12th October 2024
Share

TUMAKURU:SHAKTHIPEETA FOUNDATION

ಪಿಜೆಸಿ ಯೂಟ್ಯೂಬ್, ಮಾನವ ಗ್ರಂಥಾಲಯ, ಗ್ರಂಥಾಲಯ ಮತ್ತು ಡಿಜಿಟಲ್ ಗ್ರಂಥಾಲಯದ ಬಗ್ಗೆ ಇಂದು 25.10.2022 ನೇ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಪಿಜೆಸಿ ರೀಡಿಂಗ್ ರೂಂನಲ್ಲಿ ರೂಪುರೇಷೆ ನಿರ್ಧರಿಸಲು ವಿಷನ್ ಗ್ರೂಪ್ ಸದಸ್ಯರ ಸಭೆ ನಡೆಯಲಿದೆ.

ಹಿಂದಿನ ಸಭೆ ನಡವಳಿಕೆಗಳ ಆಧಾರದ ಮೇಲೆ ಪಿಜೆಸಿ ನಿವಾಸಿ ಆರ್ಕಿಟೆಕ್ಚರ್ ತುಮಕೂರು ಜಿಲ್ಲೆಯ ಶ್ರೀ ನಾರಾಯಣಗೌಡರು, ಶಿವಮೊಗ್ಗ ಜಿಲ್ಲೆಯ ಶ್ರೀ ತಿಮ್ಮಣ್ಣನವರು, ತುಮಕೂರು ಜಿಲ್ಲೆಯ ಶ್ರೀ ಸಿದ್ದಲಿಂಗಪ್ಪನವರು, ಹುಬ್ಬಳ್ಳಿ-ಧಾರವಾಡ ಜಿಲ್ಲೆಯ ಶ್ರೀ ಕುಲಕರ್ಣಿರವರು ಅವರವರ ಹೊಣೆಗಾರಿಕೆ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ.

ಮೇಲ್ಕಂಡ ವಿಚಾರದಲ್ಲಿ ಜ್ಞಾನವುಳ್ಳ ಪ್ರಭುದ್ಧರು ಹಾಗೂ ಆಸಕ್ತರು ಬಾಗವಹಿಸಬಹುದು.