22nd December 2024
Share

ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳೆಂದು ಗುರುತಿಸಿ,

TUMAKURU:SHAKTHIPEETA FOUNDATION

ಶ್ರೀ ಬಸವರಾಜ್ ಬೊಮ್ಮಾಯಿರವರು 2022-23 ನೇ ಸಾಲಿನ ಆಯವ್ಯಯದಲ್ಲಿ ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯದಡಿಯಲ್ಲಿ ಈ ಕೆಳಕಂಡ ಯೋಜನೆ ಘೋಷಣೆ ಮಾಡುವ ಮೂಲಕ ಒಳ್ಳೆಯ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ.

ಪ್ರಾದೇಶಿಕ ಅಸಮತೋಲನ ಮತ್ತು ಮಾನವ ಅಭಿವೃದ್ಧಿ ಸೂಚಕಗಳ ಆಧಾರದ ಮೇಲೆ ಆಯವ್ಯಯ’ ಮಂಡಿಸುವುದು ನಿಜಕ್ಕೂ ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ ನೀಡುವ ಮೊದಲ ಹೆಜ್ಜೆ ಎಂದರೆ ತಪ್ಪಾಗಲಾರದು.

ಶಕ್ತಿಪೀಠ ಫೌಂಡೇಷನ್ ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ ಪ್ರತಿಪಾದನೆ ಮಾಡುತ್ತಾ ಬಂದಿದೆ. ಈ ಹಿನ್ನಲೆಯಲ್ಲಿ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮತಿ ಸಭೆಯಲ್ಲಿ ಪ್ರತಿಯೊಂದು ಇಲಾಖೆಗಳು ಜಿಐಎಸ್ ಲೇಯರ್ ಮಾಡಿ, ಎಲ್ಲಿಗೆ ಯಾವ ಯೋಜನೆಯ ಅಗತ್ಯವಿದೆಯೋ, ಅಲ್ಲಿಗೆ ಯೋಜನೆ ನೀಡಿ, ನೀಡ್ ಬೇಸ್ಡ್ ಯೋಜನೆ ಜಾರಿಗೊಳಿಸಲು ಜಿಐಎಸ್ ಲೇಯರ್ ಬ್ರಹ್ಮಾಸ್ತ್ರ ಎಂದು ಬಾಯಿ ಬಡಿದುಕೊಳ್ಳಲಾಯಿತು.

ಆದರೇ ಇಲ್ಲಿ ಅಧಿಕಾರಿಗಳಿಗೆ ಅರ್ಥವಾಗುವ ಸಮಯಕ್ಕೆ ಬೇರೆ ರೀತಿಯ ಬೆಳವಣಿಗೆಯೇ ಆಯಿತು. ಆದರೂ ರಾಜ್ಯದ ದೊರೆಗೆ ವಿಷಯದಲ್ಲಿ ಆಸಕ್ತಿ ಇರುವುದು ನಿಜಕ್ಕೂ ಒಳ್ಳೆಯದು.

‘ಮುಖ್ಯಮಂತ್ರಿಯವರಿಗೆ ಅಂಕಿಅಂಶ ನೀಡಿದ,ಮುಖ್ಯ ಕಾರ್ಯದರ್ಶಿ ಶ್ರೀ ರವಿಕುಮಾರ್ ಅವರು, ಹಣಕಾಸು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಾದ ಶ್ರೀ ಪ್ರಸಾದ್ರವರು ಮತ್ತು ಯೋಜನಾ ಇಲಾಖೆಯ ಅಪರಮುಖ್ಯ ಕಾರ್ಯದರ್ಶಿಯವರಾದ ಶ್ರೀಮತಿ ಶಾಲಿನಿ ರಜನೀಶ್ , ಮುಖ್ಯಮಂತ್ರಿಯವರ ಆಪ್ತ ವರ್ಗದವರವರಿಗೂ ಅಭಿನಂದನೆ ಸಲ್ಲಿಸ ಬೇಕು’.

ರಾಜ್ಯದ ಪ್ರತಿಯೊಂದು ಹಂತದಲ್ಲೂ ಈ ಆಧಾರದಲ್ಲಿ ಆಯವ್ಯಯ ಮಂಡಿಸುವುದು ಸೂಕ್ತವಾಗಿದೆ. ಇದೊಂದು ಬಹುದೊಡ್ಡ ಆಂದೋಲನವಾಗಬೇಕಿದೆ. ರಾಜ್ಯದ ದೊರೆಯ ಪರಿಕಲ್ಪನೆ ಬಗ್ಗೆ ಪ್ರಚಾರ ಮಾಡುವುದು ಅಗತ್ಯವಾಗಿದೆ.

ಅದರಲ್ಲೂ ಶಿಕ್ಷಣ, ಆರೋಗ್ಯ ಮತ್ತು ಮಕ್ಕಳ ಅಪೌಷ್ಠಿಕತೆ ವಿಚಾರ ಆಯ್ಕೆ ಅದ್ಭುತವಾಗಿದೆ. ವಿರೋಧ ಪಕ್ಷಗಳು ಈ ಬಗ್ಗೆ ಚರ್ಚೆ ಮಾಡಬೇಕು. ವಿಧಾನ ಸಭೆಯಲ್ಲಿ ಸಂವಿಧಾನದ ಬಗ್ಗೆ ಚರ್ಚೆಯಾದ ಮಾದರಿಯಲ್ಲಿ ಪ್ರಾದೇಶಿಕ ಅಸಮತೋಲನ ಮತ್ತು ಮಾನವ ಅಭಿವೃದ್ಧಿ ಸೂಚಕಗಳ ಆಧಾರದ ಮೇಲೆ ಆಯವ್ಯಯ ದ ಬಗ್ಗೆ ಚರ್ಚೆ ಅಗತ್ಯವಿದೆ.

ಆಯವ್ಯಯದ 88 ನೇ ಅಂಶಗಳನ್ನು ಗಮನಿಸಿ,

 ಮೊಟ್ಟ ಮೊದಲ ಬಾರಿಗೆ ನಮ್ಮ ಸರ್ಕಾರವು ವಿವಿಧ ಅಭಿವೃದ್ಧಿ ಸೂಚಕಗಳಲ್ಲಿ ರಾಜ್ಯ ಸರಾಸರಿಗಿಂತ ಕಡಿಮೆ ಸಾಧನೆ ಮಾಡುತ್ತಿರುವ ತಾಲ್ಲೂಕುಗಳನ್ನು ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳೆಂದು ಗುರುತಿಸಿ, ತಾಲ್ಲೂಕುಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಿದೆ. ವಿವಿಧ ಇಲಾಗೆ ಯೋಜನೆಗಳಲ್ಲಿ ಹೆಚ್ಚಿನ ಆದ್ಯತೆಯನ್ನು ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳಿಗೆ ನೀಡಲಾಗುವುದು. ಇದರನ್ವಯ 93 ತಾಲೂಕುಗಳಲ್ಲಿ ಶಿಕ್ಷಣ ಗುಣಮಟ್ಟವನ್ನು ವೃದ್ಧಿಸಲು, 100 ತಾಲ್ಲೂಕುಗಳಲ್ಲಿ ಆರೋಗ್ಯ ಸೇವೆಯನ್ನು ಬಲಪಡಿಸಲು ಮತ್ತು 102 ತಾಲ್ಲೂಕುಗಳಲ್ಲಿ ಮಕ್ಕಳ ಅಪೌಷ್ಟಿಕತೆ ನಿವಾರಿಸಲು ಒಟ್ಟಾರೆ 3,000 ಕೋಟಿ ರೂ. ವೆಚ್ಚದಲ್ಲಿ ಫಲಿತಾಂಶ ಕೇಂದ್ರಿತ ಪ್ರಯತ್ನಗಳನ್ನು ಮಾಡಲಾಗುವುದು.

ಅ. ಹೆಚ್ಚಿನ ಕಾರ್ಯದೊತ್ತಡವಿರುವ 100 ಪ್ರಾಥಮಿಕ ಆರೋಗ್ಯ ಕೇಂದ್ರಗಳ 25 ಹಾಸಿಗೆಯ ಮಾದರಿ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಎರಡು ವರ್ಷಗಳಲ್ಲಿ ಒಟ್ಟಾರೆ 1,000 ಕೋಟಿ ರೂ. ವೆಚ್ಚದಲ್ಲಿ ಉನ್ನತೀಕರಿಸಲಾಗುವುದು.

ಆ. ಲೋಕೋಪಯೋಗಿ ಇಲಾಖೆಗೆ ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ. ಯೋಜನೆಯಡಿ ಒದಗಿಸಿದ ಅನುದಾನದಿಂದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿಗಳಿಗೆ ಡಾ. ಬಿ. ಆರ್. ಅಂಬೇಡ್ಕರ್ ವಿದ್ಯಾರ್ಥಿನಿಲಯಗಳನ್ನು ಹಾಗೂ 10 ಕ್ರೈಸ್ ವಸತಿ ಶಾಲೆಗಳ ಕಟ್ಟಡಗಳನ್ನು 750 ಕೋಟಿ ರೂ. ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯ ಮುಖಾಂತರ ನಿರ್ಮಿಸಲಾಗುವುದು.

ಇ. 165 ಕೋಟಿ ರೂ.ಗಳ ವೆಚ್ಚ ದಲ್ಲಿ ಬಾಡಿಗೆ ಕಟ್ಟಡಗಳಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 50 ಕನಕದಾಸ” ವಿದ್ಯಾರ್ಥಿನಿಲಯಗಳಿಗೆ ಸುಸಜ್ಜಿತ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುವುದು.

ಈ. ಅಪೌಷ್ಟಿ ಕತೆಯ ನ್ನು ನಿವಾರಿಸಲು ವಿವಿಧ ಇಲಾಖೆಗಳ ಕಾರ್ಯಕ್ರಮಗಳನ್ನು ಸಮನ್ವಯಿಸಿ ಕ್ರಮ ವಹಿಸಲಾಗುವುದು. ಸೃಷ್ಟಿ ಮತ್ತು ಕ್ಷೀರಭಾಗ್ಯ ಯೋಜನೆಯಡಿಯಲ್ಲಿ ತೀವ್ರ ಅಪೌಷ್ಟಿಕ ಮಕ್ಕಳಿಗೆ ನೀಡುತ್ತಿರುವ ಸೌಲಭ್ಯಗಳನ್ನು ಸಾಧಾರಣ ಅಪೌಷ್ಟಿಕ ಮಕ್ಕಳಿಗೂ ಪ್ರಸಕ್ತ ಸಾಲಿನಿಂದ ನೀಡಲಾಗುವುದು.

ಉ. ಅಪೌಷ್ಟಿಕ ಮಕ್ಕಳಿಗೆ ಆರೈಕೆಯನ್ನು ಒದಗಿಸಲು ಈಗಾಗಲೇ ಸ್ಥಾಪಿಸಲಾಗಿರುವ 32 ಜಿಲ್ಲಾ ಕೇಂದ್ರಗಳು ಹಾಗೂ 49 ತಾಲ್ಲೂಕು ಕೇಂದ್ರಗಳ ಜೊತೆಗೆ ಹೆಚ್ಚುವರಿಯಾಗಿ 37 ಪೌಷ್ಟಿಕ ಪುನರ್ವ¸ತಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು.

ಊ. ಸ್ವಂತ ಕಟ್ಟಡಗಳಿಲ್ಲದಿರುವ 1,000 ಅಂಗನವಾಡಿಗಳಿಗೆ ಮಹಾತ್ಮಗಾಂಧಿ ನರೇಗಾ ಯೋಜನೆಯೊಂದಿಗೆ ಸಂಯೋಜಿಸಿ ಕಟ್ಟಡಗಳನ್ನು ನಿರ್ಮಿಸಲಾಗುವುದು. ಆಯವ್ಯಯ 2022-23 30 ಈ ಉದ್ದೇಶಕ್ಕಾಗಿ 50 ಕೋಟಿ ರೂ.ಗಳ ಮೊತ್ತವನ್ನು ಹಂಚಿಕೆ ಮಾಡಲಾಗಿದೆ.