22nd December 2024
Share

TUMKURU:SHAKTHIPEETA FOUNDATION

ತುಮಕೂರು ನಗರದಲ್ಲಿ ಮಳೆ ನೀರಿನ ಅವಾಂತರದ ಬಗ್ಗೆ ತುಮಕೂರು ಮಹಾನಗರ ಪಾಲಿಕೆ ಒಂದು ಅಧ್ಯಯನ ಆರಂಭಿಸಿದೆ. ಬಹುಷಃ ರಾಜ್ಯದ ಯಾವ ನಗರದಲ್ಲಿಯೂ ಈ ರೀತಿ ಅಧ್ಯಯನ ಆರಂಭಿಸಿರುವುದು ಇದೂವರೆಗೂ ನನ್ನ ಗಮನಕ್ಕೆ ಬಂದಿಲ್ಲ, ಯಾವುದಾದರೂ ಜಿಲ್ಲೆಯಲ್ಲಿ ಅಧ್ಯಯನ ಮಾಡಿದ್ದರೆ ವಿಷಯ ಹಂಚಿಕೊಳ್ಳಲು ಮನವಿ.

ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಹಾಗೂ ಸಂಸದರಾದ ಶ್ರೀ ಜಿ.ಎಸ್.ಬಸವರಾಜ್ ರವರು ವಿಶೇಶ ಆಸಕ್ತಿ ವಹಿಸಿ, ಮಳೆಗಾಲದಲ್ಲಿ ಮನೆಗಳಿಗೆ ನುಗ್ಗುವ ಕೊಳಚೆ ನೀರಿಗೆ ಅಂತ್ಯಹಾಡಲು ನಿರ್ಧಾರ ಮಾಡಿ, ಈ ಅಧ್ಯಯನ ಆರಂಭಿಸಿದ್ದಾರೆ.

ಅಂತಹ ವಿಶೇಷತೆ ಇಲ್ಲೇನಿದೆ.

  1. ಗ್ರಾಮ ನಕ್ಷೆವಾರು ಕರಾಬುಹಳ್ಳಗಳ ನಕ್ಷೆ ಸಹಿತ ಮಾಹಿತಿ ಸಂಗ್ರಹ.
  2. ಸರ್ವೆ ನಂಬರ್ ವಾರು ಕರಾಬುಹಳ್ಳಗಳ ನಕ್ಷೆ ಸಹಿತ ಮಾಹಿತಿ ಸಂಗ್ರಹ.
  3. ಲೇ ಔಟ್‍ವಾರು ಕರಾಬುಹಳ್ಳಗಳ ನಕ್ಷೆ ಸಹಿತ ಮಾಹಿತಿ ಸಂಗ್ರಹ.
  4. ಗ್ರಾಮವಾರು ಕೆರೆ-ಕಟ್ಟೆಗಳ ಮಾಹಿತಿ ಸಂಗ್ರಹ.
  5. ಕೆರೆ-ಕಟ್ಟೆವಾರು ಕ್ಯಾಚ್ ಮೆಂಟ್ ಏರಿಯಾ ಮಾಹಿತಿ ಸಂಗ್ರಹ.
  6. ಕರಾಬು ಹಳ್ಳಗಳವಾರು ಹರಿಯುವ ಮಳೆ ನೀರಿನ ಸಾಮಾಥ್ರ್ಯ.
  7. ಮಳೆ ನೀರಿನ ಸಾಮಾರ್ಥಕ್ಕೆ ಅನುಗುಣವಾಗಿ ಸಿಡಿ ಕಾಮಗಾರಿಗಳ ಸ್ಥಿತಿ ಗತಿ.
  8. ಕೆಲವು ಕರಾಬುಹಳ್ಳಗಳು ಕಂಟಿನ್ಯೂಟಿ ಇಲ್ಲ, ಅವುಗಳ ಇತಿಹಾಸದ ಮಾಹಿತಿ.
  9. ಕರಾಬುಹಳ್ಳಗಳನ್ನು ಮುಚ್ಚಿರುವ ರೈಲ್ವೆ ಕಾಮಗಾರಿ, ಹೈವೇ ಕಾಮಗಾರಿ, ಹೇಮಾವತಿ ಮುಖ್ಯ ಕಾಲುವೆ, ಎತ್ತಿನಹೊಳೆ ಮುಖ್ಯ ಕಾಲುವೆ(ಎಲ್.ಪಿ.ಎ ವ್ಯಾಪ್ತಿ), ವಿವಿಧ ರಸ್ತೆ, ಲೇ ಔಟ್ ಪುಣ್ಯಾತ್ಮರು ಹೀಗೆ ಪ್ರತಿಯೊಂದು ಅಂಶಗಳನ್ನು ಗಣನೆಗೆ ತೆಗೆದುಕೊಂಡಿದ್ದಾರೆ.

ಆಗಿರುವ ಅನಾಹುತಗಳ ಪರಿಹಾರಕ್ಕೆ, ಅಗತ್ಯವಿರುವ  ಯೋಜನೆಗಳೇನು? ಎಂಬ ಅಧ್ಯಯನ ನಡೆಯುತ್ತಿದೆ.

ಕರಾಬುಹಳ್ಳಗಳು, ಕೊರಕಲುಗಳು, ರಾಜಕಾಲುವೆಗಳು, ಮುಚ್ಚಿರುವ ಕೆರೆ-ಕಟ್ಟೆಗಳು ಮಳೆಗಾಲದಲ್ಲಿ ಮಾತ್ರ ಸುದ್ಧಿ ಮಾಡುತ್ತವೆ. ಮಳೆ ನಿಂತ ಮೇಲೆ ಎಲ್ಲರೂ ಮರೆಯುತ್ತಾರೆ. ಇಲ್ಲಿ ಶಾಶ್ವತ ಯೋಜನೆಗೆ ಪರಿಹಾರ ಹುಡುಕಲು ಚಿಂತನೆ ನಡೆಸಿದ್ದಾರೆ.

ಇದು ನನ್ನ ಹಲವಾರು ವರ್ಷದ ಕನಸಾಗಿತ್ತು. ಈ ಬಗ್ಗೆ ಜ್ಞಾನವಿರುವ ಪರಿಣಿತರು, ಇನ್ನೂ ಯಾವ ಮಾಹಿತಿ ಅಧ್ಯಯನ ಮಾಡಬೇಕು ಸಲಹೆ ನೀಡುವಿರಾ?

 ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯನಾದ ನಾನು, ಈ ಕಾಮಗಾರಿಗಳಿಗೆ ಕೇಂದ್ರ ಸರ್ಕಾರದಿಂದ ಯಾವ ಯೋಜನೆಯಡಿ ಅನುದಾನದ ಮಂಜೂರು ಮಾಡಿಸಲು ಪ್ರಸ್ತಾವನೆ ಸಲ್ಲಿಸಬಹುದು ಎಂಬ ಬಗ್ಗೆ ಪಾಲಿಕೆ ಅಧಿಕಾರಿಗಳು ಮತ್ತು ಸಲಹಾಗಾರರ ಜೊತೆ ಸಮಾಲೋಚನೆ ನಡೆಸಿದೆ.