27th July 2024
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲೆ, ತಿಪಟೂರು ತಾಲ್ಲೋಕು ಕಾರೇಕುರ್ಚಿ ಗ್ರಾಮವನ್ನು, ಗುಬ್ಬಿ ತಾಲ್ಲೋಕು ಹರೇನಹಳ್ಳಿ ಗ್ರಾಮಕ್ಕೆ ಸ್ಥಳಾಂತರ ಮಾಡಲಾಗಿದೆಯಂತೆ. ಸುಮಾರು 40 ವರ್ಷಗಳ ಆಸುಪಾಸಿನಲ್ಲಿ ಈ ಪ್ರಕ್ರೀಯೆ ನಡೆದಿರ ಬಹುದಂತೆ, ನಿಖರವಾದ ದಿನಾಂಕವನ್ನು ಯಾರು ಹೇಳಲಿಲ್ಲ.

ಮಾಜಿ ಸಚಿವ ತಿಪಟೂರಿನ ದಿ.ಮಂಜುನಾಥ್ ರವರ ಪರಿಶ್ರಮದಿಂದ, ಆಗಿನ ಅರಣ್ಯ ಸಚಿವರಾದ ದಿ.ಕೆ.ಹೆಚ್.ಪಾಟೀಲ್ ರವರ ಸಹಕಾರದಿಂದ ಇಡೀ ಗ್ರಾಮ ಮತ್ತು ಗ್ರಾಮಸ್ಥರ ಜಮೀನಿಗೆ ಬದಲಿ ಅರಣ್ಯ ಜಮೀನು ನೀಡಿ ಸ್ಥಳಾಂತರಿಸಲಾಗಿದೆಯಂತೆ.

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಸಹ ಆಗಾಗ್ಗೆ, ಈ ವಿಷಯ ಪ್ರಸ್ತಾಪಿಸುತ್ತಾರೆ. ಇಲ್ಲಿ 12 ನೇ ಶತಮಾನದಲ್ಲಿ ಶ್ರೀ ಸಿದ್ಧರಾಮೇಶ್ವರರು ಬಂದು ಸುಮಾರು 12 ವರ್ಷಗಳ ಕಾಲ ತಲೆ ಕೆಳಕಾಗಿ ನಿಂತು ಉಗ್ರ ತಪಸ್ಸು ಮಾಡಿದ್ದಾರಂತೆ. ಇಲ್ಲಿ ಗಂಗಮ್ಮನ ಪೂಜೆ ಮಾಡಲು ಇಡೀ ರಾಜ್ಯಾಧ್ಯಾಂತ ಮಹಿಳೆಯರು ಬರುತ್ತಾರಂತೆ.

ನಾನು ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯನಾಗಿರುವುದರಿಂದ, ಶಕ್ತಿಪೀಠ ಫೌಂಡೇಷನ್ ಒಂದು ಗ್ರಾಮದ ಅಭಿವೃದ್ಧಿ ಅಧ್ಯಯನ ವರದಿ ಸಿದ್ಧಪಡಿಸಲು ಉದ್ದೇಶಿರುವುದರಿಂದ, ಯಾವುದಾದರೊಂದು ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಲು ಯೋಚಿಸುತ್ತಿರುವಾಗ, ಇಲ್ಲಿನ ಗ್ರಾಮಸ್ಥರು ಸ್ವತಃ ಬಂದು ಗ್ರಾಮದ ಅಭಿವೃದ್ಧಿಗೆ ಶ್ರಮಿಸಲು ಸಹಕರಿಸಲು ಮನವಿ ಮಾಡಿದ್ದರಿಂದ, ನನಗೂ ನೋಡೋಣ ಎಂಬ ಭಾವನೆ ಬಂದಿದ್ದರಿಂದ, ಈ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಲಾಗಿದೆ.

ಇಲ್ಲಿನ ಯುವಕರ ತಂಡ ಹಲವಾರು ಅಭಿವೃದ್ಧಿ ಕನಸು ಕಾಣುತ್ತಿದ್ದಾರೆ, ಹಿರಿಯರು ನಮ್ಮ ಜಮೀನಿಗೆ ಪೋಡು ಮಾಡಿಸಿಕೊಟ್ಟರೆ ಅದೇ ದೊಡ್ಡ ಕೆಲಸವಾಗುತ್ತಿದೆ ಎಂದು ಪ್ರತಿಪಾದಿಸಿದರೆ, ಭಕ್ತರ ತಂಡ ದೊಣೆ ಗಂಗಾ ಕ್ಷೇತ್ರಕ್ಕೆ ಮೊದಲು ರಸ್ತೆ ಮಾಡಿಸಿ ಎಂದು ಸಲಹೆ ನೀಡಿದ್ದಾರೆ.

ಹಲವಾರು ಅಧಿಕಾರಿಗಳ ಸಲಹೆ ಮೇರೆಗೆ, ದಿನಾಂಕ:26.09.2022 ರಿಂದ ಬೆಂಗಳೂರಿನಲ್ಲಿಯೂ ಶಕ್ತಿಪೀಠ ಫೌಂಡೇಷನ್ ಕಚೇರಿ ಆರಂಭಿಸಿ, ಐಟಿ ಸಿಟಿಯ ಸಮಗ್ರ ಅಭಿವೃದ್ಧಿ ಬಗ್ಗೆಯೂ ಗಮನ ಹರಿಸಲು ಸಿದ್ಧತೆ ನಡೆದಿದೆ.

ಈ ಹಿನ್ನಲೆಯಲ್ಲಿ ರಾಜ್ಯದ ರಾಜಧಾನಿ ಜೊತೆಗೆ, ಒಂದು ಐತಿಹಾಸಿಕ ಕ್ಷೇತ್ರದ ಹಾಗೂ ಒಂದು ಹಳ್ಳಿಯ ಒಡನಾಟವೂ ನಿರಂತರವಾಗಿದ್ದರೆ, ಅಭಿವೃದ್ಧಿಯಲ್ಲಿನ ರಾಜಕೀಯ ಒಳಜಗಳಗಳ ಮಾಹಿತಿಯೂ ಲಭ್ಯವಾಗಲಿದೆ.

ಅದ್ದರಿಂದ ದಿನಾಂಕ:22.09.2022 ರಂದು ದೊಣೆ ಗಂಗಾ ಕೇತ್ರಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿ, ಕ್ಷೇತ್ರದ ಹಾಗೂ ಕಾರೇ ಕುರ್ಚಿ ಗ್ರಾಮದ ಅಧ್ಯಯನ ಆರಂಭ ಮಾಡಲಾಗಿದೆ. ನೋಡೋಣ ಎಲ್ಲಿಗೆ ನಿಲ್ಲಲಿದೆ.