21st November 2024
Share

TUMAKURU:SHAKTHIPEETA FOUNDATION

ದಿನಾಂಕ:20.10.2022 ರಂದು ರಾತ್ರಿ 8.00 ಗಂಟೆಗೆ ಸಿಟಿ ಕ್ಲಬ್ ನ ರೀಡಿಂಗ್ ರೂಂನಲ್ಲಿ  ಪ್ರಿಸ್ಟೇಜ್ ಜಿಂದಾಲ್ ಸಿಟಿ(ಪಿಜೆಸಿ) ಯಲ್ಲಿನ ಪಿಜೆಸಿ ಟ್ರೀ ಪಾರ್ಕ್ ಗ್ರೂಪ್‍ನ ಪ್ರಥಮ ಸಭೆ ನಡೆಯಲಿದೆ.

ಪಿಜೆಸಿ ನಿವಾಸಿಗಳಾದ ಶ್ರೀ ರಾಜೇಶ್‍ರವರು, ಶ್ರೀ ವಿಶ್ವನಾಥ್‍ರವರು ಹಾಗೂ ಶ್ರೀ ಸಿದ್ಧಗಂಗಪ್ಪನವರೊಂದಿಗೆ ಸುಧೀರ್ಘವಾಗಿ ಸಮಾಲೋಚನೆ ನಡೆಸಿದ ನಂತರ ಒಂದು ವಿಷನ್ ಗ್ರೂಪ್ ರಚಿಸಿ, ಆಸಕ್ತರು ಗ್ರೂಪ್‍ನಲ್ಲಿ ಸೇರ್ಪಡೆ ಮಾಡಿಕೊಳ್ಳಲು ಮನವಿ ಮಾಡಲಾಗಿದೆ.

ಈಗಾಗಲೇ ಪಿಜೆಸಿಯಲ್ಲಿ ಪಂಚವಟಿ ಗಿಡಗಳನ್ನು ಹಾಕುವ ಮೂಲಕ ಆಯುಷ್ ಪಾರ್ಕ್‍ಗೆ ಚಾಲನೆ ನೀಡಲಾಗಿದೆ. ಬೆಂಗಳೂರು ಉತ್ತರ ತಾಲ್ಲೋಕು, ದಾಸನಪುರ ಹೋಬಳಿಯ, ಚಿಕ್ಕ ಬಿದರೆ ಕಲ್ಲು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪಿಜೆಸಿಯ ಆವರಣದಲ್ಲಿರುವ ಬಯೋಡೈವರ್ಸಿಟಿ ಬಗ್ಗೆ ಅಧ್ಯಯನ ಮಾಡುವುದು ಹಾಗೂ ಆಯುಷ್ ಪಾರ್ಕ್ ಅಥವಾ ಸರ್ಕಾರದ ಅಡಿಯಲ್ಲಿನ ಪವಿತ್ರವನ’ ನಿರ್ಮಾಣ ಮಾಡಲು ರೂಪುರೇಷೆ ನಿರ್ಧರಿಸಲಾಗುವುದು.

ಕೇಂದ್ರ ಸರ್ಕಾರ ದೇಶದ ಪ್ರತಿ ಗ್ರಾಮಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ರಚಿಸಿರುವ ಬಯೋಡೈವರ್ಸಿಟಿ ಮ್ಯಾನೇಜ್ಮೆಂಟ್ (ಬಿಎಂಸಿ) ಸಮಿತಿ’ ಮೂಲಕ ಕಾರ್ಯನಿರ್ವಹಿಸಲು ಚಿಂತನೆ ನಡೆಸಲಾಗಿದೆ.

ಬಹಳ ಜನ ಗ್ರೂಪ್‍ನಲ್ಲಿ ಸೇರ್ಪಡೆ ಆಗುತ್ತಿದ್ದಾರೆ. ಆಸಕ್ತರು ಸಭೆಯಲ್ಲಿ ಬಾಗವಹಿಸಿ ಸೂಕ್ತ ಸಲಹೆ ಸಹಕಾರ ನೀಡಲು ಮನವಿ ಮಾಡಲಾಗಿದೆ.