24th April 2024
Share

TUMAKURU:SHAKTHIPEETA FOUNDATION

ದಿನಾಂಕ:02.10.2022 ರಂದು ಗಾಂಧಿ ಜಯಂತಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಜಯಂತಿ ದಿವಸ ನವರಾತ್ರಿಯ ಸಂದರ್ಭದಲ್ಲಿ ಬೆಂಗಳೂರಿನ ಪಿಜಿಸಿಯಲ್ಲಿ ಪಂಚವಟಿ ಗಿಡಗಳನ್ನು ಹಾಕಲು ಸಹಕರಿಸಿದ ಎಲ್ಲಾ ನಿವಾಸಿಗಳಿಗೆ ಹಾಗೂ ಪ್ರಿಸ್ಟೇಜ್ ರವರಿಗೆ ಅಭಿನಂದನೆಗಳು.

ನಾನೂ ಇಲ್ಲಿ ಈ ಗಿಡಗಳನ್ನು ಹಾಕಲು ಚಿಂತನೆ ನಡೆಸಿದಾಗ, ಯಾವ ಜಾಗದಲ್ಲಿ ಹಾಕಬೇಕು ಎಂಬ ಅನುಮಾನವಿತ್ತು. ಪ್ರಿಸ್ಟೇಜ್ ಗ್ರೂಪ್ ಅಧಿಕಾರಿಗಳ ಜೊತೆ ಮಾತನಾಡಿದ್ದೆ. ನಂತರ ಪಿಜೆಸಿಯ ಹಲವಾರು ನಿವಾಸಿಗಳಿಗೆ ಈ ಸ್ಥಳದ ಮಾಹಿತಿ ತಿಳಿದಿದ್ದು ನಿಜಕ್ಕೂ ಒಳ್ಳೆಯದು.

ಸುಮಾರು 32  ಗುಂಟೆ ಜಮೀನಿನನಲ್ಲಿ ಆಯುಷ್ ಪಾರ್ಕ್ ಪಿಪಿಟಿ ಸಿದ್ಧವಾಗುತ್ತಿದೆ. ನಿವಾಸಿಗಳು, ಮಾಲೀಕರು ಎಲ್ಲರೂ ಒಪ್ಪಿಗೆ ನೀಡಿದರೆ, ಈ ಯೋಜನೆ ಜಾರಿಯಾಗಲಿದೆ.

ಪಂಚವಟಿ ಗಿಡಗಳ ಬಗ್ಗೆಯೂ ಅಪಸ್ವರ ಎದ್ದಿದೆ, ಈ ಐದು ಗಿಡಗಳ ಜೊತೆಗೂ ಇನ್ನೂ ಹಲವಾರು ಜಾತಿಯ ಗಿಡ ಸೇರಿಸಬೇಕು ಸಾರ್ ಎಂದು ಮಂಡ್ಯದ ನಾಟಿ ವೈಧ್ಯ, ಹಲವಾರು ಪ್ರಶಸ್ತಿ ಪುರಸ್ಕøತರಾದ ಶ್ರೀ ಶಂಕರೇಗೌಡರು ಕರೆ ಮಾಡಿದ್ದಾರೆ.

ಈ ಬಗ್ಗೆ ವೈಜ್ಞಾನಿಕವಾದ ಚರ್ಚೆ ಮಾಡಲು ಚಿಂತನೆ ನಡೆದಿದೆ. ಆಸಕ್ತರು ಕರೆ ಮಾಡಿ?