21st November 2024
Share

TUMAKURU:SHAKTHIPEETA FOUNDATION

ಚುನಾವಣೆ ಪ್ರಣಾಳಿಕೆ-2023

  ಮುಂಬರುವ ವಿಧಾನಸಭಾ ಚುನಾವಣೆಗೆ, ರಾಜ್ಯದ ಸರ್ವ ಪಕ್ಷಗಳಿಗೆ ಚುನಾವಣೆ ಪ್ರಣಾಳಿಕೆ-2023 ಸಿದ್ಧಪಡಿಸಿ ನೀಡಲು, ರಾಜ್ಯ ಮಟ್ಟದ ನಾಯಕರೊಬ್ಬರೂ ಸಲಹೆ ನೀಡಿದ್ದಾರೆ. 2009 ರ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಮತದಾರರ ಪ್ರಣಾಳಿಕೆಯನ್ನು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಬಿಡುಗಡೆ ಮಾಡಿತ್ತು.

2018 ರಲ್ಲಿ ನವ ಕರ್ನಾಟಕ ವಿಷನ್ ಡಾಕ್ಯುಮೆಂಟ್-2025 ಸಿದ್ಧಪಡಿಸಿ ಬಹುತೇಕ ಎಲ್ಲಾ ಪಕ್ಷಗಳ ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷರಿಗೆ ನೀಡಲಾಗಿತ್ತು. 

 ಆ ಎರಡು  ಅಧ್ಯಯನ ವರದಿಗಳನ್ನು ಮನನ ಮಾಡಿಕೊಂಡಿದ್ದ  ನಾಯಕರು ಈಗಲೇ ಸಲಹೆ ನೀಡಿದ್ದು ನನಗೆ ಸಮಾಧಾನ ತಂದಿದೆ. ಅವುಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಬಹುತೇಕ ಯೋಜನೆಗಳು ಜಾರಿಯಾಗಿರುವುದು ಹರ್ಷ ತಂದಿದೆ.

  ಮುಂದಿನ ವಿಧಾನಸಭಾ ಚುನವಣೆಗೆ 225 ಅಂಶಗಳನ್ನು, 2047 ವಿಷನ್ ಡಾಕ್ಯುಮೆಂಟ್‍ಗೆ ಪೂರಕವಾಗಿ ಸಿದ್ಧಪಡಿಸಲಾಗುವುದು. ಈ ಭಾರಿ ರಾಜ್ಯ ಮಟ್ಟದ ವಿವಿಧ ವರ್ಗದ ಪರಿಣಿತರನ್ನು, ಆಸಕ್ತ ಸಂಘ ಸಂಸ್ಥೆಗಳ ಪಧಾದಿಕಾರಿಗಳು, ವಿವಿಧ ಪಕ್ಷಗಳ ನಾಯಕರ, ವಿವಿಧ ಇಲಾಖಾ ಅಧಿಕಾರಿಗಳ, ವಿವಿಧ ವರ್ಗದ ಜನರಿಂದ ಮಾಹಿತಿ ಸಂಗ್ರಹಿಸಲಾಗುವುದು.

ಈ ವರ್ಷದ ನವರಾತ್ರಿಯ 9 ದಿವಸಗಳ ಕಾಲ ಶಕ್ತಿದೇವತೆಯನ್ನು ಪ್ರಾರ್ಥಿಸಿ ಚುನಾವಣಾ ಪ್ರಣಾಳಿಕೆಯನ್ನು ಸಿದ್ಧಪಡಿಸಲು ಆರಂಭಿಸಲಾಗಿದೆ. ಆಸಕ್ತರು ಸಲಹೆ ನೀಡಲು ಈ ಮೂಲಕ ಮನವಿ.

100 ನೇ ವರ್ಷದ ಸ್ವಾತಂತ್ರ್ಯದ ವೇಳೆಗೆ ನಿಖರವಾಗಿ ಪ್ರತಿಯೊಂದು ಯೋಜನೆಯೂ, ರಾಜ್ಯದ ಅರ್ಹಜನರಿಗೆ ತಲುಪುವಂತೆ ಮಾಡಲು, ರಾಜ್ಯದ 225 ಜನ ಶಾಸಕರು ಒಂದೊಂದು ಯೋಜನೆಯ ಹೊಣೆಗಾರಿಕೆ ಪಡೆದು ನಿರಂತರವಾಗಿ ಶ್ರಮಿಸಿದರೆ ಮಾತ್ರ, ನಿಗದಿತ ಅವಧಿಯೊಳಗೆ ಗುರಿ ತಲುಪಬಹುದಾಗಿದೆ.

ಸ್ವಾತಂತ್ರ್ಯ ಬಂದಾಗಿನಿಂದ ಜಾರಿಗೊಳಿಸಿದ ಯೋಜನೆಗಳ ಹಣ ಸದುಪಯೋಗವಾಗಿದ್ದರೆ, ನಮ್ಮ ದೇಶ ಇಂದು ಸಂಪದ್ಭರಿತವಾಗುತ್ತಿತ್ತು. ಪ್ರತಿಯೊಂದು ಸಮಸ್ಯೆಗೂ ಒಂದು ಯೋಜನೆ ಜಾರಿಮಾಡಿದ್ದಾರೆ. ಆದರೆ ಅನುಷ್ಠಾನ ಮತ್ತು ಮೌಲ್ಯಮಾಪನದಲ್ಲಿ ಎಲ್ಲರೂ ಬಹುತೇಕ ಸೋತಿದ್ದಾರೆ.

% ಹಾವಳಿ ಎಲ್ಲಾ ಕಾಲದಲ್ಲೂ ಅಬ್ಬರಿಸಿದೆ. ರಾಜಕಾರಣಿಗಳು ಬುರುಡೆ ಹೊಡೆದಿರುವುದೇ ಜಾಸ್ತಿ. ನಾನೂ ಕಳ್ಳ, ನೀನೂ ಕಳ್ಳ ಎಂಬ ಮಾತು ಎಲ್ಲಾ ಕಾಲದಲ್ಲೂ ಯಶಸ್ವಿಯಾಗಿದೆ.

ಎಲ್ಲಾ ಕಾಲದಲ್ಲೂ, ಎಲ್ಲಾ ಪಕ್ಷದಲ್ಲೂ ಕೆಲವು ನಾಯಕರು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ. ಅವರಿಗೆ ಪುರಸ್ಕಾರ ಸಿಗುವುದೇ ಕಷ್ಟವಾಗಿದೆ.