20th April 2024
Share

TUMAKURU:SHAKTHIPEETA FOUNDATION

ತುಮಕೂರು ನಗರದ ಖರಾಬುಹಳ್ಳ ಮತ್ತು ರಸ್ತೆ ಬದಿಯ ಚರಂಡಿಗಳಲ್ಲಿ, ಹುಚ್ಚು ಮಳೆ ಬಂದಾಗಲೂ ನೀರು ಸರಗಾವಾಗಿ ಹರಿಯುವಂತೆ, ಸಮಗ್ರವಾಗಿ ಅಭಿವೃದ್ಧಿ ಪಡಿಸಲು ರಾಜಕಾಲುವೆಗಳ ಅಧ್ಯಯನ ಮಾಡಿ ಒಂದು ವಿಶೇಷ ಪ್ಯಾಕೇಜ್ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರಾದ ಶ್ರೀ ರಾಕೇಶ್ ಸಿಂಗ್ ರವರು ಜಿಲ್ಲಾಧಿಕಾರಿ ಶ್ರೀ ವೈ.ಎಸ್.ಪಾಟೀಲ್ ಗೆ ಸೂಚಿಸಿದ್ದಾರೆ.

ಈ ಬಗ್ಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಸಮಾಲೋಚನೆ ನಡೆಸಿ, ಪರಿಸ್ಥಿತಿ ಬಗ್ಗೆ ವಿವರಣೆ ನೀಡಿದರು. ಈಗಾಗಲೇ ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಮತ್ತು  ಶ್ರೀ ಜಿ.ಎಸ್.ಬಸವರಾಜ್ ರವರು ಸಭೆ ನಡೆಸಿ, ನಗರದ ಖರಾಬುಹಳ್ಳಗಳ ಮತ್ತು ಚರಂಡಿಗಳ ಜಾಲದ ಸ್ಥಿತಿ ಗತಿ ಬಗ್ಗೆ ಅಧ್ಯಯನ ವರದಿ ತಯಾರಿಸಲು ಸೂಚನೆ ನೀಡಿದ್ದಾರೆ.

ಈಗ ಎಲ್ಲೆಲ್ಲಿ ಮಳೆ ನೀರಿನಿಂದ  ಕೊರೆದಿದೆಯೋ ಅವುಗಳನ್ನು ಬ್ಲಾಕ್ ಸ್ಪಾಟ್ ಎಂದು ಗುರುತಿಸಬೇಕಾಗಿದೆ. ಈಗ ಲೈವ್ ಡ್ಯಾಮೇಜ್ ಅರ್ಥವಾಗಲಿದೆ. 35 ವಾರ್ಡ್ ಪಾಲಿಕೆ ಇಂಜಿನಿಯರ್ ಗಳಿಂದ ವಿಡಿಯೋ ಸಹಿತ ವರದಿ ಸಿದ್ಧಪಡಿಸಿಕೊಳ್ಳಲು ಪಾಲಿಕೆ ಆಯುಕ್ತರು ಸೂಚನೆ ನೀಡವುದು ಒಳ್ಳೆಯದು.

ಒಂದು ಹುಚ್ಚುಮಳೆ 10 ವರ್ಷ ಮಾಡಿದ ಅಭಿವೃದ್ಧಿ ಕಾಮಗಾರಿಗಳನ್ನು ಹಾಳು ಮಾಡುತ್ತದೆ. ಇದನ್ನು ಇಂಜಿನಿಯರ್ ಗಳು ಅರ್ಥಮಾಡಿಕೊಂಡರೆ ಅರ್ಧ ಸಮಸ್ಯೆ ಬಗೆಹರಿದಂತೆ.