21st November 2024
Share

TUMAKURU:SHAKTHIPEETA FOUNDATION

ಕೇಂದ್ರ ಸರ್ಕಾರ ದೇಶದ ಪ್ರತಿ ಜಿಲ್ಲೆಯನ್ನು  DISTRICT EXPORT HUB ಮಾಡಲು ಯೋಜನೆ ರೂಪಿಸಿದೆ. ಈ ಹಿನ್ನಲೆಯಲ್ಲಿ ತುಮಕೂರು ಜಿಲ್ಲೆಯಲ್ಲಿ DISTRICT EXPORT HUBಬಗ್ಗೆ ರೂಪುರೇಷೆಗಳನ್ನು ನಿರ್ಧರಿಸಲು, ಜಿಲ್ಲಾ ಕೈಗಾರಿಕಾ ಮುಂದಾಗಿದೆ.

  1. ಒಂದು ಜಿಲ್ಲೆ ಒಂದು ಉತ್ಪನ್ನ ತುಮಕೂರು ಜಿಲ್ಲೆಯಲ್ಲಿ ಕುಂಟಿತಗೊಂಡಿದೆ ಎಂದರೆ ತಪ್ಪಾಗಲಾರದು. ಈ ಬಗ್ಗೆ ವರದಿ ನೀಡಲು ಒಂದು ಜಿಲ್ಲೆ ಒಂದು ಉತ್ಪನ್ನ ಸಮಿತಿಯ ಸದಸ್ಯಕಾರ್ಯದರ್ಶಿಯವರಿಗೆ ತಿಳಿಸಲಾಗಿದೆ.
  2. ತಿಪಟೂರು ಕೊಬ್ಬರಿಗೆ ಜಿ.ಐ.ಪಡೆದು ಕೊಬ್ಬರಿ ರಫ್ತು ಮಾಡಲು ಒಂದು ಹೋರಾಟ ಆರಂಭವಾಗಿ ತಣ್ಣಗಾಗಿದೆ.
  3. ಜಿಲ್ಲೆಯಲ್ಲಿ ಆರ್ಟಿಸಾನ್ ಹಬ್ ಮಾಡಲು ಒಂದು ಹೋರಾಟ ಆರಂಭವಾಗಿ ತಣ್ಣಗಾಗಿದೆ.
  4. ಫುಡ್ ಪಾರ್ಕ್ ಬಗ್ಗೆ ದೇವರೇ ಬಲ್ಲ.
  5. ಜಪಾನೀಸ್ ವಿಲೇಜ್.
  6. ಮಿಷನ್ ಟೂಲ್ ಪಾರ್ಕ್
  7. ಆರ್ಟಿಸಾನ್ ಟ್ರೈನಿಂಗ್ ಕಟ್ಟಡವನ್ನು ಕಚೇರಿಯಾಗಿ ಮಾಡಲಾಗುತ್ತಿದೆ ಎಂಬ ದೂರಿದೆ.
  8. ಎಡಿಬಿ ಟ್ರೈನಿಂಗ್ ಕಟ್ಟಡ ತುಮಕೂರು ಮಹಾನಗರ ಪಾಲಿಕೆಯ ಕಚೇರಿಯಾಗಿದೆ.
  9. ತುಮಕೂರು ಜಿಲ್ಲೆಯಲ್ಲಿ ಅಂತರ ರಾಷ್ಟ್ರೀಯ ವಿಮಾನ ನಿಲ್ಧಾಣದ ಕೂಗು ಇದೆ.
  10. ಎಂ.ಎಸ್.ಎಂ.ಇ ಟೆಕ್ನಲಾಜಿ ಸೆಂಟರ್ ಬಾಡಿಗೆ ಕಟ್ಟಡದಾರರ ಬಲಿಯಾಗುವ ಸಂಬವ ಇದೆ.
  11. ಇಷ್ಟೆಲ್ಲಾ ಮಧ್ಯೆ ತುಮಕೂರು ಸರ್ಕಾರಿ ಐಟಿಐಗೆ ಮತ್ತು ಗುಬ್ಬಿ ಸರ್ಕಾರಿ ಐಟಿಐಗೆ ಸ್ವಂತ ಜಾಗ ನೀಡುವ ಮೂಲಕ ಜಿಲ್ಲಾಧಿಕಾರಿಯಾದ ಶ್ರೀ ವೈ.ಎಸ್.ಪಾಟೀಲ್ ರವರು ಒಳ್ಳೆಯ ಕೆಲಸ ಮಾಡಿದ್ದಾರೆ.

ಈ ಎಲ್ಲಾ ಹಿನ್ನಲೆಯಲ್ಲಿ ಈ ಸಭೆ ಮಹತ್ವ ಪಡೆದಿದೆ. ಜಿಲ್ಲೆಯ ನಿರುದ್ಯೋಗಿಗಳಿಗೆ ಅನೂಕೂಲವಾಗುವ ಯೋಜನೆಗಳ ಜಾರಿಗೆ, ಈ ಮೇಲ್ಕಂಡ ಎಲ್ಲಾ ಅಂಶಗಳ ಬಗ್ಗೆ ನಿಖರವಾದ ಮಾಹಿತಿ ಸಂಗ್ರಹಿಸಲು ಜಿಲ್ಲಾ ಕೈಗಾರಿಕಾ ಕೇಂದ್ರ ಜೆ.ಡಿ. ಶ್ರೀ ನಾಗೇಶ್‍ರವರ ಜೊತೆ ಸಮಾಲೋಚನೆ ನಡೆಸಲಾಗಿದೆ. 

ಕಳೆದ ದಿಶಾ ಸಬೆಯಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು, ಆಸಕ್ತರು ಸಲಹೆ ನೀಡಲು ಮನವಿ ಮಾಡಲಾಗಿದೆ.