23rd December 2024
Share

TUMAKURU:SHAKTHIPEETA FOUNDATION

ವಿಶ್ವ ಪ್ರಸಿದ್ಧಿಯಾದ ಸಿದ್ದಗಂಗಾ ಮಠಕ್ಕೆ ಹೋಗುವ ದಾರಿಯಲ್ಲಿರುವ ಕ್ಯಾತಸಂದ್ರದÀ ರೈಲ್ವೇ ಸೇತುವೆ ಕಾಮಗಾರಿಯನ್ನು ಲೋಕೊಪಯೋಗಿ ಅಪರ ಮುಖ್ಯ ಕಾರ್ಯದರ್ಶಿಯವರಾದ ಶ್ರೀ ಅನಿಲ್ ಕುಮಾರ್ ರವರು ದಿನಾಂಕ:14.07.2022 ರಂದು ಸ್ಥಳ ಪರಿಶೀಲನೆ ಮಾಡಿದರು.

ಇಲ್ಲಿನ ಕಾಮಗಾರಿ ರಾಮಾಯಣದ ಬಗ್ಗೆ ಮಾಹಿತಿ ಪಡೆದರು. ಜೊತೆಗೆ ಗುಂಡ್ಲಮ್ಮನ ಕೆರೆಯ ಸುವಾಸನೆ ಭರಿತವಾದ ವಾಸನೆಯ ಕಡೆ ಗಮನ ಹರಿಯಿತು. ನಾಗರೀಕ ಸಮಿತಿಯ ಪದಾಧಿಕಾರಿಗಳು ನನಗೆ ಛೀಮಾರಿ ಹಾಕಿದರು ಎಂದರೆ ತಪ್ಪಾಗಲಾರದು.

ಜನ ನನಗೆ ಬೈದಾಗ ನಾನು ಜೊತೆಯಲ್ಲಿ ಇದ್ದ ಶ್ರೀ ನೇರಲಾಪುರದ ಹೊನ್ನೇಶ್ ಕುಮಾರ್ ರವರನ್ನು ಬೈಯ್ಯ ಬೇಕಾಯಿತು. ನಿಮಗೆ ಮಾನ ಮರ್ಯಾದೆ ಇದ್ದರೆ, ಈ ಗಬ್ಬುನಾಥದ ಬಗ್ಗೆ ಹೋರಾಟ ರೂಪಿಸಿ, ಇದಕ್ಕೊಂದು ಮುಕ್ತಿಕಾಣಿಸೋಣ ಎಂದು ಹೇಳಿದ್ದೇನೆ.

 ಅಲ್ಲಿದ್ದ ನಾಗರೀಕರು ನೀವೂ ಕೈಹಾಕಿದರೆ ಗ್ಯಾರಂಟಿ ಕೆಲಸವಾಗಲಿದೆ ಸಾರ್ ಎಂಬ ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಅನಿಲ್ ಕುಮಾರ್ ರವರು ಸಹ ಈ ಬಗ್ಗೆ ವರದಿ ನೀಡುವ ಭರವಸೆ ನೀಡಿದರು. ಈಗಾಗಲೇ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಮತ್ತು ಸಂಸದರಾದ ಶ್ರೀ ಜಿ.ಎಸ್.ಬಸವರಾಜ್ ರವರೊಂದಿಗೂ ಸಮಾಲೋಚನೆ ನಡೆಸಲಾಗಿದೆ.

ತಕ್ಷಣದಲ್ಲಿ ಗುಂಡ್ಲಮ್ಮನ ಕೆರೆ ಅಭಿವೃದ್ಧಿ ಯೋಜನೆ ರೂಪಿಸ ಬೇಕಿದೆ. ಮೂಲಭೂತ ಸೌಕರ್ಯ ಇಲಾಖೆಯ ಸಚಿವರಾದ ಶ್ರೀ ವಿ.ಸೋಮಣ್ಣನವರು ಶೀಘ್ರದಲ್ಲಿಯೇ ಇಲ್ಲಿಗೆ ಬರಲಿದ್ದಾರೆ. ಒಂದು ಮುನ್ನಡಿ ಬರೆಯೋಣ ಎಂದು ಜನರಿಗೆ ಸಮಾದಾನ ಮಾಡಿ ಬರಲಾಯಿತು.

ಪ್ರಗತಿ ಟಿವಿಯವರು ಪ್ರಗತಿ ಫೋಕಸ್ ನಲ್ಲಿ ನನ್ನೊಂದಿಗೆ ಚರ್ಚೆ ಮಾಡಿದಾಗಲೇ, ನಾನು ಈ ಬಗ್ಗೆ ಪ್ರಸ್ತಾಪ ಮಾಡಿದ್ದೆ. ಇದನ್ನು ನೋಡಿದ್ದ ನಾಗರೀಕ ಸಮಿತಿಯವರು ಜ್ಞಾಪಿಸಿದ್ದು ನನಗೆ ಖುಷಿಯಾಯಿತು.