27th July 2024
Share

TUMAKURU:SHAKTHIPEETA FOUNDATION

ಇತ್ತೀಚೆಗೆ ಬಿಜೆಪಿ ಮತ್ತು ಎಬಿವಿಪಿ ಕಾರ್ಯಕರ್ತರು ತಮ್ಮದೇ ಪಕ್ಷದ ನಾಯಕರಿಗೆ ಮತ್ತು ಪಕ್ಷಕ್ಕೆ ಒಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಇದನ್ನು ಅರಗಿಸಿಕೊಳ್ಳಲಾರದಷ್ಟು, ಕೇಂದ್ರ ಸರ್ಕಾರದ ಗೃಹಸಚಿವರಾದ ಶ್ರೀ ಅಮಿತ್ ಷಾ ರವರು ಖುದ್ಧು ಬೆಂಗಳೂರಿಗೆ ಬಂದು ಚರ್ಚೆ ನಡೆಸುವಷ್ಟು ಮಟ್ಟಕ್ಕೆ ಹೋಗಿದೆ ಎಂದರೆ ಸಾಮಾನ್ಯ ವಿಷಯವಲ್ಲ.

ಕೆಲವು ನಾಯಕರು ಉಡಾಫೆ ಹೊಡೆದಿದ್ದು ಆಯಿತು. ಅವರಿಗೂ ಸೋಶಿಯಲ್ ಮೀಡಿಯಾ ಮೂಲಕ ಮಂಗಳಾರತಿ ಆದವು. ಇದು ಒಂದು ಪಕ್ಷದ ಮಾತಲ್ಲ. ಒಬ್ಬ ನಾಯPನÀದ್ದಲ್ಲ. ಇದು ಎಲ್ಲಾ ಪಕ್ಷಗಳ ನಾಯಕರು ಮತ್ತು ಎಲ್ಲಾ ಪಕ್ಷಗಳು ಗಂಭೀರವಾಗಿ ತೆಗೆದುಕೊಂಡರೆ ಕ್ಷೇಮ.

ಇಲ್ಲದೇ ಇದ್ದರೆ ಶ್ರೀ ಲಂಕಾ ಪರಿಸ್ಥಿತಿ ಮತ್ತು ಬಿಜೆಪಿ ಮತ್ತು ಎಬಿವಿಪಿ ಕಾರ್ಯಕರ್ತರ ಸಹನೆ ಕಟ್ಟೆ ಹೊಡೆದಿದ್ದು ಮುಂದೊಂದು ದಿನ ಎಲ್ಲರಿಗೂ ಎಚ್ಚರಿಕೆ ಗಂಟೆ ಆದೀತು. ಎಲ್ಲಾ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಲೇ ಬೇಕು.

ಕಾರ್ಯಕರ್ತರು ಕಣ್ಣು ಮುಚ್ಚಿಕುಳಿತು ಕೊಂಡಿರುವುದಿಲ್ಲ, ನಮ್ಮ ನಾಯಕರು ಮಾಡುತ್ತಿರುವ ಆಸ್ತಿ ಎಷ್ಟು, ನಮ್ಮ ನಾಯಕರು ಯಾರಿಗೆ ಕಾಮಗಾರಿ ಗುತ್ತಿಗೆ ಕೊಡುತ್ತಿದ್ದಾರೆ, ಯಾರ ಬಳಿ ಒಡನಾಟ ಜಾಸ್ತಿ ಇಟ್ಟುಕೊಂಡಿದ್ದಾರೆ.ಯಾರನ್ನು ಅಡುಗೆ ಮನೆಗೆ ಕರೆಯುತ್ತಾರೆ, ನಮ್ಮನ್ನು ಅಧಿಕಾರ ಇದ್ದಾಗ ಯಾವ ಮಟ್ಟದಲ್ಲಿ ನೋಡುತ್ತಿದ್ದಾರೆ. ಅಧಿಕಾರ ಇಲ್ಲದಾಗ ಯಾವ ರೀತಿ ನೋಡುತ್ತಿದ್ದರು.

ಮುಂದೆ ರಾಜಕೀಯದಲ್ಲಿ ಹೆಂಡತಿ, ಮಕ್ಕಳು, ಮೊಮ್ಮಕ್ಕಳು, ಸೂಳೆಯರು, ಸಹೋದರರು, ಬ್ಲಾಕ್ ಮೇಲ್ ಮಾಡುವವರು ಹಾಗೂ ಹಣ ನೀಡುವವರಿಗೆ ಟಿಕೆಟ್ ನೀಡುವುದು ಹೀಗೆ ಎಲ್ಲವನ್ನು ಗಂಭೀರವಾಗಿ ಪರಿಗಣಿಸುತ್ತಾರೆ.

ಪಕ್ಷಕ್ಕಾಗಿ, ತಮ್ಮ ನಾಯಕನಿಗಾಗಿ ಹಗಲು ಇರುಳು ಪ್ರಾಮಾಣಿಕವಾಗಿ ದುಡಿಯುವ ಕಾರ್ಯಕರ್ತನು ಒಂದು ಶಿಪಾರಸ್ಸು ಪತ್ರ ಪಡೆಯಲು ಲಂಚ ನೀಡುವ ಪರಿಸ್ಥಿತಿ ಬಂದಿದೆ, ಒಂದು ಸಣ್ಣ ಕಾಮಗಾರಿ ಗುತ್ತಿಗೆ ಪಡೆಯಲು ಲಂಚ ನೀಡುವ ಸ್ಥಿತಿ ಬಂದೊದಗಿದೆ.

ನಾಯಕರ ಕಚೇರಿಯಲ್ಲಿ ಲಂಚ, ಎಣ್ನೆ ಇತ್ಯಾದಿ ಬೇಡಿಕೆ ಇದ್ದರೆ. ನಾಯಕರು ಎನೋ ತಿಂದು ಬಂದವನೆ ಎಂದು ಅಣಕಿಸುತ್ತಾರೆ. ಇದೇ ರೀತಿ ವರ್ಗಾವಣೆಗೆ ಪತ್ರ ತೆಗೆದುಕೊಂಡು ನಾಯಕರು ಮುಖ್ಯ ಮಂತ್ರಿಯವರ ಬಳಿ ಹೋದಾಗ ಅಲ್ಲಿಯೂ ಇವರು ಏನೋ ತಿಂದು ಬಂದವರೇ ಎಂಬ ಭಾವನೆ ಅವರಿಗೂ ಬರುವುದಿಲ್ಲವಾ?

ಎಲ್ಲಾ ಹಂತದಲ್ಲೂ ಕಾರ್ಯಕರ್ತರು, ಪಕ್ಷ ಮತ್ತು ನಾಯಕನ ಮಧ್ಯೆ ಬಿರುಕು ಸಹಜವಾದರೂ ಸಹನೆ ಮೀರುವಷ್ಟು ಒಳ್ಳೆಯದಲ್ಲ. ಅಧಿಕಾರವೇ ಹೀಗೆ?