21st December 2024
Share

TUMAKURU:SHAKTHIPEETA FOUNDATION

ತಿಪಟೂರು ತಾಲ್ಲೂಕು, ಕಾರೇಕುರ್ಚಿ ಗ್ರಾಮವನ್ನು ಗುಬ್ಬಿ ತಾಲ್ಲೂಕಿಗೆ ಸ್ಥಳಾಂತರ ಮಾಡಿ ಸುಮಾರು 40-50 ವರ್ಷಗಳು ಆಗಿದೆಯಂತೆ. ಇದೂವರೆಗೂ ರೈತರ ಬದಲಿ ಜಮೀನಿಗೆ ಪೋಡು ಮಾಡಿಕೊಡಲು ಗುಬ್ಬಿ ತಾಲ್ಲೋಕು ಆಡಳಿತಕ್ಕೆ ಸಾಧ್ಯಾವಾಗಿಲ್ಲ ಇದೊಂದು ನಾಚಿಕೆಗೇಡು. ಈಗಾಲಾದರೂ ಪೋಡು ಮಾಡಿಕೊಟ್ಟರೆ ಗ್ರಾಮದ ಜನ ನೆಮ್ಮದಿಯಿಂದ ಇರುತ್ತಾರೆ.

ಈಗ ಶ್ರೀ ಗುರುಸಿದ್ಧರಾಮೇಶ್ವರ ತಪೋವನಕ್ಕೆ ತಿಪಟೂರು ತಾಲ್ಲೂಕಿನಲ್ಲಿ ಸುಮಾರು 9 ಎಕರೆಗಿಂತಲೂ ಜಾಸ್ತಿ ಜಮೀನು ನಿಗದಿ ಮಾಡಿದ್ದಾರಂತೆ. ಈ ಗ್ರಾಮದ ಸುಮಾರು 20—30 ಎಕರೆ ಜಮೀನು ನಿಗದಿ ಪಡಿಸಿ, ದೇವಾಲಯದ ಸಮಿತಿಯವರು ಸಿದ್ಧರಾಮೇಶ್ವರರ ಮ್ಯೂಸಿಯಂ ಮಾಡಲಿ ಎಂಬುದು ಗ್ರಾಮದ ಯುವಕರ ಕನಸು.

ಇದಕ್ಕೆ ಸ್ಪಂಧಿಸಿದ್ದಾರೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು. ಗ್ರಾಮದ ಯುವಕರ ತಂಡ ನಿರಂತರವಾಗಿ ಕಡತದ ಅನುಸರಣೆ ಮಾಡುತ್ತಿದ್ದಾರೆ. ಶಕ್ತಿಪೀಠ ಫೌಂಡೇಷನ್ ಬೆನ್ನುಲುಬಾಗಿ ನಿಂತು ಸಹಕರಿಸಲಿದೆ.

ಇದೊಂದು ಸುಂದರ ಪ್ರವಾಸಿ ಕೇಂದ್ರವೂ ಹೌದು. ಶ್ರೀ ಗುರುಸಿದ್ಧರಾಮೇಶ್ವರರು 12 ವರ್ಷ ತಳಕೆಳಕಾಗಿ ನಿಂತು, ಉಗ್ರ ತಪಸ್ಸು ಮಾಡಿದ ಸ್ಥಳವೂ ಹೌದು, ರಾಜ್ಯದ ಜನ ಗಂಗಮ್ಮನ ಪೂಜೆ ಮಾಡುವ ಪವಿತ್ರ ಸ್ಥಳವೂ ಹೌದು.

ಒಂದು ಸುಂದರ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲು ಯುವಕರು ಎದ್ದೇಳಬೇಕು ಅಷ್ಟೆ.