TUMAKURU:SHAKTHIPEETA FOUNDATION
ಕೇಂದ್ರ ಸರ್ಕಾರ ದೇಶದ ಪ್ರತಿ ಜಿಲ್ಲೆಯನ್ನು DISTRICT EXPORT HUB ಮಾಡಲು ಯೋಜನೆ ರೂಪಿಸಿದೆ. ಈ ಹಿನ್ನಲೆಯಲ್ಲಿ ತುಮಕೂರು ಜಿಲ್ಲೆಯಲ್ಲಿ DISTRICT EXPORT HUBಬಗ್ಗೆ ರೂಪುರೇಷೆಗಳನ್ನು ನಿರ್ಧರಿಸಲು, ಜಿಲ್ಲಾ ಕೈಗಾರಿಕಾ ಮುಂದಾಗಿದೆ.
- ಒಂದು ಜಿಲ್ಲೆ ಒಂದು ಉತ್ಪನ್ನ ತುಮಕೂರು ಜಿಲ್ಲೆಯಲ್ಲಿ ಕುಂಟಿತಗೊಂಡಿದೆ ಎಂದರೆ ತಪ್ಪಾಗಲಾರದು. ಈ ಬಗ್ಗೆ ವರದಿ ನೀಡಲು ಒಂದು ಜಿಲ್ಲೆ ಒಂದು ಉತ್ಪನ್ನ ಸಮಿತಿಯ ಸದಸ್ಯಕಾರ್ಯದರ್ಶಿಯವರಿಗೆ ತಿಳಿಸಲಾಗಿದೆ.
- ತಿಪಟೂರು ಕೊಬ್ಬರಿಗೆ ಜಿ.ಐ.ಪಡೆದು ಕೊಬ್ಬರಿ ರಫ್ತು ಮಾಡಲು ಒಂದು ಹೋರಾಟ ಆರಂಭವಾಗಿ ತಣ್ಣಗಾಗಿದೆ.
- ಜಿಲ್ಲೆಯಲ್ಲಿ ಆರ್ಟಿಸಾನ್ ಹಬ್ ಮಾಡಲು ಒಂದು ಹೋರಾಟ ಆರಂಭವಾಗಿ ತಣ್ಣಗಾಗಿದೆ.
- ಫುಡ್ ಪಾರ್ಕ್ ಬಗ್ಗೆ ದೇವರೇ ಬಲ್ಲ.
- ಜಪಾನೀಸ್ ವಿಲೇಜ್.
- ಮಿಷನ್ ಟೂಲ್ ಪಾರ್ಕ್
- ಆರ್ಟಿಸಾನ್ ಟ್ರೈನಿಂಗ್ ಕಟ್ಟಡವನ್ನು ಕಚೇರಿಯಾಗಿ ಮಾಡಲಾಗುತ್ತಿದೆ ಎಂಬ ದೂರಿದೆ.
- ಎಡಿಬಿ ಟ್ರೈನಿಂಗ್ ಕಟ್ಟಡ ತುಮಕೂರು ಮಹಾನಗರ ಪಾಲಿಕೆಯ ಕಚೇರಿಯಾಗಿದೆ.
- ತುಮಕೂರು ಜಿಲ್ಲೆಯಲ್ಲಿ ಅಂತರ ರಾಷ್ಟ್ರೀಯ ವಿಮಾನ ನಿಲ್ಧಾಣದ ಕೂಗು ಇದೆ.
- ಎಂ.ಎಸ್.ಎಂ.ಇ ಟೆಕ್ನಲಾಜಿ ಸೆಂಟರ್ ಬಾಡಿಗೆ ಕಟ್ಟಡದಾರರ ಬಲಿಯಾಗುವ ಸಂಬವ ಇದೆ.
- ಇಷ್ಟೆಲ್ಲಾ ಮಧ್ಯೆ ತುಮಕೂರು ಸರ್ಕಾರಿ ಐಟಿಐಗೆ ಮತ್ತು ಗುಬ್ಬಿ ಸರ್ಕಾರಿ ಐಟಿಐಗೆ ಸ್ವಂತ ಜಾಗ ನೀಡುವ ಮೂಲಕ ಜಿಲ್ಲಾಧಿಕಾರಿಯಾದ ಶ್ರೀ ವೈ.ಎಸ್.ಪಾಟೀಲ್ ರವರು ಒಳ್ಳೆಯ ಕೆಲಸ ಮಾಡಿದ್ದಾರೆ.
ಈ ಎಲ್ಲಾ ಹಿನ್ನಲೆಯಲ್ಲಿ ಈ ಸಭೆ ಮಹತ್ವ ಪಡೆದಿದೆ. ಜಿಲ್ಲೆಯ ನಿರುದ್ಯೋಗಿಗಳಿಗೆ ಅನೂಕೂಲವಾಗುವ ಯೋಜನೆಗಳ ಜಾರಿಗೆ, ಈ ಮೇಲ್ಕಂಡ ಎಲ್ಲಾ ಅಂಶಗಳ ಬಗ್ಗೆ ನಿಖರವಾದ ಮಾಹಿತಿ ಸಂಗ್ರಹಿಸಲು ಜಿಲ್ಲಾ ಕೈಗಾರಿಕಾ ಕೇಂದ್ರ ಜೆ.ಡಿ. ಶ್ರೀ ನಾಗೇಶ್‍ರವರ ಜೊತೆ ಸಮಾಲೋಚನೆ ನಡೆಸಲಾಗಿದೆ.
ಕಳೆದ ದಿಶಾ ಸಬೆಯಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು, ಆಸಕ್ತರು ಸಲಹೆ ನೀಡಲು ಮನವಿ ಮಾಡಲಾಗಿದೆ.