23rd April 2024
Share

TUMAKURU:SHAKTHIPEETA FOUNDATION

 ಬೆಂಗಳೂರಿನ ಪ್ರಿಸ್ಟೇಜ್ ಜಿಂದಾಲ್ ಸಿಟಿ(ಪಿಜೆಸಿ)ಯಲ್ಲಿ ಮಾನವ ಗ್ರಂಥಾಲಯ ಆರಂಭವಾಗಿದೆ. ಆಸಕ್ತ ವಿವಿಧ ವಿಷಯಗಳಲ್ಲಿನ ಪರಿಣಿತರ ಪ್ರತಿಯೊಬ್ಬ ಮನಷ್ಯರ ತಲೆಯಲ್ಲಿ ಯಾವ ಪ್ರಮುಖ ಅಂಶದ ಬಗ್ಗೆ ಜ್ಞಾನವಿದೆ, ಅದನ್ನು ಹೆಕ್ಕಿ ಸಂಗ್ರಹಮಾಡುವುದೇ ಮಾನವ ಗ್ರಂಥಾಲಯದ ಪ್ರಮುಖ ಉದ್ದೇಶ.

ದಿನಾಂಕ:30.09.2022 ರಂದು ಬೆಂಗಳೂರಿನ ಪ್ರಿಸ್ಟೇಜ್ ಜಿಂದಾಲ್ ಸಿಟಿ(ಪಿಜೆಸಿ)ಯಲ್ಲಿ ಶ್ರೀ ಸಿದ್ಧಗಂಗಪ್ಪನವರು, ವಿಜ್ಞಾನ ಕೇಂದ್ರದ ಶ್ರೀ ವಿಶ್ವನಾಥ್‍ರವರು, ಶ್ರೀ ಸುಬ್ರಮಣ್ಯರವರು, ಶ್ರೀ ಶೇಖರಪ್ಪನವರು, ಶ್ರೀ ಶಾಸ್ತ್ರಿರವರೊಂದಿಗೆ ಆಯುಷ್ ಪಾರ್ಕ್ ಬಗ್ಗೆ ಅವರ ಜ್ಞಾನವನ್ನು ಸಂಗ್ರಹಮಾಡಲಾಯಿತು. ಕಾರ್ಯಾರಂಭ ಮಾಡಲು ಸಿದ್ಧತೆ ನಡೆಸಲಾಯಿತು. ನಾಟಿ ವೈಧ್ಯ ಶ್ರೀ ಗುರುಸಿದ್ಧರಾಧ್ಯರವರು ಸಹ ತಮ್ಮ ಜ್ಞಾನವನ್ನು ಹಂಚಿಕೊಂಡರು.

ದಿನಾಂಕ:01.10.2022 ನೇ ಶನಿವಾರ ಪಿಜೆಸಿ ನಿವಾಸಿ ಶ್ರೀ RAJESH ರವರೊಂದಿಗೆ ಸಿಟಿ ಕ್ಲಬ್ ನ ರೀಡಿಂಗ್ ರೂಮಿನಲ್ಲಿ ‘ಮಾನವೀಯತೆ’ ಪಾಠ ಮಾಡಿಸಿಕೊಳ್ಳಲಾಯಿತು.

ಅವರ ಪ್ರಕಾರ ಪ್ರತಿಯೊಬ್ಬ ಪೋಷಕರು, ತಮ್ಮ ಮಕ್ಕಳನ್ನು ಓದಿ, ವೈಧ್ಯರಾಗಿ, ಇಂಜಿನಿಯರ್ ಆಗಿ, ಪ್ಲಾಟ್ ಕೊಂಡುಕೊಳ್ಳಿ, ಕಾರ್ ತೆಗೆದುಕೊಳ್ಳಿ, ಸೇವಿಂಗ್ಸ್ ಮಾಡಿ ಎಂಬ ಬಗ್ಗೆ ಮಾತ್ರ ಒತ್ತಾಯ ಮಾಡುತ್ತೇವೆ ಸಾರ್.

ಆದರೆ ಮಾನವೀಯತೆ ಮೈಗೂಡಿಸಿಕೊಳ್ಳಿ, ತಂದೆ ತಾಯಿ ಪ್ರೀತಿಸಿ, ಹಿರಿಯರನ್ನು ಗೌರವಿಸಿ, ನೆರೆಹೊರೆಯವರೊಂದಿಗೆ ಉತ್ತಮ ಭಾಂದವ್ಯ ಹೊಂದಿ, ತಪ್ಪು ಕಂಡರೆ ಪ್ರತಿಭಟನೆ ಮಾಡಿ, ತಿದ್ದಲು ಪ್ರಯತ್ನಿಸಿ, ಸಮಾಜ ಸೇವೆಗೆ ತಮ್ಮ ಪ್ರತಿ ದಿನದಲ್ಲಿ ಶೇ.10 ರಷ್ಟು ಸಮಯ ಮೀಸಲಿಡಿ, ತಮ್ಮ ದುಡಿಮೆಯಲ್ಲಿ ಶೇ.15 ರಷ್ಟು ದಾನ ಧರ್ಮ ಅಥವಾ ಸಮಾಜ ಸೇವೆಗೆ ಮೀಸಲಿಡಿ ಎಂದು ಯಾವ ಪೋಷಕರಾದರೂ ಮನೆಯಲ್ಲಿ ಪಾಠ ಮಾಡುತ್ತೇವೇಯೇ ಸಾರ್.

ಜೀವನವನ್ನೇ ವ್ಯಾಪಾರಮಯ, ಬ್ಯುಸಿಮಯ, ಸೋಶಿಯಲ್ ಮೀಡಿಯಾ ಮಯ, ಬಾಗಿಲು ಹಾಕಿಕೊಂಡು ಒಳಗೆ ಸೇರಿಕೊಳ್ಳುವ ಒಂಟಿ ತನದ ಮಯ, ಸಿಡುಕಿನ ಮಯ ಮಾಡಿ ಬಿಟ್ಟಿದ್ದೇವೆ ಸಾರ್.

ನಾವು ಈ ರೀಡಿಂಗ್ ರೂಮ್ ನಲ್ಲಿ ಮಾನವೀಯತೆ ಗ್ರಂಥಾಲಯ ಏಕೆ ? ಮಾಡಬಾರದು, ಎಂಬ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡೆವು. ನಾನು ಈ ಬಗ್ಗೆ ಈಗಾಗಲೇ ಒಂದು ವರದಿ ಮಾಡಿದ್ದೇನೆ, ತಾವು ಅದನ್ನು ಓದಿಕೊಳ್ಳಿ, ಈ ಅಪಾರ್ಟ್‍ಮೆಂಟ್ ನಲ್ಲಿರುವ ಎಲ್ಲಾ ನಿವಾಸಿಗಳ ಬಾಷೆವಾರು ಗ್ರೂಪ್ ರಚಿಸಿ, ಎಲ್ಲಾ ಬಾಷೆಗಳಿಗೆ ಬಾಷಾಂತರ ಮಾಡಿ, ಆಸಕ್ತರ ಅಭಿಪ್ರಾಯ ಸಂಗ್ರಹ ಮಾಡಲು ಯೋಚಿಸಿದೆವು.

 ಮಾನವೀಯತೆ ಜಾಗೃತಿ ಬಗ್ಗೆ, ಅವರು ಒಂದು ರೂಪುರೇಷೆ ಸಿದ್ಧಪಡಿಸಿ, ಅದರ ಮೇಲೆ ಆಸಕ್ತರೊಂದಿಗೆ ಚರ್ಚೆ ಮಾಡೋಣ ಸಾರ್, ನನ್ನ ಜೀವನದ ಪ್ರತಿಯೊಂದು ದಿವಸದ ಕನಿಷ್ಟ 6 ಗಂಟೆಯಾದರೂ ನಾನು ಸಮಾಜ ಸೇವೆ ಮಾಡಲು ಇಚ್ಚಿಸಿದ್ಧೇನೆ, 

ಜೊತೆಗೆ ದುಡಿಮೆಗೂ 8 ಗಂಟೆ ಸಮಯ ವ್ಯಯ ಮಾಡಲೇಬೇಕು, ನನ್ನ ಕೆಲಸ ವರ್ಕ್ ಪ್ರಂ ಹೋಂ ಮಾದರಿ ಎಂಬ ವಿಚಾರವನ್ನು ಹಂಚಿಕೊಂಡರು.

 ನಮ್ಮ ಶಕ್ತಿಪೀಠ ಕ್ಯಾಂಪಸ್ ಉದ್ದೇಶದ ಬಗ್ಗೆ ಅವರೊಂದಿಗೆ ಕಿರು ಮಾಹಿತಿ ಹಂಚಿಕೊಂಡೆನು. ವಿಶ್ವದ 108 ಶಕ್ತಿಪೀಠಗಳ ಪ್ರಾತ್ಯಾಕ್ಷಿಕೆ, ನದಿ ಜೋಡಣೆ ಪ್ರಾತ್ಯಾಕ್ಷಿಕೆ, ಭಾರತ ದರ್ಶನದ ಪ್ರಾತ್ಯಾಕ್ಷಿಕೆ, ಭೂಮಿಯ ಮೇಲೆ ಭಾರತ ನಕ್ಷೆ, ಕೃತಕ ಅರಭ್ಬೀ ಸಮುದ್ರ, ಬಂಗಾಳ ಕೊಲ್ಲಿ, ಹಿಂದೂವiಹಾಸಾಗರ, ಆಯುಷ್ ಪಾಥ್, ರಿಂಗ್ ರಸ್ತೆ, ನಮ್ಮ ಪ್ರಧಾನಿ- ನಮ್ಮ ಮುಖ್ಯ ಮಂತ್ರಿ ಯೋಜನೆಗಳ ಮ್ಯೂಸಿಯಂ ಬಗ್ಗೆ ಸಮಾಲೋಚನೆ ನಡೆಸಿದೆವು.