27th July 2024
Share

TUMAKURU:SHAKTHIPEETA FOUNDATION

ನನ್ನ ಜೀವನವೇ ಒಂದು ವಿಚಿತ್ರ, ನಾನೊಬ್ಬ ರೈತನಾಗಿ, ಕಳೆದ 34 ವರ್ಷಗಳ ಕಾಲ ನಿರಂತರವಾಗಿ ಅಭಿವೃದ್ಧಿ ಆಂದೋಲನ ನಡೆಸಿರುವುದು ನನಗೆ ಕೆಲವು ಬಾರಿ ಆಶ್ಚರ್ಯವಾಗತ್ತದೆ. ಆದರೆ ನನ್ನ ಕಣ್ಣೆದರು ಹಲವಾರು ಯೋಜನೆಗಳ ಜಾರಿ ನಿಜಕ್ಕೂ ನನ್ನ ಜೀವನಕ್ಕೆ ನೆಮ್ಮದಿ ತಂದಿದೆ. ನನ್ನ ಜೀವನ ಪರಿಪೂರ್ಣ ಎನಿಸುತ್ತಿದೆ.

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಕಳೆದ 32 ವರ್ಷಗಳಿಂದಲೂ ಅಭಿವೃದ್ಧಿ ವಿಚಾರಗಳ ಬಗ್ಗೆ ಸ್ಪಂಧಿಸುತ್ತಿರುವುದು, ಕಳೆದ ಹಲವಾರು ವರ್ಷಗಳ ಕಾಲ ಸಾವಿರಾರು ಬುದ್ಧಿ ಜೀವಿಗಳ ಸಹಕಾರ ಮರೆಯುವ ಹಾಗಿಲ್ಲ.

ಈಗ ನಾನು ರಾಜ್ಯದ ಅಭಿವೃದ್ಧಿಗೆ ಶ್ರಮಿಸಲು ಬೆಂಗಳೂರಿಗೂ ಕಾಲಿಟ್ಟಿರುವುದು ಒಂದು ವಿಶಿಷ್ಠವಾಗಿದೆ.

  1. ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಸರ್ಕಾರ ಅತಿ ಹೆಚ್ಚಿನ ಅನುದಾನ ಪಡೆಯಲು ಸ್ಟ್ರಾಟಜಿ
  2. ಕರ್ನಾಟಕ ರಾಜ್ಯದ ಸಮಗ್ರ ನೀರಾವರಿ ಚಿತ್ರಣ ಒಳಗೊಂಡ ಜಲಗ್ರಂಥ
  3. 2047 ರ ನವ ಕರ್ನಾಟಕ ವಿಷನ್ ಡಾಕ್ಯುಮೆಂಟ್.
  4. 224 ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿ ಮೌಲ್ಯಮಾಪನ.
  5. ಶಕ್ತಿಪೀಠ ಕ್ಯಾಂಪಸ್ ಸ್ಥಾಪನೆ.

ಈ ಐದು ವಿಚಾರಗಳ ಅಧ್ಯಯನ ಹಾಗೂ ಅನುಷ್ಠಾನಕ್ಕಾಗಿ ಶ್ರಮಿಸಲು, ರಾಜ್ಯದ ರಾಜಧಾನಿಯಲ್ಲೂ ಒಂದು ಕಚೇರಿ ಅಗತ್ಯವಿದೆ ಎಂಬ ದೂರಧೃಷ್ಠಿಯಿಂದ ದಿನಾಂಕ:05.10.2022 ರಿಂದ ಅಧಿಕೃತಕವಾಗಿ ಬೆಂಗಳೂರಿನಿಂದ ಕಾರ್ಯನಿರ್ವಹಿಸುತ್ತಿದ್ಧೆನೆ.

  1. ಅದಲಗೆರೆ ಶ್ರೀ ನಾಗೇಂದ್ರ ಕಳೆದ 10-15 ವರ್ಷಗಳಿಂದ ಬೆಂಗಳೂರಿಗೆ ಹೋಗಲು ಹೇಳುತ್ತಿದ್ದರು.
  2. ಟೆಕ್ನೋಕಾನ್ ಶ್ರೀ ರಾಮಮೂರ್ತಿರವರು ಅವರೇ ರೂ ಒಂದು ಲಕ್ಷ ಮುಂಗಡ ಹಣದ ಚೆಕ್ ನೀಡಿ, ಪ್ಲಾಟ್ ಬುಕ್ ಮಾಡಿಸಿದರು.
  3. ಶ್ರೀ ಸತ್ಯಾನಂದ್ ರವರು ವಾಸ್ತು ಮತ್ತು ಪರಿಸರ ನೋಡಿ, ನೀವೂ ಇಲ್ಲೇ ಇರಿ ಸಾರ್ ಎಂದರು.
  4. ನನಗೆ ಅಡ್ವಾನ್ಸ್ ಬೇಡ ಸಾರ್ 8 ತಿಂಗಳ ಕಾಲ ಬಾಡಿಗೆ ನೀಡಿ, ನಮ್ಮ ಮನೆಯಲ್ಲಿಯೇ ಇರಿ ಎಂದು ಶ್ರೀಮತಿ ಕುಸುಮ ಮತ್ತು ಶ್ರೀ ಜಗದೀಶ್ ರವರು ಮನೆ ನೀಡಿದರು.
  5. ಶ್ರೀ ಟಿ.ಆರ್.ರಘೋತ್ತಮರಾವ್ ರವರು ನಿಮ್ಮ ಸ್ಪೀಡ್‍ಗೆ ಬೆಂಗಳೂರು ಸೂಕ್ತ ? ಆದರೆ ಯಾವುದೇ ಕಾರಣಕ್ಕೂ ನಿಮ್ಮ ಹುಟ್ಟೂರಿನ ಯೋಜನೆಗಳು, ತುಮಕೂರು ನಗರದ ಹಾಗೂ ಜಿಲ್ಲೆಯ ಯೋಜನೆಗಳ ಕನಸು ಮರೆಯಿದಿರಿ ಎಂದರು. ಹಳ್ಳಿಯಿಂದ ರಾಜಧಾನಿವರೆಗೂ ಅನುಭವ ಕೊನೆವರೆಗೂ ಇದ್ದರೆ ಮಾತ್ರ ಒಳ್ಳೆಯದು ಎಂಬ ಭಾವನೆ ಅವರದು.
  6. 2002 ರಲ್ಲಿ ಕುಂದರನಹಳ್ಳಿಯಿಂದ ತುಮಕೂರಿಗೆ ಮನೆ ಶಿಪ್ಟ್ ಮಾಡಿದ ತಂಡವೇ, ಶ್ರೀ ಸಿದ್ಧರಾಮಯ್ಯ, ಶ್ರೀ ಕೆ.ಆರ್.ಮಹೇಶ್, ಶ್ರೀ ಶಿವಣ್ಣ, ಶ್ರೀ ವಿಶ್ವನಾಥ್, ಶ್ರೀ ಕಾಂತಪ್ಪನವರು, ಈಗಲೂ ಬೆಂಗಳೂರಿಗೂ ಶಿಪ್ಟ್ ಮಾಡಿ, ಇನ್ನೂ ಮುಂದೆ ಎಲ್ಲಿಗೆ ಬರಬೇಕೋ ಎಂದು ಹಾಸ್ಯ ಮಾಡಿದರು.
  7. ಸುಮಾರು 45 ವರ್ಷಗಳಿಂದಲೂ ನಮ್ಮ ತೋಟದ ಕೆಲಸ ಮಾಡುತ್ತಿರುವ ಶ್ರೀ ಸಿದ್ಧಯ್ಯನವರು ನೀವೂ ಹೇಳಿದ ಹಾಗೆ ಮಾಡುತ್ತಿದ್ದಿರಾ ಸ್ವಾಮಿ ಎಂದರು.
  8. ಶ್ರೀ ಜಿ.ಎಸ್.ಬಸವರಾಜ್ ರವರು ಎಲ್ಲದಕ್ಕೂ ಅನೂಕೂಲವಿದೆ ಪಿಜೆಸಿಯಲ್ಲಿ ಮಾಡಿ ಎಂದರು.
  9. ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಇನ್ನೂ ನಗರದ ಹತ್ತಿರದಲ್ಲಿ ಇರಬೇಕಾಗಿತ್ತು, ಇಲ್ಲಿಂದಲೂ ಈ ಟ್ರಾಫೀಕ್‍ನಲ್ಲಿ ಒಂದು ಗಂಟೆ ಜರ್ನಿಯಾಗಲಿದೆ ಎಂಬ ಸಲಹೆ ನೀಡಿದರು.

ಶಕ್ತಿದೇವತೆಯ ಆಟವನ್ನು ಕಾದು ನೋಡೋಣ? ದೇವತೆ ಆಡಿಸಿದ ಹಾಗೆ ಆಡುವುದು ನಮ್ಮ ಕರ್ತವ್ಯ.