TUMAKURU:SHAKTHIPEETA FOUNDATION
ಕರ್ನಾಟಕ ರಾಜ್ಯ ಸರ್ಕಾರ ಹೊಸದಾಗಿ ಘೋಷಣೆ ಮಾಡಿರುವ ‘ರಿಜನಲ್ ಎಕೋಸಿಸ್ಟಂ ಫಾರ್ ಟೆಕ್ನಿಕಲ್ ಎಕ್ಸಲೆನ್ಸ್’ (RETE) ಯೋಜನೆಯಡಿಯಲ್ಲಿ, ರಾಜ್ಯದ 31 ಜಿಲ್ಲೆಗಳ ಇಂಜಿನಿಯರಿಂಗ್ ಕಾಲೇಜುಗಳು ಕನಿಷ್ಠ ಪಕ್ಷ 25 ಜನ ಉಧ್ಯಮಿಗಳನ್ನು ಸೃಷ್ಠಿಸಬೇಕಿದೆ.
ರಾಜ್ಯದ 31 ಜಿಲ್ಲೆಗಳ ಇಂಜಿನಿಯರಿಂಗ್ ಕಾಲೇಜುಗಳು, ರೈತರ ಆದಾಯ ದ್ವಿಗುಣ ಗೊಳ್ಳುವಂತ ಒಂದೊಂದು ಉತ್ಪನ್ನಗಳ ಮೌಲ್ಯವರ್ಧಿತ ಉಧ್ಯಮವನ್ನು, ಒಂದೊಂದು ವಿಧಾನಸಭಾ ಕ್ಷೇತ್ರವಾರು, ಆರಂಭಿಸಲು, ರಾಜ್ಯದ ಉನ್ನತ ಮಟ್ಟದ ಅಧಿಕಾರಿಯೊಬ್ಬರೊಂದಿಗೆ ಚರ್ಚೆ ನಡೆಸಲಾಗಿದೆ.
ಈ ಬಗ್ಗೆ ರಾಜ್ಯದ ಎಲ್ಲಾ ಗ್ರಾಮಪಂಚಾಯಿತಿವಾರು/ನಗರ ಸ್ಥಳೀಯ ಸಂಸ್ಥೆವಾರು, ಯಾವ ಯೋಜನೆ ಆರಂಭಿಸಬಹುದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾವ ಸೌಲಭ್ಯ ನೀಡಬೇಕು ಎಂಬ ಬಗ್ಗೆ ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಲು ಸಲಹೆ ನೀಡಲು ಸೂಚಿಸಿದ್ದಾರೆ. ರೈತರ ಮಕ್ಕಳಿಗೆ ಈ ಯೋಜನೆಗಳು ಪ್ರೇರಣೆಯಾಗಬೇಕು.
ಈ ಬಗ್ಗೆ ನಿಮ್ಮ ಐಡಿಯಾಗಳನ್ನು ನೀಡಿ.