರಿತವಾಗಿ, ಈ ಯೋಜನೆ ರೂಪಿಸಲು ಮುಂದಾಗುವರೇ ಕಾದು ನೋಡಬೇಕು. ‘ರೈತರ ಆದಾಯ ದ್ವಿಗುಣ’ ದ ಒಂದು ಭಾಗವೂ ಆಗಲಿದೆ.

31 ಜಿಲ್ಲೆಗಳ ಉಸ್ತುವಾರಿ ಸಚಿವರು ತಮ್ಮ ತಮ್ಮ ಜಿಲ್ಲೆಯಲ್ಲಿ ಯಾವುದರಲ್ಲಿ ಹಿಂದೆ ಬಿದ್ದಿದ್ದೇವೆ, ಏನೇನು ಮಾಡಬೇಕು ಎಂಬ ಬಗ್ಗೆ ಜಿಲ್ಲಾ ಯೋಜನಾ ಸಮಿತಿ’ ಯಲ್ಲಿ ಚರ್ಚೆ ಮಾಡುವ ಅಗತ್ಯ ಇದೆ. ಆಯಾ ಜಿಲ್ಲೆಯ ಸಿಇಓ ಗಳು ಏನು ಮಾಡುತ್ತಾರೆ ಕಾದು ನೋಡೋಣ?