TUMAKURU:SHAKTHIPEETA FOUNDATION
- ರಾಜ್ಯದ 31 ಜಿಲ್ಲೆಗಳಿಗೂ ಒಬ್ಬೊಬ್ಬ ಪ್ರತಿನಿಧಿ ನೇಮಕ ಮಾಡುವುದು, ಕೇಂದ್ರ ಸರ್ಕಾರದ ಮಾರ್ಗದರ್ಶಿ ಸೂತ್ರದಲ್ಲಿದೆ.
- ಅಧಿಕಾರಿ ಅಥವಾ ನಿವೃತ್ತ ಅಧಿಕಾರಿ ಅಥವಾ ಆಸಕ್ತಿ ಇರುವವರನ್ನು ನೇಮಕ ಮಾಡುವುದು ಒಳ್ಳೆಯದು.
- ಆಯಾ ತವರು ಜಿಲ್ಲೆಯ ಅಥವಾ ಆಸಕ್ತಿ ಇರುವ ಜಿಲ್ಲೆಯ ಅಭಿವೃದ್ಧಿಗೆ ಆಸಕ್ತಿ ಇರುವ ಅಧಿಕಾರಿಗಳÀ ಪ್ಯಾನಲ್ ಮಾಡಿದ ನಂತರ ಮಾನ್ಯ ಮುಖ್ಯ ಮಂತ್ರಿಯವರಿಗೆ ರಾಜ್ಯ ಮಟ್ಟದ ಸದಸ್ಯ ಕಾರ್ಯದರ್ಶಿಯವರು ಪಟ್ಟಿ ನೀಡ ಬಹುದು.
- ಪ್ರತಿ ಜಿಲ್ಲೆಯ ಅಭಿವೃದ್ಧಿಗೆ ಆಸಕ್ತಿ ಇರುವ ಅಧಿಕಾರಿಗಳು ಅಥವಾ ನಿವೃತ್ತ ಅಧಿಕಾರಿಗಳು ಅಥವಾ ಪರಿಣಿತ ತಜ್ಞರ ಅಥವಾ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಪ್ಯಾನಲ್ ಮಾಡಿದ ನಂತರ ಮಾನ್ಯ ಮುಖ್ಯ ಮಂತ್ರಿಯವರಿಗೆ ಸದಸ್ಯ ಕಾರ್ಯದರ್ಶಿಯವರು ಪಟ್ಟಿ ನೀಡ ಬಹುದು.
- ರಾಜ್ಯ ಸರ್ಕಾರ ಸೂಪರ್ 30 ಇಂಜಿನಿಯರಿಂಗ್ ಕಾಲೇಜುಗಳ ಘೋಷಣೆ ಮಾಡಿರುವ ಇಂಜಿನಿಯರಿಂಗ್ ಕಾಲೇಜಿನ ಪ್ರತಿನಿಧಿಗಳನ್ನು ನೇಮಕ ಮಾಡಬಹುದು.
- ರಾಜ್ಯದಲ್ಲಿರುವ ಸರ್ಕಾರಿ ಟ್ರಸ್ಟ್ ಗಳ ಪದಾಧಿಕಾರಿಗಳನ್ನು ನೇಮಕ ಮಾಡಬಹುದು.
- ರಾಜ್ಯದ ವಿಶ್ವ ವಿದ್ಯಾಲಯಗಳ ಪ್ರತಿನಿಧಿಗಳನ್ನು ನೇಮಕ ಮಾಡಬಹುದು. ಅಭಿವೃದ್ಧಿ ಪೀಠಗಳಿಗೆ ಜೀವ ತುಂಬ ಬೇಕಿದೆ.
- ರಾಜ್ಯದ ವಿಶ್ವ ವಿದ್ಯಾನಿಲಯಗಳಲ್ಲಿರುವ ಅಭಿವೃದ್ಧಿ ಪೀಠಗಳ ನಿರ್ದೇಶಕರನ್ನು ನೇಮಕ ಮಾಡಬಹುದು.
- ಪ್ರತಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಿಸ್ವಾರ್ಥವಾಗಿ ಶ್ರಮಿಸುತ್ತಿರುª ವ್ಯಕ್ತಿ ಅಥವಾ ಸಂಸ್ಥೆಗಳನ್ನು ಖಾಯಂ ಸದಸ್ಯರಾಗಿ ನೇಮಕ ಮಾಡುವುದು.
ಇವರ ಕರ್ತವ್ಯಗಳೇನು?
- ಆಯಾ ಜಿಲ್ಲಾ ಮಟ್ಟದ ದಿಶಾ ಸಮಿತಿಯ ಕಾರ್ಯವೈಖÀರಿಗಳ ಬಗ್ಗೆ ರಾಜ್ಯ ದಿಶಾ ಸಮಿತಿಗೆ ವರದಿ ನೀಡುವುದು.
- ಕೇಂದ್ರ ಮತ್ತು ರಾಜ್ಯ ಸರ್ಕಾರದ ಇಲಾಖಾವಾರು, ಸಚಿವಾಲಯವಾರು 62 ಗ್ರೂಪ್ ಗಳನ್ನು ರಚಿಸಲು ಈಗಾಗಲೇ ಸಲಹೆ ನೀಡಲಾಗಿದೆ. ಒಬ್ಬೊಬ್ಬರು ಸಹ ಎರಡು ಗ್ರೂಪ್‍ನ ಹೆಚ್ಚುವರಿ ಹೊಣೆಗಾರಿಕೆ ಪಡೆದು ಯೋಜನೆಯ ಸಂಪೂರ್ಣ ರಿಯಲ್ ಟೈಮ್ ಡಾಟಾ ಸಂಗ್ರಹಣೆ ಮಾಡುವುದು.
- ಕೇಂದ್ರ ಸರ್ಕಾರದ 43 ಯೋಜನೆಗಳ ಬಗ್ಗೆ ಒಂದು ಅಥವಾ ಎರಡು ಯೋಜನೆಯ ಸಂಪೂರ್ಣ ರಿಯಲ್ ಟೈಮ್ ಡಾಟಾ ಸಂಗ್ರಹಣೆ ಮಾಡುವುದು.
ಆಸಕ್ತರು ಸಲಹೆ ನೀಡಬಹುದು.
ಈ ಅಭಿವೃದ್ಧಿ ತಂಡ ಕಟ್ಟುವುದು ಬಹಳ ಪ್ರಮುಖವಾಗಿದೆ. ನಾಮಕಾವಸ್ತೆ ಪಟ್ಟಿ ಸರಿಯಲ್ಲ. ಇದಕ್ಕಾಗಿ ಬಹಳ ಸರ್ಕಸ್ ಮಾಡುವುದು ಸೂಕ್ತವಾಗಿದೆ.