9th October 2024
Share

TUMAKURU:SHAKTHIPEETA FOUNDATION

ಪ್ರಧಾನಿ ಶ್ರೀ ನರೇಂದ್ರಮೋದಿಯವರ ಕನಸಿನ ಸ್ಮಾರ್ಟ್ ಸಿಟಿ ಮೋದಿಯವರ ಕನಸಿನಂತೆ ಇಡೀ ದೇಶದಲ್ಲಿಯೇ ಅನುಷ್ಠಾನವಾಗಲಿಲ್ಲವಂತೆ. ಪರಿಕಲ್ಪನೆ ಮಾತ್ರ ಬಹಳ ಚೆನ್ನಾಗಿಯೇ ಇದೆ, ಉತ್ತಮವಾದ ಯೋಜನೆಗಳ ಆಯ್ಕೆ, ಅಗತ್ಯವಿರುವ ಕಾಮಗಾರಿಗಳ ಆಯ್ಕೆ, ಸಕಾಲದಲ್ಲಿ ಕಾಮಗಾರಿಗಳ ಪೂರ್ಣಗೊಳ್ಳುವಿಕೆ ಅನನುಭವಿಗಳಿಂದ ಹಾಳಾಗಿದೆಯಂತೆ. 

ಆದರೂ ಈ ಯೋಜನೆಯಿಂದ ಅಲ್ಪ-ಸ್ವಲ್ಪ ಕಾಮಗಾರಿಗಳು ಆಗಿರುವುದು ತುಸು ನೆಮ್ಮದಿಯ ವಿಚಾರವಂತೆ. ಕೇಂದ್ರ ಸರ್ಕಾರ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಸೂಚನೆ ನೀಡಿರುವುದು ನಿಜಕ್ಕೂ ನಮಗೆ ನಾಚಿಕೆ ಆಗುತ್ತಿದೆ.

ಕೂಡಲೇ ನಿಗದಿತ ಅವಧಿಯೊಳಗೆ ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸುವುದು ಅಗತ್ಯವಾಗಿದೆ. ರಾಜ್ಯದ  ಬೆಂಗಳೂರು, ಮಂಗಳೂರು.ಶಿವಮೊಗ್ಗ, ತುಮಕೂರು, ಹುಬ್ಬಳ್ಳಿ,ದಾವಣಗೆರೆಯಲ್ಲಿ ಬಾಕಿ ಇರುವ ಕಾಮಗಾರಿಗಳು ಮತ್ತು ಅನುದಾನದ ಈ ಮಾಹಿತಿ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿರುವುದನ್ನೆ ಇಲ್ಲಿ ಹಾಕಲಾಗಿದೆ.

ಈ ಎಲ್ಲಾ ಸ್ಮಾರ್ಟ್ ಸಿಟಿಗಳಿಗೂ ಭೇಟಿ ನೀಡಿ, ಒಂದು ವರದಿಯನ್ನು ಮಾನ್ಯ ಮುಖ್ಯ ಮಂತ್ರಿಗಳ ಅಧ್ಯಕ್ಷತೆಯ ರಾಜ್ಯ ಮಟ್ಟದ ದಿಶಾ ಸಮಿತಿಗೆ ನೀಡಲಕೇಂದ್ರ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಯೊಬ್ಬರು ಸಲಹೆ ನೀಡಿದ್ದಾರೆ.

ರಾಜ್ಯದ ಯಾವುದೇ ನಗರಗಳ ಆರ್ಥಿಕ ಪರಿಸ್ಥಿತಿ ಚೆನ್ನಾಗಿ ಇಲ್ಲ, ಬಹುತೇಕ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಾಧ್ಯಾವಾಗಿಲ್ಲ. ಕೆಳಕಂಡ 9 ಅಂಶಗಳ ಬಗ್ಗೆ ನಿಖರವಾದ ವಸ್ತು ನಿಷ್ಠ ವರದಿ ನೀಡಲು ಸಲಹೆ ನೀಡಿರುವುದರಿಂದ, ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯನಾಗಿ ಎಲ್ಲಾ ನಗರಗಳಿಗೂ ಪ್ರವಾಸ ಮಾಡಲಿದ್ದೇನೆ.

  1. ಪ್ರತಿ ಮನೆಗೂ ಕುಡಿಯುವ ನೀರಿನ ಸಂಪರ್ಕ.
  2. ಪ್ರತಿ ಮನೆಗೂ ಯುಜಿಡಿ ಸಂಪರ್ಕ.
  3. ರಾಜಕಾಲುವೆ ಮತ್ತು ಮಳೆ ನೀರಿನ ಚರಂಡಿಗಳ ಸಮಗ್ರ ಅಭಿವೃದ್ಧಿ.
  4. ಹಸಿರು ಯೋಜನೆ.
  5. ನಗರದ ಕೆರೆಕಟ್ಟೆಗಳಿಗೆ ಮಳೆ ನೀರು ಅಥವಾ ನದಿ ನೀರು ಸಂಗ್ರಹ.
  6. ಜಿಐಎಸ್ ಲೇಯರ್
  7. ಪ್ರತಿಯೊಬ್ಬರಿಗೂ ಸೂರು.
  8. ನಗರಗ¼ಲ್ಲಿರುವÀ ರೈಲ್ವೇ ಮೇಲು ಸೇತುವೆ ಅಥವಾ ಕೆಳಸೇತುವೆ ಕಾಮಗಾರಿ.
  9. ಅಗತ್ಯವಿದ್ದಲ್ಲಿ ರಿಂಗ್ ರಸ್ತೆ ಮತ್ತು ರೇಡಿಯಲ್ ರಸ್ತೆ.