27th July 2024
Share

TUMAKURU:SHAKTHIPEETA FOUNDATION

 ಇಡೀ ವಿಶ್ವವೇ ನಮ್ಮ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರ ನಾಯಕತ್ವವನ್ನು ಒಪ್ಪಿದೆ. ಜೊತೆಗೆ ಇವರ ನಾಗಾಲೋಟ ನೋಡಿ ಒಳಗೊಳಗೆ ಖುದಿಯುತ್ತಿದ್ದಾರೆ. ಮೋದಿಯವರ ಶತ್ರುಗಳು ಸಹ ನಮ್ಮ ದೇಶಕ್ಕೆ ಇಂಥಹ ಪ್ರಧಾನಿಯವರ ಅಗತ್ಯ ಇತ್ತು ಎಂದು ರಹಸ್ಯವಾಗಿ ಚರ್ಚೆ ಮಾಡುತ್ತಾರೆ.

75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ದಿವಸ ಕೆಂಪುಕೋಟೆಯಿಂದ ದೇಶದ ಜನತೆಗೆ ಪ್ರಧಾನಿಯವರು ಕರೆ ಕೊಟ್ಟ ಎರಡು ವಿಚಾರಗಳು ಜನರಿಗೆ ಖುಷಿಕೊಟ್ಟರೂ ರಾಜಕಾರಣಿಗಳಿಗೆ, ಭ್ರಷ್ಠಾಚಾರಿಗಳಿಗೆ ನಡುಕ ಉಂಟಾಗಿದೆ.

ದೇಶದ ಪ್ರಧಾನಿಯೊಬ್ಬರು ಭ್ರಷ್ಠಾಚಾರ ಮತ್ತು ಕುಟುಂಬ ರಾಜಕಾರಣ ಮಿತಿ ಮೀರಿದೆ. 2047 ರ ವೇಳೆಗೆ ದೇಶದ ಅಭಿವೃದ್ಧಿ ಯಾಗಬೇಕಾದರೆ, ಇವೆರಡಕ್ಕೂ ಕಡಿವಾಣ ಹಾಕಬೇಕಿದೆ. ನಾನು ಹೋರಾಟಕ್ಕೆ ಸಿದ್ಧನಿದ್ದೇನೆ, ದೇಶವಾಸಿಗಳು ನನ್ನೊಂದಿಗೆ ಕೈಜೋಡಿಸಿ ಎಂದಿರುವುದು ಸಾಮಾನ್ಯ ಮಾತಲ್ಲ.

ಮೋದಿಯವರು ಯಾವುದೇ ಮಾತನಾಡಿದರೆ, ಸುಮ್ಮನೆ ಕೂರುವ ಜಾಯಮಾನದವರಲ್ಲ, ಕಡಿವಾಣ ಹಾಕಲು ಚಿಂತನೆ ನಡೆಸುತ್ತಿದ್ದಾರೆ.ಎರಡು ವಿಷನ್ ಗ್ರೂಪ್‍ಗಳು ಪ್ರತ್ಯೇಕವಾಗಿ, ಈ ಬಗ್ಗೆ ಸಂಶೋಧನೆ ಮಾಡುತ್ತಿದ್ದಾರೆ, ಎಂಬ ಗುಸುಗುಸು ಮೋದಿಯವರ ಪಡಸಾಲೆಯಲ್ಲಿ ಜೋರಾಗಿದೆಯಂತೆ.

ಬಿಜೆಪಿಯ ಕುಟುಂಬ ರಾಜಕಾರಣಿಗಳ ಜೊತೆಗೆ, ಎಲ್ಲಾ ಪಕ್ಷಗಳ ರಾಜಕಾರಣಿಗಳಿಗೂ ಇದು ಬಿಸಿ ತುಪ್ಪವಾಗಿದೆ. ಭ್ರಷ್ಠಾಚಾರಿಗಳು ಇಂದು ಎಲ್ಲಾ ವರ್ಗದಲ್ಲೂ ವ್ಯಾಪಿಸಿಕೊಂಡಿದ್ದಾರೆ.

ಭ್ರಷ್ಠಾಚಾರ ಪ್ರಪಂಚ ಹುಟ್ಟಿದಾಗಲೂ ಕಾಣಿಕೆಯ ರೂಪದಲ್ಲಿ ಇತ್ತಂತೆ, ಗುರುದಕ್ಷಿಣೆ, ಕಾಣಿಕೆ ಇತ್ಯಾದಿ, ಈಗ ಮೂಲಭೂತ ಹಕ್ಕಿನಂತೆ ಲಂಚದ ರೂಪ ಪಡೆದುಕೊಂಡಿದೆಯಂತೆ. ಲಂಚ ಕೊಡುವವರು ಮತ್ತು ಲಂಚ ಪಡೆಯುವವರು ಇಬ್ಬರು ಅಪರಾಧಿಗಳಂತೆ.

ಈ ಎರಡು ವಿಚಾರಗಳು ದೇಶದ ಜನರಿಗೆ ಕುತೂಹಲ ಮೂಡಿಸಿದೆ. ಎಲ್ಲಿಂದ ಹೇಗೆ ಆರಂಭವಾಗಲಿದೆ, ಕಾದು ನೋಡೋಣ? ಪ್ರತಿ ಗ್ರಾಮದಲ್ಲಿ ಪ್ರಾಥಮಿಕ ಶಾಲೆಗಳಿದ್ದಂತೆ, ಪ್ರತಿ ಗ್ರಾಮಕ್ಕೂ ಒಂದೊಂದು ಜೈಲು ಕಟ್ಟಡದಿಂದ ಆರಂಭವಾಗಬೇಕಿದೆ ಎಂಬುದು ಕೆಲವರ ವಾದವಾದರೆ. ಇನ್ನೂ ಕೆಲವರು ಡಿಜಿಟಲ್ ಕುಣಿಕೆ ಬಿದ್ದರೂ ಆಶ್ಚರ್ಯವಿಲ್ಲ ಎನ್ನುತ್ತಾರೆ.

ಹೌದು ಈಗ ಸರ್ಕಾರದ ಬಳಿ ಪ್ರತಿಯೊಬ್ಬರ ಪ್ರತಿಯೊಂದು ವ್ಯವಹಾರದ ಚಲನ ವಲನದ ಡಿಜಿಟಲ್ ದಾಖಲೆ, ನಮಗೆ ಅರವಿಲ್ಲದಂತೆ ಸಂಗ್ರಹವಾಗಿದೆ.