20th April 2024
Share

TUMAKURU:SHAKTHI PEETA FOUNDATION 

ಪತ್ರದ ಸಾರಾಂಶ

ಗೆ.

ಶ್ರೀಮತಿ ಶಾಲಿನಿ ರಜನೀಶ್ ರವರು

ಅಪರ ಮುಖ್ಯ ಕಾರ್ಯದರ್ಶಿ.

ಯೋಜನೆ,ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ.

ಹಾಗೂ ಸದಸ್ಯ ಕಾರ್ಯದರ್ಶಿ. ರಾಜ್ಯ ಮಟ್ಟದ ದಿಶಾ ಸಮಿತಿ ಕರ್ನಾಟಕ.

ಬಹು ಮಹಡಿಗಳ ಕಟ್ಟಡ. ಬೆಂಗಳೂರು .

ಮಾನ್ಯರೇ

ವಿಷಯ: ತನಿಖಾ ವರದಿಯ ಮಾದರಿಗೆ ಅನುಮೋದನೆ ನೀಡುವುದು ಮತ್ತು ಎಲ್ಲಾ ಇಲಾಖೆಗಳಿಗೆ ಸ್ಪಂಧಿಸಲು ಪತ್ರ ಬರೆಯುವ ಬಗ್ಗೆ.

 ಕೇಂದ್ರ ಸರ್ಕಾರದ ದಿಶಾ ಮಾರ್ಗಸೂಚಿಯನ್ವಯ ಹಾಗೂ ದಿನಾಂಕ:05.08.2022 ರಂದು ನಡೆದ ದಿಶಾ ಸಮಿತಿ ಸಭೆಯಲ್ಲಿ, ಮಾನ್ಯ ಮುಖ್ಯ ಮಂತ್ರಿಯವರು ಆದೇಶ ನೀಡಿದ ಪ್ರಕಾರ, ವಿವಿಧ ಕಚೇರಿಗಳ ಅಧಿಕಾರಿಗಳಿಗೆ ಡಿಜಿಟಲ್ ಮಾಹಿತಿ ನೀಡಿ ಅಥವಾ ಪತ್ರ ಬರೆದು ಅಥವಾ ದೀಢೀರ್ ಭೇಟಿ ನೀಡುವ ಮೂಲಕ, ನಾನು ಈಗಾಗಲೇ ಈ ಕೆಳಕಂಡ ಕಚೇರಿಗಳಿಗೆ ಬೇಟಿ ನೀಡಿ, ವಿವಿಧ ಯೋಜನೆಗಳ ಬಗ್ಗೆ ತನಿಖೆ ನಡೆಸಲಾಗಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.

  1. ಮೆಟ್ರೋ ಬೆಂಗಳೂರು.
  2. ಡಲ್ಟ್ ಬೆಂಗಳೂರು.
  3. ಸ್ಕಿಲ್ ಕಾರ್ಪೋರೇಷನ್ ಬೆಂಗಳೂರು.
  4. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ,ಬೆಂಗಳೂರು.
  5. ಬೆಸ್ಕಾಂ ಎಸ್.ಇ.ಕಚೇರಿ ತುಮಕೂರು.
  6. ಗ್ರಾಮೀಣ ನೀರು ಸರಬಾರಾಜು ಇಇ ಕಚೇರಿ, ತುಮಕೂರು.
  7. ತುಮಕೂರು ಮಹಾನಗರ ಪಾಲಿಕೆ, ತುಮಕೂರು.
  8. ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ತರಬೇತಿ ಸಂಸ್ಥೆ, ಮೈಸೂರು.
  9. ಕೇಂದ್ರ ಸರ್ಕಾರದಿಂದ ಅನುದಾನ ಪಡೆದಿರುವ ಎನ್.ಜಿ.ಓ ಚಿತ್ರದುರ್ಗ.

ತನಿಖಾ ವರದಿಯನ್ನು ಈ ಕೆಳಕಂಡ ಮಾದರಿಯಲ್ಲಿ ಸಿದ್ಧಪಡಿಸಿ, ಅಧಿಕಾರಿಗಳನ್ನು ಸಹಿಹಾಕಲು ಕೇಳಿದಾಗ ಮತ್ತು ನಾನು ಕೇಳಿದ ದಾಖಲೆಗಳ ಪ್ರತಿಗಳನ್ನು ನೀಡಲು ಕೇಳಿದಾಗ, ಬಹುತೇಕ ಅಧಿಕಾರಿಗಳು ಸಾರ್ ದಯವಿಟ್ಟು, ಮಾನ್ಯ ಮುಖ್ಯ ಮಂತ್ರಿಯವರಿಂದ ಅಥವಾ ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿಯವರಿಯವರಿಂದ, ನಮ್ಮ ಇಲಾಖೆಯ ಉನ್ನತ ಅಧಿಕಾರಿÀಗಳಿಗೆ ಅಥವಾ ಜಿಲ್ಲಾಧಿಕಾರಿಗಳಿಗೆ ಅಥವಾ ಜಿಲ್ಲಾ ಮಟ್ಟದ ದಿಶಾ ಸಮಿತಿಯ ಕಾರ್ಯದರ್ಶಿಯವರಿಗೆ ಬರೆದ ಪತ್ರ ಪ್ರತಿ ನೀಡಿದರೆ ಒಳ್ಳೆಯದು ಎಂಬ ಸಲಹೆ ನೀಡಿರುತ್ತಾರೆ.

 ಆದ್ದರಿಂದ ಈ ಕೆಳಕಂಡ ಪ್ರಕಾರ ಅಥವಾ ತಾವೂ ಅಂತಿಮಗೊಳಿಸುವ ಮಾದರಿ ತನಿಖಾ  ವರದಿ ಪ್ರತಿಯನ್ನು ಎಲ್ಲಾ ಇಲಾಖೆಗಳಿಗೆ ರವಾನಿಸಲು ಈ ಮೂಲಕ ಕೋರಿದೆ. 

ಮಾದರಿ ತನಿಖಾ  ವರದಿ ಕರಡು ಪ್ರತಿ

ಇವರಿಗೆ

ಮಾನ್ಯ ಶ್ರೀ  ಬಸವರಾಜ್ ಬೊಮ್ಮಾಯಿರವರು.

ಮುಖ್ಯಮಂತ್ರಿ, ಕರ್ನಾಟಕ ಸರ್ಕಾರ

ಹಾಗೂ

ಅಧ್ಯಕ್ಷರು ರಾಜ್ಯ ಮಟ್ಟದ ದಿಶಾ ಸಮಿತಿ ಕರ್ನಾಟಕ

ವಿಧಾನ ಸೌಧ ಬೆಂಗಳೂರು.

ಇವರ ಮುಖಾಂತರ

ಶ್ರೀಮತಿ ಶಾಲಿನಿ ರಜನೀಶ್ ರವರು

ಅಪರ ಮುಖ್ಯ ಕಾರ್ಯದರ್ಶಿ.

ಯೋಜನೆ,ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ.

ಹಾಗೂ ಸದಸ್ಯ ಕಾರ್ಯದರ್ಶಿ. ರಾಜ್ಯ ಮಟ್ಟದ ದಿಶಾ ಸಮಿತಿ ಕರ್ನಾಟಕ.

ಬಹು ಮಹಡಿಗಳ ಕಟ್ಟಡ. ಬೆಂಗಳೂರು .

ತನಿಖೆ ನಡೆಸಿದವರು

ಕುಂದರನಹಳ್ಳಿ ರಮೇಶ್

ಸದಸ್ಯರು. ರಾಜ್ಯ ಮಟ್ಟದ ದಿಶಾ ಸಮಿತಿ ಕರ್ನಾಟಕ.

ಪಾರ್ವತಿ ನಿಲಯ. ಒಂದನೇ ಮುಖ್ಯ ರಸ್ತೆ.

ಜಯನಗರ ಪೂರ್ವ, ತುಮಕೂರು-572102

ಹಾಜರಿದ್ದ ಅಧಿಕಾರಿಗಳು.

ತನಿಖಾ ಸಮಯದಲ್ಲಿ ಹಾಜರಿದ್ದ ಅಧಿಕಾರಿಗಳ ಹೆಸರು ಮತ್ತು ಹುದ್ದೆ.

ತನಿಖಾ ಸಮಯದಲ್ಲಿ ಗೈರಾಜರಾಗಿದ್ದ ಅಧಿಕಾರಿಗಳ ಹೆಸರು ಮತ್ತು ಹುದ್ದೆ.

ತನಿಖೆ ನಡೆಸಿದ ದಿನಾಂಕ:    

ಸ್ಥಳ:

ವೇಳೆ:

ಕಚೇರಿಗೆ ಅಥವಾ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ತನಿಖಾವರದಿಯ ವಿವರವಾದ ಅಂಶಗಳು.

  1. ಇಲಾಖಾ ಮುಖ್ಯಸ್ಥರ ಬಳಿ ಒನ್ ಟು ಒನ್ ಚರ್ಚೆ ವರದಿ.
  2. ಇಲಾಖಾ ಯೋಜನಾ ವಿಭಾಗದ ಮುಖ್ಯಸ್ಥರ ಬಳಿ ಒನ್ ಟು ಒನ್ ಚರ್ಚೆ ವರದಿ.
  3. ಇಲಾಖಾ ಲೆಕ್ಕ ಪತ್ರ ವಿಭಾಗದ ಮುಖ್ಯಸ್ಥರ ಬಳಿ ಒನ್ ಟು ಒನ್ ಚರ್ಚೆ ವರದಿ.
  4. ನಿರ್ದಿಷ್ಠ ಯೋಜನೆಯ ಕೇಸ್ ವರ್ಕರ್ ಬಳಿ ಒನ್ ಟು ಒನ್ ಚರ್ಚೆ ವರದಿ.
  5. ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ, ಯೋಜನಾವಾರು/ಘೋಷಣೆವಾರು ವರದಿ.
  6. ಅಧಿಕಾರಿಗಳ ಜೊತೆ ನಡೆಸಿದ ಸಮಾಲೋಚನೆ ಅಥವಾ ಗುಂಪು ಚರ್ಚೆಯ ಇತರೆ ಅಂಶಗಳು

ಸಹಿ

(ಕುಂದರನಹಳ್ಳಿ ರಮೇಶ್)                       ಹಾಜರಿದ್ದ ಅಧಿಕಾರಿಗಳ ಸಹಿ.

ಲಗತ್ತಿಸಿದ ಅಡಕಗಳು.

  1. ನಿರ್ದಿಷ್ಠ ಯೋಜನೆಯ ಬಗ್ಗೆ ಸಾರ್ವಜನಿಕರ ದೂರು ಮತ್ತು ಅಹವಾಲುಗಳ ಪ್ರತಿ.
  2. ತನಿಖಾ ಸಮಯದಲ್ಲಿ ತೆಗೆದ ಭಾವಚಿತ್ರ.
  3. ತನಿಖಾ ಸಮಯದಲ್ಲಿ ಮಾಡಿದ ವಿಡಿಯೋ.
  4. ತನಿಖಾ ವರದಿಯ ಅಂಶವಾರು ಅಗತ್ಯವಿರುವ ಪೂರಕ ದಾಖಲೆಗಳು.
  5. ತನಿಖಾ ವರದಿಗೆ ಅಗತ್ಯವಿರುವ ಸಾಮಾಗ್ರಿಗಳು.
  6. ತನಿಖಾ ವರದಿಗೆ ಪುಷ್ಠಿ ನೀಡುವ ಇತರೆ ಅಂಶಗಳು.
  7. ತನಿಖಾ ವರದಿಯ ಬಗ್ಗೆ ರಾಜ್ಯ ಮಟ್ಟದ ದಿಶಾ ಸಮಿತಿಗೆ ನೀಡಿದ ಸಲಹೆಗಳು.
  8. ತನಿಖಾ ವರದಿಯಲ್ಲಿನ  ಆಧಾರದಲ್ಲಿ ಕೈಗೊಳ್ಳ ಬೇಕಾದ ಕ್ರಮಗಳ ಬಗ್ಗೆ ಮಾಹಿತಿ.
  9. ತನಿಖಾ ವರದಿಯ ಸಮಯದಲ್ಲಿ ಹಾಜರಿರಲು ಪೋಲೀಸ್ ಇಲಾಖೆಗೆ ಕೋರಿದ ಡಿಜಿಟಲ್ ಮಾಹಿತಿ  ಮತ್ತು ಸ್ಪಂಧಿಸಿದ ರೀತಿ. 

ವಂದನೆಗಳೊಂದಿಗೆ                             ತಮ್ಮ ವಿಶ್ವಾಸಿ

                                          (ಕುಂದರನಹಳ್ಳಿ ರಮೇಶ್)

ಓದುಗರ ಮುಕ್ತ ಸಲಹೆಗೆ ಮನವಿ.