22nd December 2024
Share

TUMAKURU:SHAKTHIPEETA FOUNDATION

ತುಮಕೂರನ್ನು ಬಿಟ್ಟು ಪ್ರಿಸ್ಟೇಜ್ ಜಿಂದಾಲ್ ಸಿಟಿ (ಪಿಜೆಸಿ) ಗೆ ನಾನೇಕೆ ಬಂದೆ? ಎಂದು ಕೆಲವರಿಗೆ ಆಶ್ಚರ್ಯವಾಗಿರಬಹುದು. ನಮ್ಮ ಸಾಂಸ್ಕøತಿಕ ರಾಯಭಾರಿ ನಿವೃತ್ತ ಐ.ಎ.ಎಸ್ ಅಧಿಕಾರಿ ಹಾಗೂ ನನ್ನ ಆತ್ಮೀಯರೂ ಆದ ಶ್ರೀ ಡಾ.ಸಿ.ಸೋಮಶೇಖರ್ ರವರು,   ನಮ್ಮ ಪಿಜೆಸಿಯವರು ಕನ್ನಡ ರಾಜ್ಯೋತ್ಸವಕ್ಕೆ ಆಹ್ವಾನ ನೀಡಲು ಭೇಟಿ ನೀಡಿದ್ದ ತಂಡದೊಂದಿಗೆ, ಈ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದರಂತೆ. ತುಮಕೂರಿನವರೇ ಆದ ಶ್ರೀ ಸುರೇಶ್ ರವರು ಈ ವಿಷಯಹಂಚಿಕೊಂಡರು,

ತುಮಕೂರು ನಗರದಲ್ಲಿ ಶಕ್ತಿಪೀಠ ಮ್ಯೂಸಿಯಂ ನಿರ್ಮಾಣಕ್ಕಾಗಿ ಶಕ್ತಿಭವನ’ ನಿರ್ಮಾಣ ಮಾಡಲು, ನಾನು ಇದೂವರೆಗೂ ಇದ್ದ ಕಚೇರಿ ಕಟ್ಟಡವನ್ನು ಕೆಡವಿ ಹಾಕಲಾಗಿದೆ. ಕಟ್ಟಡ ನಿರ್ಮಾಣ ಆಗುವವರೆಗೂ ನಾನು ಪಿಜೆಸಿಯಲ್ಲಿನ ಶಕ್ತಿಪೀಠ ಗೆಸ್ಟ್ ಹೌಸ್’ ನಲ್ಲಿದ್ದು ಕೊಂಡು, ಇಲ್ಲಿ ವಾಸ ಮಾಡುತ್ತಿರುವ ಅಥವಾ ಅವರಿಗೆ ಗೊತ್ತಿರುವ, ನಮ್ಮ ರಾಜ್ಯದ ವಿವಿಧ ಜಿಲ್ಲೆಗಳ ಜನರ, ನಮ್ಮ ದೇಶದ ವಿವಿಧ ರಾಜ್ಯಗಳ ಜನರ ಮತ್ತು ವಿವಿಧ ದೇಶಗಳ ಜನರೊಂದಿಗೆ ಹಾಗೂ ವಿವಿಧ ವಿಷಯವಾರು ತಜ್ನರೊಂದಿಗೆ ಹಲವಾರು ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸುವುದೇ ನನ್ನ ಪ್ರಮುಖ ಗುರಿಯಾಗಿದೆ,

ವಿಶ್ವದ 108 ಶಕ್ತಿಪೀಠಗಳ ಖಚಿತ ಮಾಹಿತಿ, ದೇಶದ 101 ನದಿ ಪಾತ್ರಗಳ/ಎಲ್ಲಾ ನೀರಾವರಿ ನದಿ ಪಾತ್ರಗಳ ಸಂಪರ್ಕದ ಮಾಹಿತಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರತಿಯೊಂದು ಇಲಾಖೆಗಳ ಪರಿಣಿತರ ಸಂಪರ್ಕ ಹಾಗೂ ರಾಜ್ಯದಲ್ಲಿನ ಎಲ್ಲಾ ಮಾಜಿ ಮುಖ್ಯಮಂತ್ರಿಗಳು ಮತ್ತು ದೇಶದಲ್ಲಿನ ಎಲ್ಲಾ ಮಾಜಿ ಪ್ರಧಾನಿಯವರ ಕಾಲದ ಯೋಜನೆಗಳ ಮಾಹಿತಿ ಸಂಗ್ರಹ ಪ್ರಮುಖವಾಗಿದೆ.

ಮಾನವ ಗ್ರಂಥಾಲಯದ ಮೂಲಕ ಒನ್-ಟು-ಒನ್ ಚರ್ಚೆ, ಡಿಜಿಟಲ್ ಗ್ರಂಥಾಲಯ, ಗ್ರಂಥಾಲಯ, ಪಿಜೆಸಿಯ ಬಯೋಡೈವರ್ಸಿಟಿ ಸಂಶೋಧನೆ ಹಾಗೂ ಪಿಜೆಸಿ ರೀಡಿಂಗ್ ರೂಂ/ಗ್ರಂಥಾಲಯದಲ್ಲಿ  ವಿಶೇóಷ ಮಾಹಿತಿಗಳ ಸಂಗ್ರಹ ನನ್ನ ಗುರಿಯಾಗಿದೆ.

ಇದೆಲ್ಲಾ ಚಿತ್ರದುರ್ಗದ ಹಿರಿಯೂರು ತಾಲ್ಲೋಕು, ಬಗ್ಗನಡುವಿನಲ್ಲಿ ನಿರ್ಮಾಣ ಮಾಡಲು ಉದ್ದೇಶಿರುವ 12 ಎಕರೆ 15 ಗುಂಟೆಯಲ್ಲಿನ ಶಕ್ತಿಪೀಠ ಕ್ಯಾಂಪಸ್, ತುಮಕೂರು ಸ್ಮಾರ್ಟ್ ಸಿಟಿಯಲ್ಲಿನ ಶಕ್ತಿಭವನದ, ನನ್ನ ಹುಟ್ಟೂರು ಗುಬ್ಬಿ ತಾಲ್ಲೋಕಿನ ಕುಂದರನಹಳ್ಳಿಯಲ್ಲಿನ ಸ್ಥಾಪಿಸುವ ಪ್ರಧಾನ ಮಂತ್ರಿಗಳ ಹಾಗೂ ಮುಖ್ಯ ಮಂತ್ರಿಗಳ ಯೋಜನೆಗಳ ಮ್ಯೂಸಿಯಂ, ತುಮಕೂರು ಜಿಲ್ಲೆಯ ವಸಂತನರಸಾಪುರದ ಇಂಡಸ್ಟ್ರಿಯಲ್ ಕಾರಿಡಾರ್/ನಿಮ್ಜ್ ನಲ್ಲಿನ ಡಾಟಾ ಪಾರ್ಕ್, ರಾಜ್ಯದ್ಯಾಂತ ಸ್ಥಾಪಿಸಲು ಉದ್ದೇಶಿರುವ ಸುಮಾರು 500 ಸಂಶೋಧನೆ ಕೇಂದ್ರಗಳ/   ಯೋಜನೆಗಳಿಗೆ ಪೂರಕವಾಗಿ ನಡೆಯುತ್ತಿರುವ ಸಂಶೋಧನೆಯಾಗಿದೆ.

ಯಾವುದೇ ಒಂದು ವಿಶಿಷ್ಠವಾದ ಯೋಜನೆಯ ಸಾಧಕ-ಭಾದಕಗಳ ಬಗ್ಗೆ, ನಮ್ಮ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರ ಜೈ ಅನುಸಂಧಾನ್ ಘೋಷಣೆಯಂತೆ ನಮ್ಮ ನವ ಕರ್ನಾಟಕದ 2047 ರ ವಿಷನ್ ಡಾಕ್ಯುಮೆಂಟ್, ಜೊತೆಗೆ ಕೇಂದ್ರ ಸರ್ಕಾರದಿಂದ ನಮ್ಮ ರಾಜ್ಯ ಅತಿ ಹೆಚ್ಚಿನ ಅನುದಾನ ಪಡೆಯಲು ಸ್ಟ್ರಾಟಜಿ, ರಾಜ್ಯದ ಪ್ರತಿಯೊಂದು ಹನಿ ನೀರಿನ ಮಾಹಿತಿಯುಳ್ಳ, ಜಲಗ್ರಂಥ ಇವೆಲ್ಲಾ ಬಾಯಿ ಮಾತಿನ ಕೆಲಸವಲ್ಲ. ಸಾಕಷ್ಟು ಪರಿಶ್ರಮ ಹಾಕಲೇ ಬೇಕಿದೆ.

ಈ ಎಲ್ಲಾ ಪರಿಕಲ್ಪನೆಗಳಿಗೆ/ಯೋಜನೆಗೆ ರಾಜ್ಯ ಸರ್ಕಾರದ ಪ್ರತಿಯೊಂದು ಇಲಾಖೆಯ ಸಿಬ್ಬಂಧಿ ಮತ್ತು ಕೇಂದ್ರ ಸರ್ಕಾರದ ಪ್ರತಿಯೊಂದು ಇಲಾಖೆಯ ಸಿಬ್ಬಂದಿ, ವಿಷಯವಾರು ಪರಿಣಿತರ ಸಂಪರ್ಕ ಮಹತ್ತರವಾದ ಘಟ್ಟÀವಾಗಿದೆ. ಅವರ ಮೂಲಕವೇ ಎಲ್ಲಾ ಜಾರಿಯಾಗಬೇಕಿದೆ. ಈ ಹಿನ್ನಲೆಯಲ್ಲಿ ಪಿಜೆಸಿಯ ವಾಸದ ಅವಧಿ, ನನ್ನ ಜೀವನದ ಪ್ರಮುಖ ಅವಧಿ ಆಗಬಹುದು ಎಂಬ ಕನಸು ನನಗಿದೆ.

ಮೌನವಾಗಿ ನನ್ನ ಕೆಲಸ ಆರಂಭವಾಗಿದೆ. ಪಿಜೆಸಿಯ ನಿವಾಸಿಗಳು ಸಹ ಬಹಳ ಚೆನ್ನಾಗಿ ಸ್ಪಂಧಿಸುತ್ತಿದ್ದಾರೆ. ರಾಜ್ಯದ 28 ಜಿಲ್ಲೆಗಳ ಜನರು ಈಗಾಗಲೇ ದೊರಕಿದ್ದಾರೆ, ಅವರೆಲ್ಲರ ಜೊತೆ ಸಮಾಲೋಚನೆಯೇ ನನ್ನ ಮೊದಲ ಆಧ್ಯತೆ. ಈಗಾಗಲೇ ಹಲವಾರು ರಾಜ್ಯಗಳ ಜನರೊಂದಿಗೆ ಸಂಪರ್ಕ ಮಾಡಲಾಗಿದೆ.

ಆಸಕ್ತರು ಕೈ ಜೋಡಿಸ ಬಹುದು.