27th July 2024
Share

TUMAKURU:SHAKTHIPEETA FOUNDATION

ಪಿಜೆಸಿಯ ಆವರಣದಲ್ಲಿ ಸುಮಾರು 32 ಗುಂಟೆ ಜಮೀನಿÀನಲ್ಲಿ  ಆಯುಷ್ ಪಾರ್ಕ್ ನಿರ್ಮಾಣ ಮಾಡಲು ಆಸಕ್ತರ ಗುಂಪು ಮೂಲಕ, ಆರಂಭಿಕವಾಗಿ ಪಂಚವಟಿ ಗಿಡ ಹಾಕಿದ ನಿವಾಸಿಗಳಿಗೆ ಅಭಿನಂದನೆಗಳು.

ನಿವಾಸಿ ಶ್ರೀ ಸಿದ್ದಗಂಗಪ್ಪನವರು ಸಂಗ್ರಹಿಸಿದ ಡಾಟಾ ಪ್ರಕಾರ, ಕರ್ನಾಟಕ ರಾಜ್ಯದ 31 ಜಿಲ್ಲೆಗಳಲ್ಲಿ, 28 ಜಿಲ್ಲೆಗಳ ಜನರು ಪಿಜೆಸಿ ವಾಸವಾಗಿದ್ದಾರಂತೆ. ಈ ಎಲ್ಲಾ ಜಿಲ್ಲೆಗಳ ಕನಿಷ್ಟ ಒಬ್ಬರಂತೆ ಸುಮಾರು 31 ಜನರ ಆಯುಷ್ ಪಾರ್ಕ್ ವಿಷನ್ ಗ್ರೂಪ್ ರಚಿಸಿಕೊಂಡು, ಪಿಜೆಸಿ ಆವರಣದಲ್ಲಿನ ಬಯೋ ಡೈವರ್ಸಿಟಿ ಬಗ್ಗೆ ಒಂದು ವರದಿ ಸಿದ್ಧಪಡಿಸುವ ಇಂಗಿತವನ್ನು ನಿವಾಸಿ ಶ್ರೀ ವಿಶ್ವನಾಥ್ ರವರು ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಪಿಜೆಸಿಯಲ್ಲಿನ ಡಾಕ್ಟರ್‍ಗಳು ಪಿಜೆಸಿ ಎಮರ್ಜೆನ್ಸಿ ಗ್ರೂಪ್ ರಚಿಸಿಕೊಂಡು, ಮನೆ ಬಾಗಿಲಿಗೆ ಸೇವೆ ಸಲ್ಲಿಸುವ ಮೂಲಕ ಒಳ್ಳೆಯ ಕೆಲಸ ಆರಂಭಿಸಿದ್ದಾರೆ. ನಿವಾಸಿ ಶ್ರೀ ಶೇಖಪ್ಪನವರು ಪಿಜೆಸಿಯಲ್ಲಿನ ನಿವಾಸಿಗಳಲ್ಲಿ ಇರುವ ಆಯುಷ್ ಡಾಕ್ಟರ್‍ಗಳ ಡಾಟಾ ಸಂಗ್ರಹಿಸುವುದಾಗಿ ತಿಳಿಸಿದ್ದಾರೆ.

ನಿವಾಸಿ ಶ್ರೀ ರಾಜೇಶ್‍ರವರು ತಮ್ಮದೇ ಆದ ಒಂದು ಪರಿಕಲ್ಪನೆಯನ್ನು ಸಿದ್ಧಪಡಿಸುತ್ತಿದ್ದಾರೆ. ನಿವಾಸಿಗಳ ತಾತ್ಕಾಲಿಕ ಸಮಿತಿಯವರು ಈ ಬಗ್ಗೆ ನಿರ್ಣಯ ಕೈಗೊಂಡು, ಪಿಪಿಪಿಎಂಸ್ ರವರೊಂದಿಗೆ ಹಾಗೂ ಮಾಲೀಕರೊಂದಿಗೆ ಸಮಾಲೋಚನೆ ನಡೆಸಿದರೆ, ಮುಂದಿನ ಬೆಳವಣಿಗೆಗೆ ಅನೂಕೂಲವಾಗಬಹುದು ಎಂಬ ಅಭಿಪ್ರಾಯವನ್ನು ಶ್ರೀ ಸಿದ್ಧಲಿಂಗಪ್ಪನವರು ವ್ಯಕ್ತ ಪಡಿಸಿದ್ದಾರೆ. 

 ಪಂಚವಟಿ ಗಿಡ ಹಾಕಿದ ಎಲ್ಲಾ ಸದಸ್ಯರು ಗಂಭೀರವಾಗಿ ಯೋಚಿಸಿ ಒಂದು ಅಂತಿಮ ನಿರ್ಧಾರಕ್ಕೆ ಬರುವುದು ಸೂಕ್ತವಾಗಿದೆ. ವಿದ್ಯಾರ್ಥಿಗಳ ತಂಡ ಅಥವಾ ಮಹಿಳೆಯರ ತಂಡ ಮುಂದೆ ಬಂದಲ್ಲಿ ಒಳ್ಳೆಯದು. ತಾತ್ಕಾಲಿಕ ಸಮಿತಿಯ ಮೊದಲನೇ ಸಭೆಯಲ್ಲಿ ಮಹತ್ವದ ನಿರ್ಣಯವಾಗುವ ಆಶಾಭಾವನೆ ಇದೆ ಎಂದು  ಶ್ರೀ ಸಿದ್ಧಲಿಂಗಪ್ಪನವರು ವ್ಯಕ್ತ ಪಡಿಸಿದ್ದಾರೆ.