TUMAKURU:SHAKTHIPEETA FOUNDATION
ಕರ್ನಾಟಕ ರಾಜ್ಯದಲ್ಲಿ ಇದೂವರೆಗೂ, ವಿದ್ಯಾರ್ಥಿಗಳು, ಸಂಶೋಧನಾ ಸಂಸ್ಥೆಗಳು, ವಿಶ್ವ ವಿದ್ಯಾನಿಲಯದಲ್ಲಿ ಇರುವ ಅಧ್ಯಯನ ಪೀಠಗಳು, ಸರ್ಕಾದ ವಿವಿಧ ಇಲಾಖೆಗಳು ಸಿದ್ಧಪಡಿಸುರುವ ಅಧ್ಯಯನ ವರದಿಗಳ ಮೌಲ್ಯಮಾಪÀನ ಮಾಡುತ್ತಿರುವವರು ಯಾರು? ಎಂಬ ಬಗ್ಗೆ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ನಿರ್ದೇಶಕರಾದ ಡಾ. ಎ.ವಿ.ಮಂಜುನಾಥ್ ರವರೊಂದಿಗೆ ಸಮಾಲೋಚನೆ ನಡೆಸಲಾಯಿತು.
ದೇಶದ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರು ಮತ್ತು ರಾಜ್ಯದ ಮುಖ್ಯಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು ಸಹ, ಈ ಬಗ್ಗೆ ವಿಶೇಷ ಗಮನ ಹರಿಸಿ, ಕಟ್ ಅಂಡ್ ಪೇಸ್ಟ್ ಅಧ್ಯಯನ ವರದಿಗಳ ಬದಲಿಗೆ ನೈಜ್ಯತೆಯ ಸಂಶೋಧನೆಯ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
ಅಧ್ಯಯನ ವರದಿಗಳ ಮೌಲ್ಯಮಾಪನ ಮಾಡಲು ಇದೂವರೆಗೂ, ಯಾವುದೇ ಇಲಾಖೆಯಾದರೂ ಯೋಜನೆ ರೂಪಿಸಿದೆಯಾ, ಎಂಬ ಬಗ್ಗೆ ಹುಡುಕಾಟದ ಮಾತುಗಳು ನಡೆದವು. ಈ ಬಗ್ಗೆ ಸರ್ಕಾರದ ಗಮನ ಸೆಳೆಯಲು ಹಾಗೂ ನಿಖರವಾದ ಮಾಹಿತಿ ಸಂಗ್ರಹಿಸಲು ಆಲೋಚನೆ ನಡೆಸಲಾಯಿತು.
ಕರ್ನಾಟಕದ ‘ಜಲಗ್ರಂಥ’ ರಚಿಸುತ್ತಿರುವ ಹಿನ್ನಲೆಯಲ್ಲಿ, ನನಗೆ ಈ ಅಧ್ಯಯನದ ವರದಿ ನೀಡಿ, ಓದಲು ಸಲಹೆ ನೀಡಿದ್ದು ಪ್ರಮುಖವಾಗಿತ್ತು.