TUMAKURU:SHAKTHIPEETA FOUNDATION
ಬೆಂಗಳೂರಿನ ಪ್ರಿಸ್ಟೇಜ್ ಜಿಂದಾಲ್ ಸಿಟಿ(ಪಿಜೆಸಿ)ಯಲ್ಲಿ ಆಯುಷ್ ಪಾರ್ಕ್ ನಿರ್ಮಾಣ ಮಾಡಲು ಇಲ್ಲಿನ ನಿವಾಸಿಗಳು ಚಿಂತನೆ ನಡೆಸಿದ್ದಾರೆ. ಸುಮಾರು 32 ಗುಂಟೆಯಲ್ಲಿ ಆಯುಷ್ ಗಿಡಗಳನ್ನು ಹಾಕಿ ನಿವಾಸಿಗಳಿಗೆ ಸಾವಯವ ಪ್ರೆಷ್ ಜ್ಯೂಸ್ ಸಿದ್ಧಪಡಿಸಿ ಮಾರಾಟ ಮಾಡಲು ಆಲೋಚನೆ ನಡೆಸಿದ್ದಾರೆ.
ಕೊರೊನಾ ಮಾಹಾಮರಿಗೆ ತತ್ತರಿಸಿರುವ ಜನ, ಕೊಳಚೆ ನೀರಿನಲ್ಲಿ ಬೆಳೆಯುವ ಆಯುಷ್ ಗಿಡಗಳಿಗಿಂತ ಇಲ್ಲೇ ಬೆಳೆದು, ಒಂದು ಕುಟುಂಬಕ್ಕೆ ಕಂಟೈನರ್ ಹೌಸ್ ನಿರ್ಮಾಣ ಮಾಡಿ, ಆ ಕುಟುಂಬದವರಿಂದ ನಿವಾಸಿಗಳು ಹೇಳುವ ಗಿಡ ಹಾಕಿ, ನಿವಾಸಿಗಳ ಬೇಡಿಕೆಗೆ ತಕ್ಕಂತೆ ಜ್ಯೂಸ್ ಮಾಡಿಸಿಕೊಳ್ಳವ ಬಗ್ಗೆ ಚರ್ಚೆ ನಡೆಯುತ್ತಿದೆ.
ಆಯುಷ್ ಜ್ಯೂಸ್ ಜೊತೆಗೆ, ಆಯುಷ್ ಫುಡ್, ಆಯುಷ್ ಔಷಧಿ, ಆಯುಷ್ ಫೌಡರ್, ಎಲೆ, ಬಳ್ಳಿ, ಗೆಡ್ಡೆ ಇತ್ಯಾದಿ ಔಷಧಿಯ ಪದಾರ್xಗಳನ್ನು ಆಯುಷ್ ಡಾಕ್ಟರ್, ಪಾರಂಪರಿಕ ವೈಧ್ಯರ ಸಲಹೆ ಮೇರೆಗೆ ಸಿದ್ಧಪಡಿಸುವುದು, ಮಕ್ಕಳಿಗೆ ಆಯುಷ್ ಔಷಧಿಯ ಗಿಡಗಳ ಪರಿಚಯ ಮಾಡಿಸಲು ಸಿದ್ಧತೆ ನಡೆಸುತ್ತಿದ್ದಾರೆ.
ಪಿಜೆಸಿ ನಿವಾಸಿಗಳ ಆಯುಷ್ ಗ್ರೂಪ್ ರಚಿಸಿ, ಎಲ್ಲರ ಅಭಿಪ್ರಾಯ ಪಡೆದು ಮುಂದೆ ಸಾಗಲು ರೂಪುರೇಷೆ ನಿರ್ಧರಿಸಲು ಮುಂದೆ ಬಂದಿದ್ದಾರೆ.
32 ಗುಂಟೆ ಜಮೀನನ್ನು ಸಮತಟ್ಟು ಮಾಡುತ್ತಿರುವ ವಿವಿಧ ಫೋಟೊಗಳು.