22nd December 2024
Share

TUMAKURU:SHAKTHI PEETA FOUNDATION

ತುಮಕೂರು ಸ್ಮಾರ್ಟ್ ಸಿಟಿ  ವತಿಯಿಂದ  ತುಮಕೂರಿನಲ್ಲಿ ತುಮಕೂರು ಸ್ಮಾರ್ಟ್ ಸಿಟಿ ಮುಂದೇನು. ಎಂಬ ಹೆಸರಿನ ಮೌಲ್ಯಮಾಪನ ಕೇಂದ್ರವನ್ನು ಸ್ಥಾಪಿಸಲು, ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರ ಸಲಹೆ ಮೇರೆಗೆ ಎಂ.ಡಿ ಯವರಾದ ಶ್ರೀ ರಂಗಸ್ವಾಮಿಯವರೊಂದಿಗೆ ಸಮಾಲೋಚನೆ ನಡೆಸಲಾಗಿದೆ.

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಮಹಾಪೋಷಕತ್ವದಲ್ಲಿ 1999 ರಿಂದ ತುಮಕೂರು ನಗರ ಯಾವ ರೀತಿ ಸಮಗ್ರ ಅಭಿವೃದ್ಧಿ ಹೊಂದ ಬೇಕು, ಎಂಬ ಬಗ್ಗೆ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ರಚಿಸಿಕೊಂಡು. ನಗರದ ಸಾವಿರಾರು ಪರಿಣಿತ ತಜ್ಞರ ನೇತೃತ್ವದಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ.

ಪ್ರಸ್ತುತ ಮುಂದಿನ 2047 ಕ್ಕೆ ತುಮಕೂರು ನಗರ ಹೇಗಿರಬೇಕು, ಎಂಬ ಬಗ್ಗೆ  ಪ್ರಜಾಪ್ರಭುತ್ವದ ಅಡಿಯಲ್ಲಿ ಕೆಳಕಂಡ ಹೆಸರಿನಲ್ಲಿ ಒಂದು ಮೌಲ್ಯಮಾಪನ ಕೇಂದ್ರ  ಅಥವಾ ತುಮಕೂರು ನಗರ ವಿಧಾನಸಭಾ ಕೇತ್ರ ಅಧ್ಯಯನ ಪೀಠ ಆರಂಭಿಸಲು ಶಕ್ತಿಪೀಠ ಫೌಂಡೇಷನ್ ಮಹತ್ವದ ನಿರ್ಧಾರ ಕೈಗೊಂಡಿದೆ.

ಅಭಿವೃದ್ಧಿ ರೆವೂಲ್ಯೂಷನ್ ಫೋರಂ ನ 25 ನೇ ವರ್ಷದ ವೇಳೆಗೆ, ತುಮಕೂರು ನಗರದ ಪರಿಣಿತರ ಹಾಗೂ ನಗರದ ಎಲ್ಲಾ ವಿಧವಾದ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ, ನಗರದ ಹಾಲಿ ಮತ್ತು ಮಾಜಿ ಶಾಸಕರ, ಸಂಸದರ ಮಹಾ ಪೋಷಕತ್ವದಲ್ಲಿ  ಪ್ರಾರಂಭಿಸಲಾಗುವುದು.

ಸಂಸದರಾದ ಶ್ರೀ ಜಿ.ಎಸ್.ಬಸವರಾಜ್ ರವರು, ಮಾಜಿ ಸಂಸದರಾದ ಶ್ರೀ ಎಸ್.ಪಿ.ಮುದ್ದು ಹನುಮೇಗೌಡರವರು, ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‍ರವರು ಮಾಜಿ ಶಾಸಕರುಗಳಾದ ಶ್ರೀ ಸೊಗಡು ಶಿವಣ್ಣನವರು, ಶ್ರೀ ಷಫಿಅಹಮ್ಮದ್‍ರವರು, ಶ್ರೀ ರಫೀಕ್ ಅಹಮ್ಮದ್ ರವರೊಂದಿಗೂ ಈ ಬಗ್ಗೆ ಚರ್ಚೆ ನಡೆಸಲಾಗುವುದು.

ಹಾಗೇಯೇ ಪಕ್ಷಾತೀತವಾಗಿ ತುಮಕೂರು ನಗರ ವ್ಯಾಪ್ತಿಯ ಎಲ್ಲಾ ರಾಜಕೀಯ ಪಕ್ಷಗಳ ಅಧ್ಯಕ್ಷರುಗಳು, ತುಮಕೂರು ನಗರಸಭೆ, ತುಮಕೂರು ಮಹಾನಗರ ಪಾಲಿಕೆ, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಹಾಲಿ ಮತ್ತು ಮಾಜಿ ಅಧ್ಯಕ್ಷರು/ಮೇಯರ್ ರವರೊಂದಿಗೂ ಸಮಾಲೋಚನೆ ನಡೆಸಲಾಗುವದು.

ತುಮಕೂರು ನಗರದ ಯಾವುದಾದರೂ ಒಂದು ಉದ್ಯಾನವನನ್ನು ದತ್ತು ಪಡೆದು, ಅಲ್ಲಿಯೇ ಎಕೋ ಪ್ರೆಂಡ್ಲಿ ಸಂಶೋಧನಾ ಕೇಂದ್ರ ಸ್ಥಾಪಿಸಿ, ಅವರ ಸಂಚಾಲಕತ್ವದಲ್ಲಿ ಮುನ್ನೆಡಿಸಿಕೊಂಡು ಹೋಗುವ ಸಂಸ್ಥೆಗಳಿಗೆ ಬಹಿರಂಗ ಮನವಿ ಮಾಡಲಾಗಿದೆ.

ತುಮಕೂರು ನಗರ ವಿಧಾನ ಸಭಾ ಕ್ಷೇತ್ರದಲ್ಲಿ ಒಂದು ಲಕ್ಷ ಗಿಡ ಹಾಕುವ, ಶ್ರೀ ಜಿ.ಎಸ್.ಬಸವರಾಜ್ ರವರ ಕನಸಿನ ‘ಹಸಿರು ತುಮಕೂರು-3’ ಆಂದೋಲನದೊಂದಿಗೆ ಚಾಲನೆ ನೀಡಬೇಕಾಗಿದೆ. ಈಗಾಗಲೇ ಪಿಪಿಪಿ ಯೋಜನೆಯಡಿಯಲ್ಲಿ ಗಿಡಗಳನ್ನು ಹಾಕಲು ಪೂರ್ವಭಾವಿಯಾಗಿ ಶ್ರೀ ಜಿ.ಬಿ.ಜ್ಯೋತಿಗಣೇಶ್‍ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಸೂಕ್ತ ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಲು ಅರಣ್ಯ ಇಲಾಖೆಗೆ ಸೂಚಿಸಲಾಗಿದೆ.

ಅರಣ್ಯ ಇಲಾಖೆಯ ಡಿಎಫ್‍ಓ ಶ್ರೀಮತಿ ಅನುಪಮರವರೊಂದಿಗೂ ಚರ್ಚೆ ನಡೆಸಲಾಗಿದೆ. ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ, ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿ(ಬಿಎಂಸಿ), ಈ ಬಗ್ಗೆ ದೇಶದ ಎಲ್ಲಾ ಸ್ಥಳೀಯ ಸಂಸ್ಥೆಗಳ ಬಿಎಂಸಿ ಗಿಂತ ಭಿನ್ನವಾಗಿ ಕಾರ್ಯಾರಂಭ ಮಾಡಿದೆ. ಪಾಲಿಕೆ ಆಯುಕ್ತರಾದ ಶ್ರೀ ಯೋಗಾನಂದ್ ರವರು ಹಾಗೂ ಟೂಡಾ ಆಯುಕ್ತರಾದ ಶ್ರೀ ಗೋಪಾಲ್ ಜಾಧವ್ ರವರೊಂದಿಗೂ ಚರ್ಚೆ ನಡೆಸಲಾಗಿದೆ.

ಅತ್ಯುತ್ತಮವಾದ ಹೆಸರು ಆಯ್ಕೆ ಮಾಡಿ ಸೂಚಿಸುವುದರ ಜೊತೆಗೆ, ಉತ್ತಮ ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಿ ನೀಡುವವರಿಗೆ  ಐದು ಸಾವಿರ ನಗದು ಬಹುಮಾನ’ ನೀಡಲು ಯೋಚಿಸಲಾಗಿದೆ. 

  1. ತುಮಕೂರು ನಗರ ವಿಧಾನಸಭಾ ಕೇತ್ರ ಅಧ್ಯಯನ ಪೀಠ
  2. ತುಮಕೂರು ಸ್ಮಾರ್ಟ್ ಸಿಟಿ – 2022 ರಿಂದ 2047
  3. ತುಮಕೂರು ಸ್ಮಾರ್ಟ್ ಸಿಟಿ – ಜೈ ಅನುಸಂಧಾನ್ 2047
  4. ತುಮಕೂರು ಸ್ಮಾರ್ಟ್ ಸಿಟಿ – ನೇಚರ್ ಈಸ್ ಗಾಡ್
  5. ತುಮಕೂರು ಸ್ಮಾರ್ಟ್ ಸಿಟಿ – ಬಯೋಡೈವರ್ಸಿಟಿ ಹಗೇವು
  6. ತುಮಕೂರು ಸ್ಮಾರ್ಟ್ ಸಿಟಿ – ಗ್ರೀನ್ ಬ್ಯಾಂಕ್
  7. ತುಮಕೂರು ಸ್ಮಾರ್ಟ್ ಸಿಟಿ – ಪಬ್ಲಿಕ್ ಟಾಸ್ಕ್ ಪೋರ್ಸ್
  8. ತುಮಕೂರು ಸ್ಮಾರ್ಟ್ ಸಿಟಿ –  ಮೌಲ್ಯಮಾಪನ ಕೇಂದ್ರ.
  9. ತುಮಕೂರು ಸ್ಮಾರ್ಟ್ ಸಿಟಿ – ಮುಂದೇನು.

ಅಥವಾ ತಾವುಗಳು ಸೂಚಿಸುವ, ಉತ್ತಮವಾದ ಹೆಸರು ಇಡಲು ಅಲೋಚನೆ ನಡೆಸಲಾಗಿದೆ. ಈ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಲಹೆಗಳನ್ನು ಪಡೆಯುವ ಪ್ರಕ್ರೀಯೆ ಆರಂಭವಾಗಿದೆ.