TUMKURU: SHAKTHI PEETA FOUNDATION
ತುಮಕೂರು ಜಿಲ್ಲೆಯ ಸಮಗ್ರ ವಿದ್ಯುತ್ ಯೋಜನೆಗಳ ಬಗ್ಗೆ ಇಂದು (03.05.2022) ತುಮಕೂರಿನಲ್ಲಿ ಸಂಸದರಾದ ಶ್ರೀ ಜಿ.ಎಸ್.ಬಸವರಾಜ್ ರವರ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಯಲಿದೆ.
ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ರೀಸಿವಿಂಗ್ ಸ್ಟೇಷನ್, ಎಂ.ಯು.ಎಸ್.ಎಸ್, ವಿದ್ಯತ್ ಲೈನ್‍ಗಳು, ಕೇಂದ್ರ ಸರ್ಕಾರದ ಯೋಜನೆಗಳು, ಹೀಗೆ ಹಲವಾರು ಯೋಜನೆಗಳ ಬಗ್ಗೆ ಚರ್ಚೆ ನಡೆಯಲಿದೆ.
ಈ ಸಭೆಯಲ್ಲಿ ಕೆಳಕಂಡ ಮಹತ್ವದ ನಿರ್ಣಯ ಮಾಡಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆಯ ಗಮನ ಸೆಳೆಯಲು ಚಿಂತನೆ ನಡೆಸಲಾಗಿದೆ.
ರೈತರು ತಮ್ಮ ಜಮೀನುಗಳಲ್ಲಿ ಬೋರ್‍ವೆಲ್ ಕೊರೆಸಲು ಸುಮಾರು 6 ರಿಂದ 8 ಲಕ್ಷಗಳವರೆಗೂ ವೆಚ್ಚಮಾಡುತ್ತಿದ್ದಾರೆ. ಒಂದು ಬೋರ್ ವೆಲ್ ನಿಂದ ಸುಮಾರು 5 ಜನರಿಗೆ ಉದ್ಯೋಗ ದೊರೆಯಲಿದೆ. ದೇಶಕ್ಕೆ ಅನ್ನ ಬೆಳೆಯುತ್ತಾನೆ. ಸ್ವಾಭಿಮಾನಿಯಾಗಿ ಜೀವನ ಸಾಗಿಸುತ್ತಾರೆ.
ರೈತರನ್ನು ಲೋಕಲ್ ಇನ್ವೆಸ್ಟರ್ ಎಂದು ಸರ್ಕಾರಗಳು ಪರಿಗಣಿಸಿ, ಬೋರ್‍ವೆಲ್ ಕೊರೆದ ಒಂದು ವಾರದೊಳಗೆ ಟಿಸಿ ಹಾಗೂ ವಿದ್ಯುತ್ ಅಳವಡಿಸುವ ಯೋಜನೆ ಜಾರಿಗೊಳಿಸಲು. ಪಿಪಿಪಿ ಮಾದರಿ ಅಥವಾ ಯಾವುದೇ ಮಾದರಿಯ ಯೋಜನೆ ರೂಪಿಸಲು ಪ್ರಸ್ತಾವನೆ ಸಲ್ಲಿಸುವುದು.
ವಿದ್ಯುತ್ ಲೈನ್‍ಗಳು ಹಾದು ಹೋಗುವ ಜಮೀನುಗಳನ್ನು ಭೂಸ್ವಾಧಿನ ಪಡಿಸಿಕೊಳ್ಳುವುದು. ಇದೊಂದು ಯಾವುದೋ ಓಬಿರಾಯನ ಕಾಲದ ನಿಯಮದಿಂದ ಬಹಳಷ್ಟು ರೈತರಿಗೆ ತೊಂದರೆ ಆಗಲಿದೆ. ಈ ಎರಡು ಪ್ರಸ್ತಾವನೆಗಳು ರಾಷ್ಟ್ರ ಮಟ್ಟದಲ್ಲಿ ಚರ್ಚೆ ನಡೆಯುವಂತಾ ಪ್ರಸ್ತಾವನೆಗಳಾಗಿವೆ.
ನಿಮ್ಮ ಊರಿನ, ಗ್ರಾಮಪಂಚಾಯಿತಿ/ಸ್ಥಳೀಯ ನಗರ ಸಂಸ್ಥೆಗಳ ಮಟ್ಟದ, ವಿಧಾನಸಭಾ ಕ್ಷೇತ್ರದ, ತುಮಕೂರು ಜಿಲ್ಲಾ ಮಟ್ಟದ, ರಾಜ್ಯ ಮಟ್ಟದ ಹಾಗೂ ರಾಷ್ಟ್ರ ಮಟ್ಟದ ವಿದ್ಯುತ್ ಇನ್ನೋವೇಟೀವ್ ಐಡಿಯಾಗಳಿದ್ದಲ್ಲಿ ಲಿಖಿತವಾಗಿ ಕಳುಹಿಸಲು ಓದುಗರಿಗೆ ಬಹಿರಂಗ ಮನವಿ.
ರೈತರು ಹಾಗೂ ಕೈಗಾರಿಕೋಧ್ಯಮಿಗಳು ಸಹ ವಿದ್ಯುತ್ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಲು ಮನವಿ. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಗಮನ ಸೆಳೆಯಲು ಆಂದೋಲನ ರೂಪಿಸಲು ಚಿಂತನೆ ನಡೆಸಲಾಗಿದೆ.