21st November 2024
Share

TUMAKURU:SHAKTHIPEETA FOUNDATION

 ನಾನು ಒಂದು ಹಳ್ಳಿಯಲ್ಲಿ ಹುಟ್ಟಿ ಬೆಳೆದವನು, ತುಮಕೂರು ಜಿಲ್ಲಾ ಕೇಂದ್ರದಲ್ಲಿ ಹಲವಾರು ವರ್ಷಗಳ ಕಾಲ ಕಾಳೆದವನು. 8 ತಿಂಗಳ ಕಾಲ ಒಂದು ಪ್ರಾಜೆಕ್ಟ್ ಪರವಾಗಿ ಕೆಲಸ ಮಾಡಲು, ಬೆಂಗಳೂರಿನ ಪ್ರಿಸ್ಟೇಜ್ ಜಿಂದಾಲ್ ಸಿಟಿಯಲ್ಲಿ ವಾಸ ಮಾಡಬೇಕು ಎಂದು ಬಂದವನು.

ಪಿಜೆಸಿ ನಿವಾಸಿಗಳ ಹಲವಾರು ಸೇವೆಗಳ ಬಗ್ಗೆ ಗಮನ ಹರಿಸುತ್ತಿದ್ದೇನೆ. ಇಲ್ಲಿನ ಜನ ಸೇವಾ ಮನೋಭಾವವುಳ್ಳವರಾಗಿದ್ದಾರೆ. ಇದೊಂದು ಹೈಟೆಕ್ ವೃದ್ಧಾಶ್ರಮದಂತೆ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಹೈಟೆಕ್ ಪ್ರಭುದ್ಧಾಶ್ರಮ ಎನ್ನುತ್ತಾರೆ. ಇನ್ನೂ ಕೆಲವರು ಇದೊಂದು ಉಲ್ಲಾಸ ಆಶ್ರಮವಾಗ ಬೇಕು ಎನ್ನುತ್ತಾರೆ.

ಮಾನವ ಗ್ರಂಥಾಲಯ ಆರಂಭಿಸಿ, ಪ್ರತಿಯೊಬ್ಬರ ಜ್ಞಾನವುಳ್ಳ ಡೈರಕ್ಟರಿ ಸಂಗ್ರಹ ಮಾಡಬೇಕು, ಅವರ ಪರಿಣಿತಿಯನ್ನು ಸಮಾಜದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎನ್ನುತ್ತಾರೆ ಇನ್ನೂ ಕೆಲವರು. ನಾನಂತು ಬಹಳ ಜನರ ಮನೋಭಾವನೆಗಳನ್ನು ಒನ್–ಟು–ಒನ್ ಅರಿಯಬೇಕೆಂಬ ಹಂಬಲದಿಂದ ಮೌನವಾಗಿ ಎಲ್ಲವನ್ನು ಗಮನಿಸುತ್ತಿದ್ದೇನೆ.

ನನಗೆ ಆದ ಸ್ವಂತ ಅನುಭವದ ಬಗ್ಗೆ ಬರೇಯಲೇ ಬೇಕೆನಿಸಿತು. ಮೊನ್ನೆ ಬೆಳಿಗ್ಗೆ ನನ್ನ ಧರ್ಮಪತ್ನಿ ಶ್ರೀಮತಿ ಬಿ.ಸುಜಾತಕುಮಾರಿ ರವರು, ತಲೆ ಸುತ್ತಿ ಬಾತ್ ರೂಂನಲ್ಲಿ ಬಿದ್ದಾಗ, ಬೆಳಿಗ್ಗೆ 6 ಗಂಟೆ. ಪಕ್ಕದ ಮನೆಯ ಡಾ.ಕಲ್ಲೇಶ್ ರವರು ಮತ್ತು ಅವರ ಧರ್ಮ ಪತ್ನಿ ಶ್ರೀಮತಿ ಚೈತ್ರವರನ್ನು ಕರೆದೆ.

ಅವರು ಬಂದ ತಕ್ಷಣ ಬಾತ್ ರೂಂನಿಂದ, ಹೊರಗಡೆ ಶಿಪ್ಟ್ ಮಾಡಿ ಸಕ್ಕರೆ ನೀರು ಕುಡಿಯಲು ಕೊಟ್ಟಾಗ ಮಾತನಾಡಿದರು. ತಕ್ಷಣ ಶ್ರೀ ಶೇಖಪ್ಪನವರು, ಶ್ರೀ ವಿನಯ್ ರವರು ಬಾಗಿಲ ಬಳಿ ಬಂದು ಬನ್ನಿ ಸಾರ್ ಆಸ್ಪತ್ರೆಗೆ ಹೋಗೋಣ ನಮ್ಮ ಕಾರು ಇದೆ ಅಥವಾ ನಿಮ್ಮ ಕಾರನ್ನು ನಾನು ಓಡಿಸುತ್ತೇನೆ ಎಂದಾಗ ನನಗೆ ಆಶ್ಚರ್ಯವಾಯಿತು.

ಸರಿ ನನ್ನ ಕಾರಿನ ಕೀ ಕೊಟ್ಟು ಪಾರ್ಕಿಂಗ್ ಮಾಹಿತಿ ಹೇಳುವ ವೇಳೆಗೆ, ಸೆಕ್ಯುರಿಟಿಯವರು ವೀಲ್ ಚೇರ್ ತಂದು ಮನೆ ಮುಂದೆ ನಿಲ್ಲಿಸಿದರು. ಪ್ರಕ್ರಿಯ ಆಸ್ಪತ್ರೆಗೆ ಸೇರಿಸಿ ಅವರಿಬ್ಬರು ಹೊರಟ ನಂತರ  ಶ್ರೀ ನಾಗರಾಜುರವರು ಮತ್ತು ಶ್ರೀ ವಿಶ್ವನಾಥ್ ರವರು ಹಾಜರಾಗಿದ್ದರು, ಎಲ್ಲಾ ಟೆಸ್ಟ್ ಮಾಡಿಸಿ ಹೊರಡುªವರಿಗೂÀ ಕಾದು ಹೊರಗಡೆ ನಿಂತಿದ್ದರು.

ಜೊತೆಗೆ ದಾರಿಯಲ್ಲಿ ಅಡ್ಡಹಾಕಿ ಹೋಟೆಲ್ ಬಳಿ ನಿಲ್ಲಿಸಿ, ತಿಂಡಿ ತಿನ್ನಿಸಿ, ಮನೆಗೆ ಕಳುಹಿಸಿದವರು ಶ್ರೀ ನಾಗರಾಜ್‍ರವರು, ನೋಡಿ ಇಷ್ಟೆಲ್ಲಾ ಆಗಿದ್ದು, ಪಿಜೆಸಿ ಎಮರ್ಜೆನ್ಸಿ ಗ್ರೂಪ್ ತಂಡ ರಚಿಸಿಕೊಂಡಿದ್ದರಿಂದ. ಹಳ್ಳಿಯಲ್ಲಿನ ಜನರು ಈ ರೀತಿ ಸಹಕಾರ ನೀಡುವುದು ವಾಡಿಕೆ. ಆದರೇ ಬೆಂಗಳೂರಿನಂತ ನಗರದಲ್ಲೂ, ಈ ರೀತಿ ಜನ ಇದ್ದರಲ್ಲಾ ಎಂದು ಅನಿಸಿತು.

ಮಾನವೀಯತೆ ಮೆರೆದ ಪಿಜೆಸಿ ನಿವಾಸಿಗಳ ಹೃದಯ ಶ್ರೀಮÀಂತರಿಗೆ ಬಹಿರಂಗವಾಗಿ ಅಭಿನಂದನೆ ಸಲ್ಲಿಸುವುದರ ಜೊತೆಗೆ, ಅವರ ಸೇವೆಗೆ ತಕ್ಕಂತೆ, 3571 ಪ್ಲಾಟ್ ಗಳು ಇರುವ ಪಿಜೆಸಿ ಆವರಣದಲ್ಲಿ, ಅಸ್ಪತ್ರೆ, ಮೆಡಿಕಲ್ ಸ್ಟೋರ್, ಆಂಬುಲೆನ್ಸ್, ಒಂದು ಉಪಹಾರ ಮಂದಿರ ಇರಲೇ ಬೇಕು ಎಂಬ ಬೇಡಿಕೆ ಹಲವರದ್ದಾಗಿದೆ.  ಈ ಬಗ್ಗೆ ತಲೆಕಡಿಸಿಕೊಳ್ಳ ಬೇಕಾಗಿದೆ.

ಪ್ರತಿ ದಿವಸವೂ ಈ ರೀತಿ ಸೇವೆ ಮಾಡುವುವರನ್ನು ಗಮನಿಸುತ್ತಿದ್ದೇನೆ. ಹಲವಾರು ವಿಭಾಗಗಳಲ್ಲಿ ಹಲವಾರು ಜನ ಶ್ರಮಿಸುತ್ತಿದ್ದಾರೆ. ಇಂತಹ ಸೇವಾ ಮನೋಭಾವವುಳ್ಳವರಿಗೆ ಪುರಸ್ಕಾರ ನೀಡುವ ಬಗ್ಗೆಯೂ ಚರ್ಚೆ ಆರಂಭವಾಗಿದೆ.