12th April 2024
Share

TUMAKURU:SHAKTHIPEETA FOUNDATION

ನಮ್ಮೂರಿನ ಪಕ್ಕದ ಬಿದರೆಹಳ್ಳಕಾವಲ್ ನ 610 ಎಕರೆ ಪ್ರದೇಶದಲ್ಲಿ ಭಾರತ ಸರ್ಕಾರದ ರಕ್ಷಣಾ ಇಲಾಖೆಯ ಹೆಚ್.ಎ.ಎಲ್ ವತಿಯಿಂz ಸುಮಾರು ರೂ 6400 ಕೋಟಿ ವೆಚ್ಚದಲ್ಲಿÀ ಯುದ್ಧ ಹೆಲಿಕ್ಯಾಪ್ಟರ್ ಮೂಲಕ ವಿಶ್ವದ ಗಮನ ಸೆಳೆಯಲಿದೆ.

ಈ ಯೋಜನೆಗೆ ಹೊಂದಿಕೊಂಡಿರುವ ಕುಂದರನಹಳ್ಳಿ ಗ್ರಾಮದಲ್ಲಿ ದೇಶದ ಪ್ರಧಾನಿಗಳ ಮತ್ತು ರಾಜ್ಯದ ಮುಖ್ಯಮಂತ್ರಿಗಳ ಅವಧಿಯಲ್ಲಿನ ಯೋಜನೆಗಳ ಹಾಗೂ ಹೆಚ್.ಎ.ಎಲ್ ಮ್ಯೂಸಿಯಂ ಸ್ಥಾಪಿಸಲು ಚಿಂತನೆ ಆರಂಭವಾಗಿದೆ. ಸಾಧ್ಯಾ ಸಾಧ್ಯತಾ ಬಗ್ಗೆ ಚರ್ಚೆ ಆರಂಭವಾಗಿದೆ. ಯೋಜನೆ ಯಶಸ್ವಿಯಾದರೆ, ದೇಶದ ಭೂಪಟದಲ್ಲಿ ಕುಂದರನಹಳ್ಳಿ ಸುದ್ಧಿಯಾಗಲಿದೆ.

ಭಾರತ ದೇಶದ ಪ್ರಧಾನಿಗಳಾಗಿರುವ ವಿವಿಧ ರಾಜ್ಯದ ಜನರು ಹಾಗೂ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದವರ ವಿವಿಧ ಜಿಲ್ಲೆಯ ಜನರ ಒಂದು ವಿಷನ್ ಗ್ರೂಪ್ ರಚಿಸಲು ಆಲೋಚನೆ ಇದೆ.

ಪಿಜೆಸಿಯಲ್ಲಿ ಬಹುತೇಕ ದೇಶದ ಪ್ರಧಾನಿಗಳ ಹಾಗೂ ರಾಜ್ಯದ ಮುಖ್ಯಮಂತ್ರಿಯವರ ತವರು ಜಿಲ್ಲೆಯ ಜನರ ಡಾಟಾವನ್ನು ಶ್ರೀ ಸಿದ್ಧಗಂಗಪ್ಪನವರು ಸಂಗ್ರಹಿಸುವ ಕೆಲಸ ಆರಂಭಿಸಿದ್ದಾರೆ.

ಮ್ಯೂಸಿಯಂ ಸ್ಥಾಪಿಸುವ ವೇಳೆಗೆ ಸಂಸದರ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಕುಂದರನಹಳ್ಳಿ ಹಾಗೂ ಅಕ್ಕ ಪಕ್ಕದ ಗ್ರಾಮಗಳ ಸಮಗ್ರ ಅಭಿವೃದ್ಧಿ ಬಗ್ಗೆ ಮೊದಲನೇ ಹಂತದಲ್ಲಿ ಸುಮಾರು 35 ಯೋಜನೆಗಳಿಗೆ ಚಾಲನೆ ನೀಡಲು ಸಿದ್ಧತೆ ನಡೆದಿದೆ. ಗ್ರ್ರಾಮಸ್ಥರೊಂದಿಗೆ ಹಾಗೂ ಅಧಿಕಾರಿಗಳೊಂದಿಗೆ ವಿವಿಧ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಲಾಯಿತು.