15th January 2025
Share

TUMAKURU:SHAKTHIPEETA FOUNDATION

75 ನೇ ವರ್ಷದ ಸ್ವಾತಂತ್ರ್ಯದ ದಿವಸ ದೇಶದ ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರು ಇದೂವರೆಗೂ ಮಾಜಿ ಪ್ರಧಾನಿಯವರು ಘೋಷಣೆ ಮಾಡಿದ ಜೈಜವಾನ್, ಜೈ ಕಿಸಾನ್, ಜೈ ವಿಜ್ಞಾನ್ ಜೊತೆಗೆ ಜೈ ಅನುಸಂಧಾನ್ ಸೇರ್ಪಡೆ ಮಾಡಿ ಘೋಷಣೆ ಮಾಡಿದ್ದಾರೆ.

ದೇಶದ ಪ್ರಧಾನಿಯವರ ಕನಸು ಅಭಿವೃದ್ಧಿಯಲ್ಲಿ ರಾಜ್ಯ ರಾಜ್ಯಗಳಿಗೆ ಸ್ಪರ್ಧೆ ಏರ್ಪಡಬೇಕು. 2047 ಕ್ಕೇ ದೇಶ ವಿಶ್ವದಲ್ಲಿಯೇ ಅಭಿವೃದ್ಧಿ ಹೊಂದಿದ ರಾಷ್ಟ್ರ ನಿರ್ಮಾಣ ಮಾಡಲು ಜನತೆಯ ಸಹಕಾರ ಕೋರಿದ್ದಾರೆ.

ಹತ್ತಾರು ಕನಸುಗಳನ್ನು ಹಂಚಿಕೊಂಡಿದ್ದಾರೆ. ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಹೆಚ್ಚಿನ ಅನುದಾನ ಪಡೆಯಲು ಸ್ಟ್ರಾಟಜಿ ಸಿದ್ಧಪಡಿಸಬೇಕಾದರೆ, ಕರ್ನಾಟಕ ರಾಜ್ಯ ಮಟ್ಟದ ದಿಶಾ ಸಮಿತಿ ಹಾಗೂ 31 ಜಿಲ್ಲೆಗಳ ದಿಶಾ ಸಮಿತಿಯ ಕಾರ್ಯವೈಖರಿಯ ಬಗ್ಗೆ ಸಂಶೋಧನೆ ನಡೆಯಬೇಕಿದೆ.ಕೇಂದ್ರ ಅನುದಾನದ ಸಂಶೋಧನೆ ನಡೆಯಬೇಕಿದೆ.

ರಾಜ್ಯದ ಮುಖ್ಯ ಮಂತ್ರಿಯವರೇ ರಾಜ್ಯ ದಿಶಾ ಸಮಿತಿ ಅಧ್ಯಕ್ಷರಾಗಿದ್ದರೂ, ಕೇಂದ್ರ ಸರ್ಕಾರದ ಸಚಿವಾಲಯವಾರು, ಯಾವ ಯೋಜನೆಗಳು ನಮ್ಮ ರಾಜ್ಯದಲ್ಲಿ ನಡೆಯುತ್ತಿವೆ, ಎಷ್ಟು ಹಣ ನಮ್ಮ ರಾಜ್ಯಕ್ಕೆ ಬರಲಿದೆ ಎಂಬ ಕನಿಷ್ಠ ಮಾಹಿತಿ ಇದೂವರೆಗೂ ಒಂದು ಕಡೆ ಸಂಗ್ರಹ ಮಾಡಲು ಆಗಿಲ್ಲವಲ್ಲ ಎಂಬ ಕೊರಗು ಬಹುಷಃ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೂ ಇರಬಹುದು.

ಯೋಜನಾ ಇಲಾಖೆಯ ಅಪರಮುಖ್ಯ ಕಾರ್ಯದರ್ಶಿರವರು ಮತ್ತು ಅವರ ದಿಶಾ ತಂಡ ಶತಾಯ ಗತಾಯ ಮಾಹಿತಿಗಳನ್ನು ಒಂದು ಕಡೆ ಸಂಗ್ರಹ ಮಾಡಲೇ ಬೇಕು ಎಂಬ ಆಶಾಭಾವನೆ ಹೊಂದಿದ್ದಾರೆ.

ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು ದಿನಾಂಕ:05.08.2022 ರಂದು ನಡೆಸಿದ ಪ್ರಥಮ ಸಭೆಯಲ್ಲಿ ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳ ಮಾಹಿತಿ ಸಂಗ್ರಹ ಮಾಡಲು ಖಡಕ್ ಆಗಿ ಸೂಚಿಸಿದ್ದಾರೆ. ಜೊತೆಗೆ  ಸದಸ್ಯರಿಗೆ ನೀವೂ ನೀಡುವ ವರದಿ ಆದಾರದ ಮೇಲೆಯೇ ಸಭೆ ಅಜೆಂಡಾ ನಿಗದಿಗೊಳಿಸಲಾಗುವುದು.

ನೀವೂ ಕುಳಿತುಕೊಳ್ಳಬೇಡಿ, ರಾಜ್ಯಾಧ್ಯಾಂತ ಸಂಚರಿಸಿ, ಕಚೇರಿಗಳಿಗೆ ಭೇಟಿ ನೀಡಿ, ಕಾಮಗಾರಿ ಸ್ಥಳಗಳಿಗೆ ಬೇಟಿ ನೀಡಿ, ವಸ್ತು ನಿಷ್ಠ ವರದಿ ನೀಡಲು ಸೂಚಿಸಿದ್ದಾರೆ. ಸದಸ್ಯರಿಗೆ ನಿಯಮ ಪ್ರಕಾರ ಇರುವ ಸೌಲಭ್ಯ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ನಾನು ಈ ಬಗ್ಗೆ ದಿನಾಂಕ:16.08.2022 ರಂದು ದಿಶಾ ಸಮಿತಿ ಸದಸ್ಯ ಕಾರ್ಯದರ್ಶಿರವರಿಗೆ ಸುಮಾರು 45 ಪುಟಗಳ, ಕೇಂದ್ರ ಸರ್ಕಾರದ ಇಲಾಖಾವಾರು ಯೋಜನೆಗಳವಾರು ಅಧ್ಯಯನ ಆರಂಭ ಮಾಡಿರುವ ಪತ್ರ ಬರೆದು, ಈ ಮಾದರಿಯಲ್ಲಿ ಮೊದಲನೇ ಹಂತದಲ್ಲಿ ನಮ್ಮ ರಾಜ್ಯಕ್ಕೆ ಮಂಜೂರಾಗಿರುವ ಯೋಜನೆಗಳ ಮಾಹಿತಿ ಸಂಗ್ರಹಮಾಡೋಣ ಎಂದು ಮನವಿ ಮಾಡಿದ್ದೇನೆ.

ನಾನು ಈಗಾಗಲೇ ಬರೆದಿರುವ ಎಲ್ಲಾ ಪತ್ರಗಳ ಸಂಗ್ರಹಣೆಯೇ ಒಂದು ಅಧ್ಯಯನ ಗ್ರಂಥವಾಗಲಿದೆ. ಇಲಾಖೆ ಅಭಿಪ್ರಾಯಕ್ಕೋಸ್ಕರ ಪತ್ರಗಳನ್ನು ಬರೆಯಲಾಗಿದೆ. ಆರಂಭದಿಂದ ಇದೂವರೆಗೂ ಬರೆದಿರುವ  ಪತ್ರಗಳ ಅಂಶÀಗಳು ಮತ್ತು ಅಗತ್ಯವಿರುವ ಇನ್ನೂ ಕೆಲವಾರು ಮಾಹಿತಿಗಳ ಕಿರು ಪುಸ್ತಕ ಸಿದ್ಧವಾಗಲಿದೆ.

ಪ್ರಧಾನಿಯವರ ಜೈ ಅನುಸಂಧಾನ್ ಘೋಷಣೆಯ ಅನುಷ್ಠಾನಕ್ಕೆ ಒಂದು ಸಣ್ಣ ಪ್ರಯತ್ನ ಆರಂಭಿಸಲಾಗಿದೆ.

ಆಸಕ್ತರು ಸಹಕರಿಸ ಬಹುದಾಗಿದೆ.