25th April 2024
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೋಕು, ಮಾರಶೆಟ್ಟಿಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಕುಂದರನಹಳ್ಳಿ ಗ್ರಾಮದ ಮೂಲಕ- ಅದಲಗೆರೆಗೆ ಹೋಗುವ ರಸ್ತೆಗೆ ಎರಡು ಭಾರಿ ಭೂ ಸ್ವಾಧೀನವಾಗಿದೆ. ಮೊದಲನೇ ಭಾರಿ ಸುಮಾರು ಒಂದು ಕೀಮೀ ಗೂ ಹೆಚ್ಚಿಗೆ ಭೂ ಸ್ವಾಧೀನವಾದರೆ, ಎರಡನೇ ಬಾರಿ ಸುಮಾರು 50 ಮೀಟರ್ ಭೂ ಸ್ವಾಧೀನವಾಗಿದೆ.

ರಸ್ತೆಯನ್ನು ಎಲ್ಲಾದರೂ ಮಾಡಿ, ಭೂ ಸ್ವಾಧೀನವಾಗದೇ ಇರುವ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಮಾಡಿದ್ದರೆ, ಕಾನೂನಿನಲ್ಲಿ ಅವಕಾಶವಿದ್ದಲ್ಲಿ ಅದನ್ನೇ ಕಾನೂನು ಬದ್ಧ ಮಾಡಿ, ಯಾವುದೇ ಕಾರಣಕ್ಕೂ ರಸ್ತೆ ಕಾಮಗಾರಿ ನಿಲ್ಲಿಸಬೇಡಿ ಎಂದು ತುಮಕೂರು ಉಪವಿಭಾಗಾಧಿಕಾರಿ ಶ್ರೀ ಅಜಯ್ ರವರಿಗೆ ಮನವಿ ಮಾಡಲಾಯಿತು.

ಕುಂದರನಹಳ್ಳಿಯಲ್ಲಿ ಸುಮಾರು 80 ಮೀಟರ್ ಉದ್ಧದ ಪಿಎಂಜಿಎಸ್‍ವೈ ರಸ್ತೆ ಕಾಮಗಾರಿ ನಿಂತಿದ್ದು, ರಸ್ತೆಯಲ್ಲಿ ನೀರು ನಿಂತು ಕೆಸರು ಗದ್ದೆಯಂತಾಗಿದ್ದರೂ ರಸ್ತೆ ಕಾಮಗಾರಿ ಮಾಡದೆ ಇರುವ ಬಗ್ಗೆ ದಿನಾಂಕ:15.09.2022 ರಂದು ಅಧಿಕಾರಿಗಳೊಂದಿಗೆ ಸ್ಥಳ ವೀಕ್ಷಣೆ ಮಾಡಲಾಯಿತು.

ನಾನೊಬ್ಬ ರಾಜ್ಯ ಮಟ್ಟದ ದಿಶಾ ಸದಸ್ಯನಾಗಿ ಅಧಿಕಾರಿಗಳಿಗೆ, ಕೇಂದ್ರ ಸರ್ಕಾರದ ಯೋಜನೆ ಇಷ್ಟು ವಿಳಂಭವಾಗುವುದು ಸರಿಯಲ್ಲ. ಸಾರ್ವಜನಿಕ ರಸ್ತೆಗೆ ಅಡ್ಡಿ ಮಾಡಿರುವವರ ಮನವೊಲಿಸಿ ಅಥವಾ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಅಥವಾ ಭೂಸ್ವಾಧೀನ ರದ್ದುಗೊಳಿಸಿ ಇಲ್ಲಿ ರಸ್ತೆ ಅಗತ್ಯವಿಲ್ಲ ಎಂದು ನಿಲ್ಲಿಸಿ ಬಿಡಿ, ಆದರೇ ಈ ರೀತಿ ಸಾರ್ವಜನಿಕರಿಗೆ ತೊಂದರೆ ಮಾಡುವುದು ಬೇಡ ಎಂಬ ಸಲಹೆ ನೀಡಲಾಯಿತು.

ಉಪವಿಭಾಗಾಧಿಕಾರಿ ಶ್ರೀ ಅಜಯ್, ಗುಬ್ಬಿ ತಹಶೀಲ್ಧಾರ್ ಶ್ರೀಮತಿ ಆರತಿ, ಮಾರಶೆಟ್ಟಿಹಳ್ಳಿ ಪಿಡಿಓ ಶ್ರೀಮತಿ ತನುಜ, ನಿಟ್ಟೂರು ಆರ್.ಐ.ಶ್ರೀ ಮೋಹನ್ ಕುಮಾರ್, ತಾಲ್ಲೋಕು ಸರ್ವೇಯರ್ ಶ್ರೀ ಮಂಜಣ್ಣ, ಅದಲಗೆರೆ ಗ್ರಾಮಲೆಕ್ಕಿಗ ಶ್ರೀ ಸ್ವಾಮಿಯವರಿಗೆ ನೀವೂ ಎನಾದರೂ ಕ್ರಮಕೈಗೊಳ್ಳಿ ಒಂದು ವಾರದೊಳಗೆ ಸ್ಪಷ್ಠ ಮಾಹಿತಿ ನೀಡಿ, ಎಂದು ರಸ್ತೆಗೆ ಅಡ್ಡಿ ಪಡಿಸುವವರು ಮತ್ತು ರಸ್ತೆ ಆಗಬೇಕೆನ್ನುವವರು ಎರಡು ವರ್ಗದವರು ಆಗ್ರಹ ಮಾಡಿzರು.

ಒಂದು ವಾರದೊಳಗೆ, ಈ ರಸ್ತೆಯ ಸ್ಪಷ್ಟ ಮಾಹಿತಿಯನ್ನು, ನಕ್ಷೆಯೊಂದಿಗೆ ಸಿದ್ಧಪಡಿಸಿ, ಎಲ್ಲರೂ ಒಪ್ಪುವ ರೀತಿಯಲ್ಲಿ ಒಂದು ಅಂತಿಮ ರೂಪು ಕೊಡುವುದಾಗಿ ಉಪವಿಭಾಗಾಧಿಕಾರಿಯವರು ಸಾರ್ವಜನಿPರÀ ಮುಂದೆ ಘೋಷಣೆ ಮಾಡಿದರು.

ಪಿಎಂಜಿಎಸ್‍ವೈ ಇಂಜಿನಿಯರ್ ಗಳಿಗೆ ನಾಳೆಯಿಂದಲೇ ಕಾಮಗಾರಿ ಆರಂಭಿಸಿ, ಯಾರು ರಸ್ತೆಗೆ ಅಡ್ಡಿಪಡಿಸುತ್ತಾರೋ, ಅವರ ಬೇಡಿಕೆಯ ಬಗ್ಗೆಯೂ ಗಮನ ಹರಿಸಿ, ಕಾನೂನಿನ ಅಡಿಯಲ್ಲಿ   ಸಮಸ್ಯೆ ಬಗೆ ಹರಿಸೊಣ ಎಂದು ಖಡಕ್ ಸೂಚನೆ ನೀಡಿದರು.

ಇದೇ ರಸ್ತೆ ನಿರ್ಮಾಣ ಮಾಡುವಾಗ, ಹಿಂದಿನ ಉಪವಿಭಾಗಾಧಿಕಾರಿಯವರಾಗಿದ್ದ ಶ್ರೀ ರವಿಕುಮಾರ್ ರವರು ಮತ್ತು ಅಂದಿನ ತಹಶೀಲ್ಧಾರ್ ರವರಾದ ಶ್ರೀ ನಾಗರಾಜು ರವರು ಕೈಗೊಂಡ ರೀತಿಯಲ್ಲಿ ಕ್ರಮಕೈಗೊಳ್ಳಿ ಎಂಬುದು ಗ್ರಾಮಸ್ಥರ ಅನಿಸಿಕೆಯಾಗಿತ್ತು.

ತುಮಕೂರು ಉಪವಿಭಾಗಾಧಿಕಾರಿ ಶ್ರೀ ಅಜಯ್ ರವರು ಸೇರಿದಂತೆ, ಎಲ್ಲಾ ಹಂತದ ಅಧಿಕಾರಿಗಳು ಮತ್ತು ನೌಕರರು, ಈ ರಸ್ತೆಯ ಬಗ್ಗೆ ನೈಜಸ್ಥಿತಿ ತಿಳಿದಿದ್ದು ಸಾಂದರ್ಭಿಕವಾಗಿದೆ, ನ್ಯಾಯಾಲಯದಲ್ಲಿನ ಕೇಸ್‍ಗೆ ಸ್ಪಷ್ಟ ವರದಿ ನೀಡಬೇಕಾಗಿದೆ.