12th September 2024
Share

TUMAKURU:SHAKTHIPEETA FOUNDATION

ಕಳೆದ ಎರಡು ದಿವಸಗಳಿಂದ ಬೆಂಗಳೂರಿನ ಪ್ರಿಸ್ಟೇಜ್ ಜಿಂದಾಲ್ ಸಿಟಿಯಲ್ಲಿ ನಡೆದ ಮೂರು ಮಹತ್ವದ ಸಭೆಗಳಲ್ಲಿ ಬಾಗವಹಿಸಿದ್ದೆ. ಈ ಸಭೆಯಲ್ಲಿ ಇಲ್ಲಿನ ನಿವಾಸಿಗಳು ಸದ್ದುಗದ್ದಲವಿಲ್ಲದೆ, ಶುಭಾರಂಭ ಮಾಡಿರುವ ಪರಿಕಲ್ಪನೆ, ಕನಸು ನಿಜಕ್ಕೂ ಅದ್ಭುತ.

ಪಿಜೆಸಿಹಿರಿಯ ನಾಗರೀಕರ ಗ್ರೂಪ್: ಇಲ್ಲಿ ವಾಸ ಮಾಡುವ ಹಿರಿಯ ಚೇತನಗಳ, ಅನುಭವ, ಜ್ಞಾನಗಳನ್ನು ಡಿಜಿಟಲ್ ದಾಖಲೆ ಮಾಡುವುದು. ಹೈಟೆಕ್ ವೃದ್ಧಾಶ್ರಮದಂತೆ ಪಿಜೆಸಿಯಲ್ಲಿ ವಾಸ ಮಾಡುತ್ತಿರುವ ಹಿರಿಯ ಚೇತನಗಳ ‘ಪ್ರಭುದ್ಧರ ಚಿಂತನಾ ಕೇಂದ್ರದಂತೆ’ ಪರಿವರ್ತನೆ ಮಾಡಿ, ಅವರ ಅನುಭವಗಳೊಂದಿಗೆ ದೇಶದ ಅಭಿವೃದ್ಧಿಗೆ ವೈಶಿಷ್ಠವಾದ ಕೊಡುಗೆ ನೀಡುವುದು.

ಅವರ ಮನಸ್ಸಿಗೆ ನೆಮ್ಮದಿ ತರುವಂತ ಕಾರ್ಯಕ್ರಮಗಳ ಆಯೋಜನೆ, ಜೀವನದ ಎಲ್ಲಾ ಕಹಿಘಟನೆಗಳನ್ನು ಮರೆಯುವಂತ ಸನ್ನಿವೇಶ ಸೃಷ್ಟಿಸುª ಬಗ್ಗೆ ಚರ್ಚೆಗಳು ನಡೆಯಲು ಆರಂಭಿಸಿವೆ.

ಪಿಜೆಸಿಲೈಬ್ರರಿ ಗ್ರೂಪ್: ಆಗ ತಾನೆ ಜನಿಸಿದ ಮಗುವಿನಿಂದ ಆರಂಭಿಸಿ, ಹಿರಿಯ ನಾಗರೀಕರ ವರೆಗಿನ ಪ್ರತಿಯೊಬ್ಬರ, ಬ್ರಹ್ಮ ಸೃಷ್ಠಿಸಿದ ಕಂಪ್ಯೂಟರ್(ತಲೆ-ಮೆದುಳು) ನಲ್ಲಿರುವ, ಪ್ರತಿಯೊಂದು ಅಂಶಗಳನ್ನು ಡಿಜಿಟಲ್ ದಾಖಲೆ ಮಾಡುವ ಮಾನವ ಗ್ರಂಥಾಲಯಡಿಜಿಟಲ್ ಗ್ರಂಥಾಲಯ, ಗ್ರಂಥಾಲಯ ಗಳ ಸ್ಥಾಪನೆ.

ದೇಶದ, ರಾಜ್ಯದ, ಜಿಲ್ಲೆಯ, ತಾಲ್ಲೋಕಿನ, ವಿಧಾನಸಭಾ ಕ್ಷೇತ್ರದ, ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಹಾಗೂ ಹುಟ್ಟೂರಿನ ಸಮಗ್ರ ಅಭಿವೃದ್ಧಿ ಪರಿಕಲ್ಪನೆಗಳು, ಕನಸುಗಳು, ಮಾಹಿತಿ ಸಂಗ್ರಹ.

ಇಲ್ಲಿ ವಾಸ ಮಾಡುವ 3571 ಪ್ಲಾಟ್‍ಗಳ ಮಾಲೀಕರ, ಬಾಡಿಗೆ ದಾರರ, ಸಂಭಂದಿ ಜ್ಞಾನಿಗಳ, ಸ್ನೇಹಿತ ಪರಿಣಿತರ ಸಲಹೆಗಳೊಂದಿಗೆ, ಪ್ರತಿಯೊಬ್ಬ ನಿವಾಸಿಗಳ ದೇಶದ, ರಾಜ್ಯದ, ಜಿಲ್ಲೆಯ ಕಲೆ, ಸಂಸೃತಿ, ಧರ್ಮ,ಅಭಿವೃದ್ಧಿ, ಮೌಢ್ಯತೆ, ಹೀಗೆ ವೈವಿಧ್ಯತೆ ಜನ ಜಾಗೃತಿ ಕಾರ್ಯಕ್ರಮಗಳ ಡಿಜಿಟಲ್ ದಾಖಲೆ.

ಪಿಜೆಸಿಟ್ರೀ ಗ್ರೂಪ್ : ಪಿಜೆಸಿಯಲ್ಲಿನ ಜೀವವೈವಿಧ್ಯತೆ ಬಗ್ಗೆ ಅಧ್ಯಯನ, ಅಗತ್ಯವಿರುವ ಗಿಡಗಳನ್ನು ಬೆಳೆಯುವುದು, ಪ್ರತಿಯೊಂದು ಔಷಧಿಗಿಡಗಳ ಮಹತ್ವದ ಪರಿಚಯ, ವೈಜ್ಞಾನಿಕ ಬಳಕೆ, ಇಲ್ಲಿನ ಗಾಳಿ, ನೀರು, ಬೆಳಕು, ಘನತ್ಯಾಜ್ಯ ವಸ್ತುಗಳ ಬಗ್ಗೆ ಮಾನಿಟರಿಂಗ್, ವಿವಿಧ ಜಾತಿಯ ಜೀವಿಗಳ ಡಿಜಿಟಲ್ ದಾಖಲೆ,  ಪುಟಾಣಿಗಳಿಗೆ ಪ್ರತಿಯೊಂದು ಗಿಡದ ಪರಿಚಯ.

ಪ್ರತಿಯೊಂದು ಗ್ರೂಪ್‍ಗಳಲ್ಲೂ ಸಂಚಾಲಕರ ಸಮಿತಿ ರಚಿಸಿ, ಪ್ರತಿಯೊಂದು ಯೋಜನೆಗಳ ರೂಪುರೇಷೆ ನಿರ್ಧರಿಸಿ, ಪಿಜೆಸಿ ಅಡ್‍ಹಾಕ್ ಸಮಿತಿ, ಮುಂದೆ ರಚಿಸುವ ಅಸೋಶಿಯೇಷನ್, ಪಿಜೆಸಿ ಮಾಲೀಕರ, ಸರ್ಕಾರಗಳ ಸಹಭಾಗಿತ್ವದಲ್ಲಿ ಯಶಸ್ವಿಯಾಗಿ, ನಿರಂತರವಾಗಿ ಕಾರ್ಯಕ್ರಮ ರೂಪಿಸಲು ಭರದ ಸಿದ್ಧತೆ ಆರಂಭವಾಗಿದೆ.

  ಬಗ್ಗೆ ವಿಶೇಷ ಗಮನ ಹರಿಸಿರುವ ನಿವಾಸಿಗಳಿಗೆ ಅಭಿನಂದನೆ ಸಲ್ಲಿಸಲೇ ಬೇಕು. ಶ್ರಮಿಸುತ್ತಿರುವ ಜ್ಞಾನಿಗಳಿಗೆ ಶಕ್ತಿದೇವತೆ ಒಳ್ಳೆಯ ಚೈತನ್ಯ ನೀಡಲು ಪ್ರಾರ್ಥನೆ.