12th April 2024
Share

TUMAKURU:SHAKTHIPEETA FOUNDATION

ಗುಬ್ಬಿ, ಹೆಚ್.ಎ.ಎಲ್ ಪೋಲೀಸ್ ಸ್ಟೇಷನ್, ವಸತಿ ಸಮುಚ್ಚಯ, ಇ.ಎಸ್.ಐ ಆಸ್ಪತ್ರೆ, ಗಣಿ ಅಭಾಧಿತ ಪ್ರದೇಶಗಳ ವ್ಯಾಪ್ತಿಯ ಕೊಂಡ್ಲಿ ಗ್ರಾಮ ಪಂಚಾಯಿತಿ ಕಾರೇಕುರ್ಚಿ ದೊಣೆಯ ಅಭಿವೃದ್ಧಿ, ಗೋಡೆಕೆರೆ ಗ್ರಾಮ ಪಂಚಾಯಿತಿಯ ಶ್ರೀ ಸಿದ್ಧರಾಮೇಶ್ವರ ದೇವಾಲಯ ಅಭಿವೃದ್ಧಿ, ತೀರ್ಥಪುರ ಗ್ರಾಮ ಪಂಚಾಯಿತಿಯ ಶ್ರೀ ತೀರ್ಥ ರಾಮೇಶ್ವರ ಕ್ಷೇತ್ರದ ಅಭಿವೃದ್ಧಿ ಯೋಜನೆಗಳ ಬಗ್ಗೆ, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಜಿಲ್ಲಾಧಿಕಾರಿ ಶ್ರೀ ವೈ.ಎಸ್.ಪಾಟೀಲ್ ರವರೊಂದಿಗೆ ಚರ್ಚೆ ನಡೆಸಿದರು.

 ಈ ಸಂದರ್ಭದಲ್ಲಿ ಕುಂದರನಹಳ್ಳಿ ಹಲವಾರು ಯೋಜನೆಗಳ ವಿವಾದದ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಯಿತು.

ಸುಮಾರು 50 ಕೀಮೀ ರಸ್ತೆಯಲ್ಲಿನ, ಕುಂದರನಹಳ್ಳಿ ಗ್ರಾಮದ ಕೇವಲ 80 ಮೀಟರ್ ಉದ್ದದ ರಸ್ತೆ ಮಾಡಿಸಲು ಆಗುವುದಿಲ್ಲವೇ? ಭೂ ಸ್ವಾಧೀನ ಮಾಡಿಕೊಂಡಿರುವ ರಸ್ತೆ ತೆರವುಗೊಳಿಸಲು ಗುಬ್ಬಿ ತಾಲ್ಲೋಕು ಆಡಳತಕ್ಕೆ ಕಷ್ಟವೇ? ಈ ರೀತಿ ಜನ ಮಾತನಾಡುತ್ತಾರೆ,

 ಈ ರಸ್ತೆಯಲ್ಲಿ ಓಡಾಡುವ ಜನರು. ಈ ಕುಂದರನಹಳ್ಳಿ ರಮೇಶ್ ದೇಶದ ಎಲ್ಲಾ ವಿಚಾರಗಳ ಬಗ್ಗೆ ಮಾತನಾಡುತ್ತಾರೆ. ಆದರೇ ಈ ರಸ್ತೆ ಬಗ್ಗೆ ಹೀಗೇಕೆ ಎಂದು ನಗುತ್ತಾರಂತೆ.

ಹೌದು ಬೈಯ್ಯುವ ಯೂನಿವರ್ಸಿಟಿಯ ಜನರ ಬಾಯಿಗೆ ಹೆದರಿ ಕುಂದರನಹಳ್ಳಿಯ 80 ಮೀಟರ್ ಉದ್ದದ ಪಿಎಂಜಿಎಸ್‍ವೈ ರಸ್ತೆ ನೆನೆಗುದಿಗೆ ಬಿದ್ದಿದೆ. ಈ ಬಗ್ಗೆ ನಾನು ಹಲವಾರು ಭಾರಿ ಅಧಿಕಾರಿಗಳಿಗೆ ಮನವರಿಕೆ ಮಾಡಿದ್ದೇನೆ. ಜಿಲ್ಲಾ ಮಟ್ಟದ ದಿಶಾ ಸಮಿತಿಯ ಸಭೆಯಲ್ಲಿಯೂ ಚರ್ಚೆ ನಡೆದು, ಒಂದು ವಾರದೊಳಗೆ ಸಮೀಕ್ಷೆ ಮಾಡಿಸಲು ಇದೇ ಜಿಲ್ಲಾಧಿಕಾರಿಗಳಾದ ಶ್ರೀ ವೈ.ಎಸ್.ಪಾಟೀಲ್ ರವರೇ ಖಡಕ್ ಆದೇಶ ಮಾಡಿದ್ದಾರೆ.

ಗುಬ್ಬಿ ತಹಶೀಲ್ಧಾರ್ ಶ್ರೀಮತಿ ಆರತಿರವರು, ತುಮಕೂರು ಉಪವಿಭಾಗಾಧಿಕಾರಿ ಶ್ರೀ ಅಜಯ್ ರವರು, ಅಪರ ಜಿಲ್ಲಾಧಿಕಾರಿ ಶ್ರೀ ಚನ್ನಬಸಪ್ಪನವರು, ಜಿಲ್ಲಾಧಿಕಾರಿ ಶ್ರೀ ವೈ.ಎಸ್.ಪಾಟೀಲ್ ರವರು ಎಲ್ಲರೂ ಸ್ನೇಹಿತರೇ, ಒಳ್ಳೆಯ ಅಧಿಕಾರಿಗಳು ಆದರೂ ನಮ್ಮೂರಿನ ಕೆಲಸ ಮಾಡಿಸಲು ಸಾದ್ಯಾವಿಲ್ಲ ಅಂದರೆ ಹೇಗೆ? ಇದೊಂದು ನನಗೂ ಯಕ್ಷ ಪ್ರಶ್ನೆ? ‘ಇದ್ದವರೆಲ್ಲಾ ಲಿಂಗಾಯಿತರೇ ಆದರೇ ಇಲ್ಲಿದ್ದ ಕೋಳಿ ಎಲ್ಲಿ ಹೋಯಿತು ಎನ್ನುವ ಮಾತಿನಂತಾಗಿದೆ.

ದಿನಾಂಕ:15.09.2022 ರಂದು ತುಮಕೂರು ಉಪವಿಭಾಗಾಧಿಕಾರಿ ಶ್ರೀ ಅಜಯ್ ರವರು, ಗುಬ್ಬಿ ತಹಶೀಲ್ಧಾರ್ ಶ್ರೀಮತಿ ಆರತಿರವರು ಸೇರಿದಂತೆ ಅಧಿಕಾರಿಗಳ ತಂಡ ಸ್ಥಳ ವೀಕ್ಷಣೆ ಮಾಡಿದರು. ಪರಿಸ್ಥಿತಿ ಅರಿತ ಶ್ರೀ ಅಜಯ್ ರವರು ಒಂದು ವಾರದೊಳಗೆ ವಸ್ತು ಸ್ಥಿತಿಯ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡುವುದಾಗಿ ಹೇಳಿ ಬಂದಿದ್ದಾರೆ.

ರಸ್ತೆ ವೀಕ್ಷಣೆ ಮಾಡಿದಾಗ, ಬೈಗುಳದ ವಿಡಿಯೋ ಮಾಡಿ ಪ್ರದರ್ಶನ ಮಾಡುವ ಪುಣ್ಯಾತ್ಮರಿಗೆ ಧನ್ಯವಾದಗಳು. ಇದು ನಮ್ಮ ಹಣೆ ಬರಹ ಸಾರ್ವಜನಿಕರ ಕೆಲಸಕ್ಕೆ ಭೂಮಿ ಒತ್ತುವರಿದಾರರಿಂದ ಮಹಾಮಂಗಳಾರತಿ ಮಾಡಿಸಿಕೊಳ್ಳುವುದು ಒಂದು ಮೂಲಭೂತಹಕ್ಕಿನಂತಾಗಿದೆ.

ಎಸಿಯವರು ಸ್ಥಳ ಭೇಟಿಯ 15 ದಿವಸದ ನಂತರ, ದಿನಾಂಕ:29.09.2022 ರಂದು ತುಮಕೂರು ಜಿಲ್ಲಾಧಿಕಾರಿ ಶ್ರೀ ವೈ.ಎಸ್.ಪಾಟೀಲ್ ರವರು, ಅಪರ ಜಿಲ್ಲಾಧಿಕಾರಿ ಶ್ರೀ ಚನ್ನಬಸಪ್ಪನವರು ಹಾಗೂ ಎಸ್.ಪಿಯವರಾದ ಶ್ರೀ ರಾಹುಲ್ ಕುಮಾರ್ ರವರಿಗೆ ರಸ್ತೆಯ ವಿವಾದದ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಯಿತು.

ಜಿಲ್ಲಾಧಿಕಾರಿಯವರು ಎಸಿಯವರಿಗೆ ಮತ್ತು ತಹಶೀಲ್ಧಾರ್ ರವರಿಗೆ ಕೂಡಲೇ, ಈ ರಸ್ತೆಯ ವಸ್ತು ಸ್ಥಿತಿ ವರದಿ ನೀಡಲು ಸೂಚಿಸಿದರು. ಎಸಿಯವರು ರಾತ್ರಿ 8 ಗಂಟೆಯವರಿಗೂ ರಸ್ತೆಯ ಮಾಹಿತಿ ಸಂಗ್ರಹ ಮಾಡುತ್ತಿದ್ದರು ಎಂಬ ವಿಚಾರ ತಿಳಿಯಿತು.

ಅಕ್ಕ-ಪಕ್ಕದ ಜಮೀನನವರ ಮೂಲಕ, ನನ್ನ ಮೇಲೆ ಮತ್ತು ಅಧಿಕಾರಿಗಳ ಮೇಲೆ ಕೇಸು ಹಾಕಿಸುವ ಜನರಿಗೆ ನಾಗರೀಕ ಸನ್ಮಾನ ಮಾಡಬೇಕು. 2008 ರಲ್ಲಿ ಅಧಿಕಾರಿಗಳ ಜೊತೆಗೆ ನನ್ನ ಮೇಲು ಕೇಸು ಹಾಕಿದ್ದರು. ಈಗ ಹಾಕಿರುವ ಕೇಸ್‍ನಲ್ಲಿ ನನ್ನ ಹೆಸರು ಸೇರಿಸಿಲ್ಲವಾದರೂ, ನಾನೇ ಇಂಪ್ಲೀಡ್ ಆಗಲು ಚಿಂತನೆ ನಡೆದಿದೆ.

‘ಈ ರಸ್ತೆ ಬಗ್ಗೆ ಒಬ್ಬ ಪಿಡಿಓ ಮೇಲೆ ರೇಪ್ ಕೇಸ್ ಸಹ ಹಾಕಿದ್ದ ಇತಿಹಾಸವಿದೆ. 144 ಸೆಕ್ಷನ್ ನಂತೆ ಪೋಲೀಸ್ ನಿಲ್ಲಿಸಿಕೊಂಡು ರಸ್ತೆ ಮಾಡಲಾಗಿತ್ತು. ಈಗ ಮತ್ತೆ ಕ್ಯಾತೆ ಎದ್ದಿದೆ. ಎಸ್.ಪಿಯವರಿಗೆ ಇದೆಲ್ಲಾ ಮೊದಲೇ ತಿಳಸಬೇಕಾಗಿತ್ತು.

ನನಗೆ ಎಸ್.ಪಿ ಯವರ ಬಗ್ಗೆ ತುಂಬಾ ಒಳ್ಳೆ ಗೌರವ ಇದೆ. ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು ತುಮಕೂರಿಗೆ ಬಂದಿದ್ದ ಸಂದರ್ಭದಲ್ಲಿ, ತುಮಕೂರು ಲೋಕಸಭಾ ಸದಸ್ಯರಾದ  ಶ್ರೀ ಜಿ.ಎಸ್.ಬಸವರಾಜ್ ರವರನ್ನು ಕರೆ ತಂದು ಮುಂದೆ ಬಿಟ್ಟ ಸಂಸದರ ಗನ್ ಮ್ಯಾನ್ ಶ್ರೀ ಯದುನಂದನ್ ರವರಿಗೆ, ಎಸ್.ಪಿಯವರು ರಮೇಶ್ ರವರು ಸಮಾಜದ ಆಸ್ತಿ ಇವರÀನ್ನು ಮುಂದೆ ಬಿಡಪ್ಪ ಎಂದು ತಮಾಷೆ ಮಾಡಿದ್ದÀರು.

ಈ ರಸ್ತೆಯ ಜಗಳದಲ್ಲಿ ನನ್ನ ಮೇಲೂ ಸುಳ್ಳು ರೇಪ್ ಕೇಸ್ ಹಾಕಿದರೆ, ಎಸ್.ಪಿಯವರು ರಕ್ಷಣೆ ನೀಡುವರು ಎಂಬ ಭರವಸೆಯಿದೆ.  ಕುಂದರನಹಳ್ಳಿಯಲ್ಲಿ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ತಪೋವನ ಮಾಡುವಾಗ, ‘ನನ್ನ ಮೇಲೆ ಅಟ್ರಾಸಿಟಿ ಕೇಸ್ ಹಾಕಿಸಿದ ಇತಿಹಾಸವೂ ಇದೆ.

ಕೇಸ್ ಹಾಕಿದವರ ಕುಟುಂಬದ ಎಲ್ಲಾ ಸದಸ್ಯರು, ನಮ್ಮ ತಂದೆಗೆ ಯಾರೋ ಹೇಳಿಕೊಟ್ಟು ಕೇಸ್ ಹಾಕಿದ್ದಾರೆ. ಕುಂದರನಹಳ್ಳಿ ರಮೇಶ್ ರವರು ಎಂದು ಜಾತಿ ಹಿಡಿದು ಮಾತನಾಡುವುದಿಲ್ಲಾ ಎಂದು ಹೇಳಿಕೆ ಕೊಟ್ಟಿದ್ದರಂತೆ. ಇದು ನಮ್ಮ ಕರ್ಮ.

ಸೋಪನಹಳ್ಳಿ ಕರಾಬು ಹಳ್ಳ  ಒತ್ತುವರಿ ತೆರವು, ಕುಂದರನಹಳ್ಳಿ ಪವಿತ್ರವನ, ಇನ್ನೂ ಮುಂತಾದ ವಿಚಾರಗಳ ಬಗ್ಗೆಯೂ ಚರ್ಚೆ ನಡೆಯಿತು.