12th September 2024
Share

TUMAKURU:SHAKTHIPEETA FOUNDATION

ಅಂತೂ ಇಂತು ಕರ್ನಾಟಕ ರಾಜ್ಯದಲ್ಲಿ ರಾಜ್ಯಮಟ್ಟದ ದಿಶಾ ಸಮಿತಿ ಅಸ್ಥಿತ್ವಕ್ಕೆ ಬಂತು. 2016 ರಲ್ಲಿ ದೇಶದ ಪ್ರತಿಯೊಂದು ರಾಜ್ಯದಲ್ಲೂ ಮಾನ್ಯ ಮುಖ್ಯ ಮಂತ್ರಿಯವರ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ದಿಶಾ ಸಮಿತಿ ರಚಿಸಿ, ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನೆ, ದುರುಪಯೋಗ ತಡೆಗಟ್ಟುವಿಕೆ, ಹೊಸಯೋಜನೆಗಳ ಮಂಜೂರಾತಿಗೆ ಶ್ರಮಿಸಬೇಕಿತ್ತು. ಇದು ಪ್ರಧಾನಿ ಮೋದಿಯವರ ಕನಸಾಗಿತ್ತು.

ಆದರೆ ನಮ್ಮ ರಾಜ್ಯದಲ್ಲಿ 

  1. ಆಗಿನ ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು ಸಮಿತಿಯನ್ನೇ ರಚಿಸಲಿಲ್ಲ.
  2. ನಂತರ ಅಧಿಕಾರಕ್ಕೆ ಬಂದ ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರು ಸಮಿತಿಯನ್ನೇ ರಚಿಸಲಿಲ್ಲ.
  3. ನಂತರ ಅಧಿಕಾರಕ್ಕೆ ಬಂದ ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ರಾಜ್ಯ ಮಟ್ಟದ ದಿಶಾ ಸಮಿತಿ ರಚಿಸಿ, ಮೂರು ಭಾರಿ ಸಭೆ ಕರೆದರೂ ವಿವಿಧ ಕಾರಣಗಳಿಂದ ಸಭೆ ಮುಂದೂಡಲಾಯಿತು.

ಪ್ರಸ್ತುತ ದಿನಾಂಕ:05.08.2022 ರಂದು ರಾಜ್ಯ ಮಟ್ಟದ ದಿಶಾ ಸಮಿತಿ ಪ್ರಥಮ ಸಭೆ ನಡೆಸುವ ಮೂಲಕ ದಿಶಾ ಸಮಿತಿಗೆ ಅಧಿಕೃತಕವಾಗಿ ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು ಗೃಹ ಕಚೇರಿ ಕೃಷ್ಣಾದಲ್ಲಿ ಚಾಲನೆ ನೀಡಿದರು.

ಸಭೆಯಲ್ಲಿ ಪ್ರಮುಖವಾಗಿ ಚರ್ಚೆ ನಡೆಸಿದ ಅಂಶಗಳು.

  1. ದಿಶಾ ಮಾರ್ಗದರ್ಶಿ ಸೂತ್ರದಂತೆ 43 ಯೋಜನೆಗಳ ಜೊತೆಗೆ ಕೇಂದ್ರ ಸರ್ಕಾರದಲ್ಲಿ ಜಾರಿಯಾಗಿರುವ ಪ್ರತಿಯೊಂದು ಇಲಾಖೆಯ ಯೋಜನೆಗಳನ್ನು ಸೇರ್ಪಡೆ ಮಾಡುವುದು.
  2. ಪ್ರತಿ ಜಿಲ್ಲೆಯಲ್ಲೂ ವಾರ್ಷಿಕ 4 ದಿಶಾ ಸಮಿತಿ ಸಭೆಗಳನ್ನು ಕಡ್ಡಾಯವಾಗಿ ಮಾಡಲು ಜಿಲ್ಲಾಧಿಕಾರಿಗಳು ಸಂಸದರ ಜೊತೆಗೆ ಚರ್ಚಿಸಿ ಸಭೆ ನಿಗದಿಗೊಳಿಸುವ ಹೊಣೆಗಾರಿಕೆ.
  3. ರಾಜ್ಯ ಮಟ್ಟದಲ್ಲೂ ವಾರ್ಷಿಕವಾಗಿ ಕನಿಷ್ಠ ನಾಲ್ಕು ಸಭೆಗಳನ್ನು ನಡೆಸುವುದು.
  4. ರಾಜ್ಯ ದಿಶಾ ಸಮಿತಿ ಸದಸ್ಯರು ರಾಜ್ಯಾಧ್ಯಾಂತ ಪ್ರವಾಸ ಮಾಡಿ, ವಿವಿಧ ಕಚೇರಿಗಳಿಗೆ ಮತ್ತು  ಕಾಮಗಾರಿ ನಡೆದ ಸ್ಥಳಗಳಿಗೆ ಭೇಟಿ ನೀಡಿ ವರದಿ ಸಲ್ಲಿಸುವುದು. ಆ ವರಧಿ ಆಧಾರಿತ ಮುಂದಿನ ಸಭೆಗಳಲ್ಲಿ ಚರ್ಚೆ ನಡೆಸುವುದು.
  5. ರಾಜ್ಯ ಮಟ್ಟದ ದಿಶಾ ಸಮಿತಿ ಮಾರ್ಗದರ್ಶಿ ಸೂತ್ರ ಸಿದ್ಧಪಡಿಸುವುದು.
  6. ಕೇಂದ್ರ ಸರ್ಕಾರದ ಆಯಾ ವರ್ಷದ ಹಣವನ್ನು ಕಡ್ಡಾಯವಾಗಿ ಖರ್ಚು ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದು.
  7. ಕೇಂದ್ರ ಸರ್ಕಾರದಿಂದ ಬಾಕಿ ಇರುವ ಹಣದ ಬಗ್ಗೆ, ಆಯಾ ಇಲಾಖೆಗಳು  ದಿಶಾ ಸಮಿತಿಯ ಗಮನಕ್ಕೆ ತರುವುದು ಹಾಗೂ ಮುಖ್ಯಮಂತ್ರಿಯವರಿಂದ ಪತ್ರ ಬರೆಸುವುದು.
  8. ಸಂಸದರ ಆದರ್ಶ ಗ್ರಾಮ ಯೋಜನೆಗಳಲ್ಲಿನ ವಿಡಿಪಿ ಯೋಜನೆಗಳಲ್ಲಿರುವ ಕಾಮಗಾರಿಗಳನ್ನು ಲೈನ್ ಡಿಪಾರ್ಟ್‍ಮೆಂಟ್‍ಗಳು ಆಧ್ಯತೆ ಮೇಲೆ ಕೈಗೊಳ್ಳಲು ಎಲ್ಲಾ ಇಲಾಖೆಗಳಿಗೆ ಮುಖ್ಯ ಮಂತ್ರಿಯವರಿಂದಲೇ ಪತ್ರ ಬರೆಸುವುದು.
  9. ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯ ಬಗ್ಗೆ ವಿಶೇಷ ಆಸಕ್ತಿ ವಹಿಸಿ, ಪ್ರತಿ ಜಿಲ್ಲೆಯಲ್ಲೂ ಎಷ್ಟು ಉದ್ಯೋಗ ಸೃಷ್ಠಿಸಲಾಗಿದೆ ಎಂಬ ಬಗ್ಗೆ ವರದಿ ನೀಡುವುದು.
  10. ರಾಜ್ಯದಲ್ಲಿ ಪ್ರತಿಯೊಬ್ಬ ಅರ್ಹರಿಗೂ ವಸತಿ ಸೌಕರ್ಯ ಸೃಷ್ಠಿಸಲು ಆಧ್ಯತೆ ಮೇಲೆ ಕಾರ್ಯ ನಿರ್ವಹಿಸುವುದು.
  11. ರಾಜ್ಯದ ಎಲ್ಲಾ ರೈಲ್ವೆ ಯೋಜನೆಗಳಿಗೆ, ರಾಜ್ಯದ ಪಾಲಿನ ಹಣವನ್ನು ಶೀಘ್ರವಾಗಿ ನೀಡಿ, ಯೋಜನೆಯ ಶೀಘ್ರ ಅನುಷ್ಠಾನಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದು.
  12. ಸಾಮಾಜಿಕ ಭಧ್ರತೆಯಡಿ ಅರ್ಜಿ ಹಾಕಿದ 72 ಗಂಟೆಯೊಳಗೆ ಪಲಾನುಭವಿಗಳಿಗೆ ಸೌಲಭ್ಯ ದೊರೆಯವ ಯೋಜನೆಗೆ ಚಾಲನೆ ನೀಡಿರುವುದರಿಂದ ಯಾರು ವಂಚಿತರಾಗಬಾರದು.
  13. ನರೇಗಾ ಯೋಜನೆಯಡಿ ಹಿಂದಿನ ವರ್ಷದಲ್ಲಿ ಉಳಿಕೆಯಾಗಿರುವ ಮಾನವ ದಿನಗಳನ್ನು ಲೆಕ್ಕಾ ಹಾಕಿ ಈ ವರ್ಷ ಪೂರ್ಣ ಗೊಳಿಸುವುದು.
  14. ರಾಜ್ಯದ ಸ್ಮಾರ್ಟ್ ಸಿಟಿ ಯೋಜನೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವುದು.
  15. ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯದ ಎಲ್ಲಾ ಅರ್ಹ ಕುಟುಂಬಗಳಿಗೂ ಹಣ ಬಿಡುಗಡೆಗೆ ಸೂಕ್ತ ಕ್ರಮ ಕೈಗೊಳ್ಳುವುದು.
  16. ಫಸಲ್ ಬೀಮಾ ಯೋಜನೆಯ ಪ್ರಚಾರವನ್ನು ಮಾಡುವುದು.
  17. ಪ್ರಧಾನ ಮಂತ್ರಿ ಗ್ರಾಮಸಡಕ್ ಯೋಜನೆಗಳನ್ನು ಶೀಘ್ರವಾಗಿ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವುದು.
  18. ಜಲಜೀವನ್ ಮಿಷನ್ ಯೋಜನೆಯನ್ನು ಸಮರೋಪಾದಿಯಲ್ಲಿ ಪೂರ್ಣಗೊಳಿಸುವುದು, ಪ್ರತಿ ದಿವಸ ಎಷ್ಟು ಮನೆಗಳಿಗೆ ಸಂಪರ್ಕ ನೀಡಲಾಗಿದೆ ಎಂಬ ಬಗ್ಗೆ ಪ್ರತಿ ದಿವಸವೂ ಅಂಕಿ ಅಂಶ ಬಿಡುಗಡೆ ಮಾಡುವುದು.
  19. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಯೋಜನೆಗಳನ್ನು ಶೀಘ್ರವಾಗಿ ಪೂಣ್ಗೊಳಿಸುವುದು.
  20. ಯಾದಗಿರಿ, ರಾಯಚೂರು ಬೀದರ್ ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರದ ಯೋಜನೆ ಜೊತೆಗೆ ರಾಜ್ಯ ಸರ್ಕಾರವೂ ಸ್ಪಂಧಿಸಿ, ಅಪೌಷ್ಟಿಕ ಮಕ್ಕಳ ಬಗ್ಗೆ ವಿಶೇಷ ಗಮನ ಹರಿಸಿ ಸೌಲಭ್ಯ ನೀಡುವುದು. ರಾಜ್ಯಾದ್ಯಾಂತ ವಿಶೇಷ ಗಮನ ಹರಿಸಲು ಸೂಚನೆ.
  21. ರಾಜ್ಯಾಧ್ಯಾಂತ ಶಾಲಾ ಕಟ್ಟಡಗಳ ನಿರ್ಮಾಣ ಮಾಡುತ್ತಿರುವ ವಿಶೇಷ ಯೋಜನೆಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವುದು.
  22. ಮಧ್ಯಾಹ್ನದ ಬಿಸಿಯೂಟದ ಸಮರ್ಪಕ ನಿರ್ವಹಣೆ ಬಗ್ಗೆ ಚರ್ಚೆ ಮಾಡಲಾಯಿತು.
  23. ಸಂಸದರ ಅನುದಾನಗಳ ಬಳಕೆ ಬಗ್ಗೆ ಆಯಾ ಸಂಸದರೇ ವಿಶೇಷ ಗಮನ ಹರಿಸಲು ಸೂಚನೆ.
  24. ಸ್ಕಿಲ್ ಡೆಲಪ್ ಮೆಂಟ್ ಬಗ್ಗೆ ವಿಶೇಷ ಆಸಕ್ತಿ ವಹಿಸಲು ಸೂಚನೆ ನೀಡಿದರು.
  25. ಇತ್ಯಾದಿ ಯೋಜನೆಗಳ ಅನುಷ್ಠಾನದ ಬಗ್ಗೆ ಚರ್ಚೆ ನಡೆಸಲಾಯಿತು.

ಸಭೆಯಲ್ಲಿ ಮಂಡ್ಯ ಸಂಸದೆ ಶ್ರೀಮತಿ ಸುಮಲತಾ, ಶಾಸಕರು, ಸದಸ್ಯರುಗಳಾದ ಶ್ರೀ ವೈ.ಎಂ.ಬೆಂಡಗೇರಿ, ಶ್ರೀ ಕುಂದರನಹಳ್ಳಿ ರಮೇಶ್, ಶ್ರೀ ಶಿವಯ್ಯ ಸ್ವಾಮಿ,ಶ್ರೀ ಸುರೇಶ್ ಕುಮಾರ್, ಶ್ರೀಮತಿ ಸಂಗೀತಾ ಕಟ್ಟಿಮನಿ, ಮುಖ್ಯ ಕಾರ್ಯದರ್ಶಿ ಶ್ರೀಮತಿ ವಂದಿತಾ ಶರ್ಮ, ರಾಜ್ಯ ದಿಶಾ ಸಮಿತಿ ಸದಸ್ಯ ಕಾರ್ಯದರ್ಶಿ ಶ್ರೀಮತಿ ಶಾಲಿನಿ ರಜನೀಶ್,ಮುಖ್ಯ ಮಂತ್ರಿಯವರ ಕಾರ್ಯದರ್ಶಿ ಶ್ರೀ ಮಂಜುನಾಥ್ ಪ್ರಸಾದ್ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ಉಮಾಶಂಕರ್, ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಉಮಾಮಹದೇವನ್, ಶ್ರೀ ಎಲ್ ಕೆ ಅತೀಕ್, ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಶ್ರೀ ರಾಕೇಶ್ ಸಿಂಗ್, ಪ್ರವಾಸೋಧ್ಯಮ ಇಲಾಖೆಯ ಕಾರ್ಯದರ್ಶಿ ಶ್ರೀ ಪಂಕಜ್ ಕುಮಾರ್ ಪಾಂಡೆ, ಕೃಷಿ ಇಲಾಖೆ ಕಾರ್ಯದರ್ಶಿ ಶ್ರೀ ಶಿವಯೋಗಿ ಕಳಸದ್, ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಶ್ರೀ ಸೆಲ್ವಕುಮಾರ್, ಸೇರಿದಂತೆ ವಿವಿಧ ಇಲಾಖೆಯ ಅಪರಮುಖ್ಯ ಕಾರ್ಯದರ್ಶಿಯವರು, ಪ್ರಧಾನ ಕಾರ್ಯದರ್ಶಿಯವರು, ಕಾರ್ಯದರ್ಶಿರವರು, ನಿರ್ದೇಶಕರು, ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಾಧಿಕಾರಿಗಳು ಭಾಗವಹಿಸಿದ್ದರು.